ಐಸೋಲೇಷನ್ ನಲ್ಲಿ ವನಿಂದು ಹಸರಂಗ.. ಟಿ-20 ಸರಣಿಯಿಂದ ಔಟ್..!
ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಅವರು ಭಾರತ ವಿರುದ್ಧದ ಟಿ-20 ಸರಣಿಗೆ ಅಲಭ್ಯರಾಗಿದ್ದಾರೆ.
ಕೋವಿಡ್ ಸೋಂಕಿನಿಂದ ಇನ್ನೂ ಕೂಡ ಚೇತರಿಸಿಕೊಳ್ಳದ ಹಸರಂಗ ಅವರು ಸದ್ಯ ಐಸೋಲೇಷನ್ ನಲ್ಲಿದ್ದಾರೆ.
ವನಿಂದು ಹಸರಂಗ ಅವರು ಐಸೋಲೇಷನ್ ನಲ್ಲಿದ್ದಾರೆ. ಆರ್ ಎ ಟಿ ಟೆಸ್ಟ್ ನಲ್ಲಿ ಮತ್ತೆ ಪಾಸಿಟಿವ್ ರಿಪೋರ್ಟ್ ಬಂದಿದೆ. ಹಾಗೇ ಆರ್ ಟಿಪಿಸಿಆರ್ ರಿಪೋರ್ಟ್‍ನಲ್ಲೂ ಪಾಸಿಟಿವ್ ಬಂದಿದೆ ಎಂದು ತಿಳಿದು ಬಂದಿದೆ.
ಕಳೆದ ಫೆಬ್ರವರಿ 15ಂದು ಹಸರಂಗ ಅವರಿಗೆ ಮೊದಲ ಬಾರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು.
ಹೀಗಾಗಿ ಫೆಬ್ರವರಿ 24ರಿಂದ ಆರಂಭವಾಗುವ ಟಿ-20 ಸರಣಿಗೆ ಲಭ್ಯರಾಗುತ್ತಿಲ್ಲ. Ruled out of India series, SL’s Hasaranga in isolation
ಟೀಮ್ ಇಂಡಿಯಾ ವಿರುದ್ಧ ಶ್ರೀಲಂಕಾ ತಂಡ ಮೂರು ಟಿ-20 ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯ ಫೆಬ್ರವರಿ 24ರಂದು ನಡೆದ್ರೆ, ಎರಡು ಮತ್ತು ಮೂರನೇ ಪಂದ್ಯಗಳು ಫೆಬ್ರವರಿ 26 ಮತ್ತು 27ರಂದು ನಡೆಯಲಿದೆ.
ನಂತರ ಮಾರ್ಚ್ 4ರಿಂದ ಮೊಹಾಲಿಯಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯ ಮಾರ್ಚ್ 12ರಿಂದ ಬೆಂಗಳೂರಿನಲ್ಲಿ ನಡೆಯಲಿದೆ.
ಇನ್ನು ವನಿಂದು ಹಸರಂಗ ಅವರು ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದಾರೆ. ಆರ್ ಸಿಬಿ ತಂಡ ಹಸರಂಗ ಅವರನ್ನು 10.75 ಲಕ್ಷ ರೂಪಾಯಿಗೆ ಖರೀದಿ ಮಾಡಿತ್ತು.