Mexican Open- ನಂಬರ್ ವನ್ ಆಟಗಾರನಿಗೆ ಆಘಾತ- ಫೈನಲ್ ನಲ್ಲಿ ನಡಾಲ್ ಮತ್ತು ನೊರಿಯೆ ಹೋರಾಟ
ಸ್ಪೇನ್ ನ ಗೂಳಿ ರಫೆಲ್ ನಡಾಲ್ ಅವರು ಮೆಕ್ಸಿಕನ್ ಓಪನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಸೆಮಿಫೈನಲ್ ನಲ್ಲಿ ರಫೆಲ್ ನಡಾಲ್ ಅವರು 6-3, 6-3 ನೇರ ಸೆಟ್ ಗಳಿಂದ ರಷ್ಯದ ಡೇನಿಲ್ ಮೆಡ್ವೆಡೇವ್ ಅವರನ್ನು ಪರಾಭವಗೊಳಿಸಿದ್ರು. Mexican Open: Rafael Nadal defeats Daniil Medvedev
ಮೊನ್ನೆ ಮೊನ್ನೆ ವಿಶ್ವದ ನಂಬರ್ ವನ್ ಆಟಗಾರನಾಗಿ ಹೊರಹೊಮ್ಮಿದ್ದ ಡೇನಿಲ್ ಮೆಡ್ವೆಡೇವ್ ಅವರನ್ನು 3-6, 3-6ರಿಂದ ರಫೆಲ್ ನಡಾಲ್ ಅವರು ಸೋಲಿಸಿದ್ರು.
ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಗೆ ಡೇನಿಲ್ ಮೆಡ್ವೆಡೇವ್ ಅವರು ತೀವ್ರ ಪೈಪೋಟಿ ಒಡ್ಡಿದ್ದರು. ಆದ್ರೆ ಮೆಕ್ಸಿಕನ್ ಓಪನ್ ನಲ್ಲಿ ಡೇನಿಲ್ ಅವರು ಸುಲಭವಾಗಿ ತಲೆಬಾಗಿದ್ರು.
ಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಅವರು ಕೆಮೆರೂನ್ ನೊರಿಯೆ ಅವರನ್ನು ಎದುರಿಸಲಿದ್ದಾರೆ.
35ರ ಹರೆಯದ ರಫೆಲ್ ನಡಾಲ್ ಅವರು 21 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ದುಕೊಂಡು ವಿಶ್ವ ದಾಖಲೆ ಬರೆದಿದ್ದಾರೆ. ಸ್ವಿಜರ್ ಲೆಂಡ್ ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜಾಕೊವಿಕ್ ಅವರು ತಲಾ 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಇನ್ನೊಂದು ಸೆಮಿಫೈನಲ್ ನಲ್ಲಿ ಕೆಮರೂನ್ ನೊರಿಯೆ ಅವರು 6-4, 6-4ರಿಂದ ಸ್ಟೆಫಾನೊಸ್ ಸಿಟ್ಸಿಪಸ್ ಅವರನ್ನು ಪರಾಭವಗೊಳಿಸಿದ್ರು.