ನ್ಯೂಜಿಲೆಂಡ್ನ ಗ್ರೇಗ್ ಬಾರ್ಕ್ಲಿ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಮತ್ತೆ ಆಯ್ಕೆಯಾಗಿದ್ದಾರೆ.
ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷರಾಗಿ ತವೆಂಗ್ವಾ ಮುಕುಹಲಾನಿ ಚುನಾವಣಾ ಪ್ರಕ್ರಿಯಿಂದ ಹಿಂದೆ ಸರಿದ ಕಾರಣ ಗ್ರೇಗ್ ಬಾರ್ಕ್ಲಿ ಸುಲಭವಾಗಿ ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದರು. ಮುಂದಿನ 2 ವರ್ಷಗಳ ಕಾಲ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇದಕ್ಕೂ ಮೊದಲು 2020ರಲ್ಲಿ ಐಸಿಸಿ ಚುನಾವಣೆಯಲ್ಲಿ ಗೆದ್ದಿದ್ದರು.
ಶನಿವಾರ ನಡೆದ ಐಸಿಸಿ ತ್ರೈಮಾಸಿಕ ಸಭೆಯಲ್ಲಿ ವಿದ್ಯುನ್ಮಾನ ಮತದಾನದ ಪ್ರಕ್ರಿಯೆಯಲ್ಲಿ ಟೆಸ್ಟ್ ಆಡುವ 12 ಪೂರ್ಣ ಸದಸ್ಯರು, ಮೂರು ಅಸೋಸಿಯೇಟ್ ದೇಶಗಳು ಮತ್ತು ಸ್ವತಂತ್ರ ಮಹಿಳಾ ನಿರ್ದೇಶಕಿ (ಪೆಪ್ಸಿಕೊದ ಇಂದ್ರಾ ನೊಯಿ) ಸೇರಿ 16 ನಿರ್ದೇಶಕರ ಮಂಡಳಿಗಳು ಭಾಗವಹಿಸಿದ್ದರು.
ಈ ಮತದಾನದಲ್ಲಿಜಿಂಬಾಬ್ವೆ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಟ್ವೆಂಗ್ವಾ ಮುಕುಹಲಾನಿ ಬಾರ್ಕ್ಲೆ ವಿರುದ್ಧ ಯಾವುದೇ ಅಭ್ಯಾರ್ಥಿಗಳನ್ನು ನಿಲ್ಲಿಸದೇ ಎದುರಾಳಿಯ ದಾರಿಯನ್ನು ಸುಲಭ ಮಾಡಿಕೊಟ್ಟರು.
ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗನಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಐಸಿಸಿ ಮಂಡಳಿಯ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸಿತು.