IPL auction- Virat kohli – ಅದೊಂದು ಅದ್ಭುತ ನೆನಪು… ಆರ್ ಸಿಬಿ ಬಾಂಧವ್ಯ ನೆನಪಿಸಿಕೊಂಡ ವಿರಾಟ್ ಕೊಹ್ಲಿ..!
ವಿರಾಟ್ ಕೊಹ್ಲಿ ಮತ್ತು ಅರ್‍ಸಿಬಿ ನಡುವಿನ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. 2008ರಿಂದ ಇಲ್ಲಿಯವರೆಗೆ ವಿರಾಟ್ ಕೊಹ್ಲಿ ಆರ್ ಸಿಬಿ ತಂಡದ ಅವಿಭಾಜ್ಯ ಭಾಗವಾಗಿದ್ದಾರೆ.
ಇದೀಗ 15ನೇ ಬಾರಿ ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ಪರ ಕಣಕ್ಕಿಳಿಯುತ್ತಿರುವ ವಿರಾಟ್ ಕೊಹ್ಲಿ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. 2013ರಿಂದ 2021ರವರೆಗೆ ಆರ್ ಸಿಬಿ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಈ ಬಾರಿಯ ತಂಡಕ್ಕೆ ನಾಯಕನಲ್ಲ.
ಅಷ್ಟೇ ಅಲ್ಲ, ಮೂರು ಬಾರಿ ಫೈನಲ್ ಗೆ ಎಂಟ್ರಿಯಾಗಿದ್ರೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ನೋವು, ಬೇಸರ, ನಿರಾಸೆ ವಿರಾಟ್ ಮನದಲ್ಲಿದೆ. ಈ ಬಾರಿಯ ಟೂರ್ನಿಯಲ್ಲಿ ಓರ್ವ ಬ್ಯಾಟರ್ ಆಗಿ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಬೇಕು ಎಂಬ ಹಠದಲ್ಲಿದ್ದಾರೆ ಮಾಜಿ ನಾಯಕ ವಿರಾಟ್ ಕೊಹ್ಲಿ.
ಈ ನಡುವೆ ವಿರಾಟ್ ಕೊಹ್ಲಿ ಅವರು ಆರ್ ಸಿಬಿ ತಂಡದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಆರ್ ಸಿಬಿ ತಂಡಕ್ಕೆ ನಾನು ಹೇಗೆ ಅಯ್ಕೆಯಾಗಿದ್ದೆ. ಆರ್ ಸಿಬಿ ತಂಡದ ಜೊತೆಗೆ ಮೊದಲು ಮಾಡಿಕೊಂಡ ಒಪ್ಪಂದದ ಬಗ್ಗೆಯೂ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.
I remember the day…’: Virat Kohli recalls crazy IPL auction in 2008
ನನಗಿನ್ನು ನೆನಪಿದೆ. ಅದು 2008. ನಾವು ಮಲೇಶಿಯಾದಲ್ಲಿ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದ್ದೇವು. ಆಗ ಚೊಚ್ಚಲ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಭಾರತ ತಂಡವನ್ನು ಪ್ರತಿನಿಧಿಸದ ಆಟಗಾರರನ್ನು ಎಷ್ಟು ಮೊತ್ತಕ್ಕೆ ಆಯ್ಕೆ ಮಾಡಬಹುದು ಎಂಬ ನಿರ್ಬಂದವನ್ನು ನಾನು ಮೊದಲ ಬಾರಿ ಕೇಳಿದ್ದೆ. ಆದ್ರೆ ಆ ನಂತರ ನನಗೆ ನೀಡಿದ ಮೊತ್ತವನ್ನು ನೋಡಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಹಾಗೇ ನೋಡಿದ್ರೆ ದೆಹಲಿ ಫ್ರಾಂಚೈಸಿ ಕೂಡ ನನ್ನ ಬಗ್ಗೆ ಒಲವು ವ್ಯಕ್ತಪಡಿಸಿತ್ತು ಅಂತ ಕೆಲವರಿಂದ ತಿಳಿದುಕೊಂಡಿದ್ದೆ. ಆದ್ರೆ ದೆಹಲಿ ತಂಡಕ್ಕೆ ವೇಗದ ಬೌಲರ್ ನ ಅವಶ್ಯಕತೆ ಇತ್ತು. ಹೀಗಾಗಿ ಪ್ರದೀಪ್ ಸಾಂಗ್ವಾನ್ ಜೊತೆ ದೆಹಲಿ ತಂಡ ಒಪ್ಪಂದ ಮಾಡಿಕೊಂಡಿತ್ತು. ಪ್ರದೀಪ್ ಸಾಂಗ್ವನ್ ಕೂಡ 19 ವಯೋಮಿತಿ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಒಟ್ಟಿನಲ್ಲಿ ಸದ್ಯ ವಿರಾಟ್ ಕೊಹ್ಲಿ ತಂಡದ ಅನುಭವಿ ಆಟಗಾರನಾಗಿ ಇದೀಗ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯನ್ನು ಎದುರು ನೋಡುತ್ತಿದ್ದಾರೆ. ಹಾಗೇ ಆರ್ ಸಿಬಿ ತಂಡಕ್ಕೆ ಮತ್ತೆ ನಾಯಕನಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.