ಐಸಿಸಿ ಪ್ರಶಸ್ತಿ – ಶಾಹೀನ್ ವರ್ಷದ ಐಸಿಸಿ ಆಟಗಾರ.. ಏಕದಿನ ಕ್ರಿಕೆಟ್ ನಲ್ಲಿ ಬಾಬರ್, ಟೆಸ್ಟ್ ಕ್ರಿಕೆಟ್ ನಲ್ಲಿ ರೂಟ್ ಗೆ ಪ್ರಶಸ್ತಿ
ಐಸಿಸಿ ವರ್ಷದ ಪ್ರಶಸ್ತಿಗಳು ಪ್ರಕಟಗೊಂಡಿವೆ. ಐಸಿಸಿ ವರ್ಷದ ಮಹಿಳಾ ಆಟಗಾರ್ತಿಯಾಗಿ ಭಾರತದ ಸ್ಮøತಿ ಮಂದಾನ ಅವರು ಪಡೆದುಕೊಂಡಿದ್ದಾರೆ.
ಇನ್ನು ಪುರುಷರ ವಿಭಾಗದಲ್ಲಿ ಐಸಿಸಿ ವರ್ಷದ ಆಟಗಾರನಾಗಿ ಪಾಕಿಸ್ತಾನದ ಶಾಹೀನ್ ಆಫ್ರಿದಿ ಆಯ್ಕೆಯಾಗಿದ್ದಾರೆ.
ಮೂರು ಮಾದರಿಯ ಕ್ರಿಕೆಟ್ ನಲ್ಲೂ ಶಾಹೀನ್ ಆಫ್ರಿದಿ ಅವರು ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ಅದರಲ್ಲೂ ಟಿ-20 ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಅಮೋಘವಾದ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದಾರೆ.
ICC Awards: Root Test player of the year; Babar bags ODI award
ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ನಾಯಕ ಜಾಯ್ ರೂಟ್ ವರ್ಷದ ಟೆಸ್ಟ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಹಾಗೇ ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಮ್ ಅವರು ವರ್ಷದ ಏಕದಿನ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ್ತಿ ಲಿಝೆಲ್ ಲೀ ಅವರು ವರ್ಷದ ಏಕದಿನ ಕ್ರಿಕೆಟ್ ನ ಮಹಿಳಾ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.
ವರ್ಷದ ಐಸಿಸಿ ಅಂಪೈರ್ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ಮರೈಸ್ ಎರಾಮಸ್ ಅವರು ಗಿಟ್ಟಿಸಿಕೊಂಡಿದ್ದಾರೆ. ಇದು ಮರೈಸ್ ಅವರಿಗೆ ಮೂರನೇ ಬಾರಿ ಒಲಿದು ಬಂದಿದೆ. ಈ ಹಿಂದೆ 2016 ಮತ್ತು 2017ರಲ್ಲಿ ವರ್ಷದ ಅಂಪೈರ್ ಆಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.