Hockey World Cup – ಡಿ ಬಣದಲ್ಲಿ ಆಡಲಿರುವ ಭಾರತಕ್ಕೆ ಕಠಿಣ ಸವಾಲು..!

2023ರ ಜನವರಿಯಲ್ಲಿ ನಡೆಯಲಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಡಿ ಬಣದಲ್ಲಿ ಸ್ಥಾನ ಪಡೆದುಕೊಂಡಿದೆ.
ಒರಿಸ್ಸಾದಲ್ಲಿ ಜನವರಿ 13ರಿಂದ ಜನವರಿ 29ರವರೆಗೆ ಟೂರ್ನಿಯು ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ.
ಡಿ ಬಣದಲ್ಲಿರುವ ಭಾರತ, ಸ್ಪೇನ್, ಇಂಗ್ಲೆಂಡ್ ಮತ್ತು ವೇಲ್ಸ್ ತಂಡಗಳ ವಿರುದ್ಧ ಆಡಲಿದೆ. ವಿಶ್ವ ಶ್ರೇಯಾಂಕಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಲ್ಲಿದ್ರೆ, ಇಂಗ್ಲೆಂಡ್ ಆರನೇ ಸ್ಥಾನ ಹಾಗೂ ಸ್ಪೇನ್ ಎಂಟನೇ ಸ್ಥಾನದಲ್ಲಿದೆ. ಆದ್ರೂ ಭಾರತ ಲೀಗ್ ಹಂತದಲ್ಲಿ ಮುನ್ನಡೆ ಸಾಧಿಸಲು ಹರ ಸಾಹಸವನ್ನೇ ಪಡಬೇಕಾಗುತ್ತದೆ.
ಇನ್ನು ಎ ಬಣದಲ್ಲಿ ಆಸ್ಟ್ರೇಲಿಯಾ, ಅರ್ಜೆಂಟಿನಾ, ಫ್ರಾನ್ಸ್ ಮತ್ತು

ಸೌತ್ ಆಫ್ರಿಕಾ ತಂಡಗಳಿವೆ. ಬಿ ¨ಣದಲ್ಲಿ ಬೆಲ್ಜಿಯಂ, ಜರ್ಮನಿ, ಕೊರಿಯಾ ಮತ್ತು ಜಪಾನ್ ತಂಡಗಳು ಹೋರಾಟ ನಡೆಸಲಿವೆ. ಸಿ ಬಣದಲ್ಲಿ ನೆದರ್ಲೆಂಂಡ್, ನ್ಯೂಜಿಲೆಂಡ್, ಮಲೇಶಿಯಾ ಮತ್ತು ಚಿಲಿ ತಂಡಗಳು ಸೆಣಸಾಟ ನಡೆಸಲಿವೆ.
ಅಂದ ಹಾಗೇ ಪುರುಷರ ಹಾಕಿ ವಿಶ್ವ ಕಪ್ ಭಾರತದಲ್ಲಿ ನಡೆಯುತ್ತಿರುವುದು ಇದು ನಾಲ್ಕನೇ ಬಾರಿ. ಅಲ್ಲದೆ ಸತತ ಎರಡನೇ ಬಾರಿ ಆತಿಥ್ಯ ವಹಿಸುತ್ತಿದೆ.