IPL 2022 ಕೆ.ಎಲ್. ರಾಹುಲ್ ಅಂತರಂಗ.. ವಿರಾಟ್ ಕೊಹ್ಲಿ ಬಹಿರಂಗ…!

ನೀವು ಅಂದುಕೊಳ್ಳಬಹುದು.. ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ ಆತ್ಮೀಯ ಸ್ನೇಹಿತರು ಅಂತ. ಆದ್ರೆ ನಿಮ್ಮ ಊಹೆ ತಪ್ಪಾಗುತ್ತದೆ. ಯಾಕಂದ್ರೆ ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಜೊತೆಯಾಗಿಯೇ ಟೀಮ್ ಇಂಡಿಯಾದಲ್ಲಿ ಆಡಿದ್ದಾರೆ. ಜೊತೆಯಾಗಿ ಆರ್ ಸಿಬಿ ಪರ ಆಡಿದ್ದಾರೆ. ಪರಸ್ಪರ ವಿರುದ್ಧವಾಗಿಯೂ ಆಡಿದ್ದಾರೆ. ಆದ್ರೆ ವಿರಾಟ್ ಮತ್ತು ಕೆ.ಎಲ್. ರಾಹುಲ್ ಆಪ್ತ ಸ್ನೇಹಿತರಲ್ಲ. ಜಸ್ಟ್ ಫ್ರೆಂಡ್ಸ್ ಅಷ್ಟೇ.
ಹೌದು, ಈ ವಿಚಾರವನ್ನು ಸ್ವತಃ ವಿರಾಟ್ ಕೊಹ್ಲಿಯೇ ಹೇಳಿಕೊಂಡಿದ್ದಾರೆ. ಕೆ.ಎಲ್. ರಾಹುಲ್ ಅವರ ಆಟದ ವೈಖರಿಯನ್ನು ನೋಡಿ ವಿರಾಟ್ ಕೊಹ್ಲಿ ಮೆಚ್ಚಿಕೊಂಡಿದ್ದಾರೆ.
ನಾನು ಮತ್ತು ರಾಹುಲ್ ಹೆಚ್ಚು ಸಮಯ ಜೊತೆಯಾಗಿ ಕಾಲ ಕಳೆದಿರಲಿಲ್ಲ್ಲ. ನಾನು 2014ರ ಆಸ್ಟ್ರೇಲಿಯಾ ಸರಣಿಯಲ್ಲಿ ಅವರನ್ನುನ್ನು ನೋಡಿದ್ದೆ. ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದಾಗ ನನಗೆ ಅನ್ನಿಸಿದ್ದು ಹೀಗೆ. ವಾಹ್ಹ್, ರಾಹುಲ್ ಆಟದ ಬಗ್ಗೆ ಗಂಭೀರವಾಗಿದ್ದಾರೆ. ಹಲವು ಅಚ್ಚರಿಗಳನ್ನು ಮಾಡಲಿದ್ದಾರೆ. ಅಲ್ಲದೆ ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಮುಖ್ಯವಾಗಿ ಅವರ ಬಾಡಿ ಲಾಂಗ್ವೇಜ್ ಮತ್ತು ಅವರಲ್ಲಿದ್ದ ಆತ್ಮವಿಶ್ವಾಸವನ್ನು ನೋಡಿ ನಾನು ಪ್ರಭಾವಿತನಾಗಿದ್ದೆ ಎಂದು ಕೆ.ಎಲ್. ರಾಹುಲ್ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕೆ.ಎಲ್. ರಾಹುಲ್ ಅವರು 2013ರಲ್ಲಿ ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದರು. ನಂತರ ಅವರು ಸನ್ ರೈಸರ್ಸ್ ಹೈದ್ರಬಾದ್ ತಂಡದ ಪರ ಆಡಿದ್ದರು. ಬಳಿಕ 2016ರಲ್ಲಿ ಮತ್ತೆ ಆರ್ ಸಿಬಿ ತಂಡದ ಪರ ಆಡಿದ್ದರು. 14 ಪಂದ್ಯಗಳಲ್ಲಿ 397 ರನ್ ಕೂಡ ದಾಖಲಿಸಿದ್ದರು. ಆ ಋತುವಿನಲ್ಲಿ ಆರ್ ಸಿಬಿ ಪರ ಗರಿಷ್ಠ ರನ್ ದಾಖಲಿಸಿದ್ದ ಮೂರನೇ ಆಟಗಾರನಾಗಿದ್ದರು.

ಕೆ.ಎಲ್. ರಾಹುಲ್ ಟಿ-20 ಸ್ಪೇಷಲ್ ಆಟಗಾರ ಅಂತ ಅನ್ನಿಸುವುದಿಲ್ಲ. ಆದ್ರೂ ನನಗೆ ನೆನಪಿಗೆ ಬರುವುದು ಕೆ.ಎಲ್. ರಾಹುಲ್ ಮತ್ತು ಯುಜುವೇಂದ್ರ ಚಾಹಲ್. 2013ರಲ್ಲಿ ಮಯಾಂಕ್ ಅಗರ್ ವಾಲ್, ಕರುಣ್ ನಾಯರ್ ಜೊತೆ ರಾಹುಲ್ ಕೂಡ ಆರ್ ಸಿಬಿ ತಂಡದಲ್ಲಿದ್ದರು. ಆದ್ರೆ 2015ರಲ್ಲಿ ಅವರು ಎಸ್ ಆರ್ ಎಚ್ ತಂಡದ ಪರ ಆಡುತ್ತಿದ್ದರು.
ಆಗ ಆರ್ ಸಿಬಿ ಮ್ಯಾನೇಜರ್ ಆಗಿದ್ದ ಅವಿನಾಶ್ ವೈದ್ಯ ಅವರು ರಾಹುಲ್ ಜೊತೆ ಸಂಪರ್ಕದಲ್ಲಿದ್ದರು. ಹೀಗಾಗಿ ಅವಿನಾಶ್ ವೈದ್ಯ ಅವರು ರಾಹುಲ್ ಅವರನ್ನು ಮತ್ತೆ ಆರ್ ಸಿಬಿಗೆ ಕರೆತರುವ ಬಗ್ಗೆ ನನ್ನ ಜೊತೆ ಮಾತುಕತೆ ನಡೆಸಿದ್ದರು ಎಂಬ ವಿಚಾರವನ್ನು ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ.
ಸನ್ ರೈಸರ್ಸ್ ಹೈದ್ರಬಾದ್ ತಂಡದಲ್ಲಿದ್ದಾಗ ಕೆ.ಎಲ್. ರಾಹುಲ್ ಗೆ ಹೆಚ್ಚು ಅವಕಾಶಗಳು ಸಿಗುತ್ತಿರಲಿಲ್ಲ. ಸಿಕ್ಕಿದ್ರೂ ಕೂಡ ಒತ್ತಡಕ್ಕೆ ಸಿಲುಕಿ ಆಡುತ್ತಿದ್ದರು ಎಂದು ನನಗೆ ಅನ್ನಿಸುತ್ತಿತ್ತು. ಅಲ್ಲದೆ ರಾಹುಲ್ ಅದ್ಭುತ ಆಟಗಾರ. ಅದ್ಭುತ ಪ್ರತಿಭಾವಂತ. ರಾಹುಲ್ ಗೆ ಅವಕಾಶ ನೀಡಿದ್ರೆ ಅತ್ಯುತ್ತಮ ಪ್ರದರ್ಶನ ನೀಡಬಹುದು. ಅದರಲ್ಲೂ ಆರ್ ಸಿಬಿ ಪರ ಆಡಿದ್ರೆ ತವರಿನ ಪ್ರೇಕ್ಷಕರ ಎದುರು ಆಡುತ್ತಿದ್ದೇನೆ ಎಂಬ ವಿಶ್ವಾಸವಿರುತ್ತದೆ. ಎಬಿಡಿ, ನಾನು, ಕ್ರಿಸ್ ಗೇಲ್ ಜೊತೆ ರಾಹುಲ್ ಜವಾಬ್ದಾರಿಯುತವಾಗಿ ಆಡಿದ್ರೆ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ನನ್ನ ಊಹೆ ತಪ್ಪಾಗಲಿಲ್ಲ. ಕೆ.ಎಲ್.

ರಾಹುಲ್ ಟಿ-20 ಕ್ರಿಕೆಟ್‍ನ ಸ್ಪೇಷಲಿಸ್ಟ್ ಆಟಗಾರನಾಗಿ ರೂಪುಗೊಂಡರು ಅಂತ ಹೇಳ್ತಾರೆ ವಿರಾಟ್ ಕೊಹ್ಲಿ.
ಆದ್ರೆ 2017ರಲ್ಲಿ ಭುಜ ನೋವಿನಿಂದ ಕೆ.ಎಲ್.ರಾಹುಲ್ ಆಡಲಿಲ್ಲ. 2016ರಲ್ಲಿ ಆರ್ ಸಿಬಿ ಫೈನಲ್ ಪ್ರವೇಶಿಸಿತ್ತು. ಇದರಲ್ಲಿ ಕೆ.ಎಲ್. ರಾಹುಲ್ ಕೊಡುಗೆಯೂ ಇದೆ. ನಂತರ 2018ರಲ್ಲಿ ಕೆ.ಎಲ್. ರಾಹುಲ್ ಪಂಜಾಬ್ ಕಿಂಗ್ಸ್ ತಂಡವನ್ನು ಸೇರಿಕೊಂಡ್ರು. ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿದ್ದಾರೆ.
ಕೆ.ಎಲ್. ರಾಹುಲ್ ಆರ್ ಸಿಬಿ ಬಿಟ್ಟ ನಂತರ ನನ್ನ ಜೊತೆ ಹೆಚ್ಚು ಒಟನಾಟವಿರಲಿಲ್ಲ. ಆದ್ರೆ ರಾಹುಲ್ ಅವರ ಆಟವನ್ನು ಗಮನಿಸುತ್ತಾ ಬಂದಿದ್ದೇನೆ. ದೇಸಿ ಕ್ರಿಕೆಟ್ ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಆರ್ ಸಿಬಿ ಪರ ಆಡುತ್ತಿದ್ದಾಗ ರಾಹುಲ್ ಚಿಕ್ಕವರು. ನಾನು ಆಗಲೇ ಟೀಮ್ ಇಂಡಿಯಾದಲ್ಲಿ ಆಡುತ್ತಿದ್ದೆ. ಆರ್ ಸಿಬಿ ತಂಡದ ಪರ ಜೊತೆಯಾಗಿ ಆಡುತ್ತಿದ್ದೇವು. ಆದ್ರೆ ತುಂಬಾ ಆತ್ಮೀಯತೆ ಏನು ಇರಲಿಲ್ಲ ಎಂದು ಹೇಳ್ತಾರೆ ವಿರಾಟ್ ಕೊಹ್ಲಿ.