ಟೀಮ್ ಇಂಡಿಯಾದ (Team India) ಶೆಡ್ಯೂಲ್ (Schedule) ಬಗ್ಗೆ ಚರ್ಚೆ ಇರುವುದು ಸಹಜ. ಒಮ್ಮೊಮ್ಮೆ ವಿಶ್ವದ ಬಹುತೇಕ ರಾಷ್ಟ್ರಗಳು ಒಟ್ಟಿಗೆ ಸೇರಿ ಆಡಿದ ಪಂದ್ಯಗಳಿಗಿಂತ ಭಾರತ (India) ಆಡಿದ ಪಂದ್ಯಗಳೇ ಹೆಚ್ಚಿರುತ್ತವೆ. ಏಷ್ಯಾಕಪ್‌ನಲ್ಲಿ ( Asia Cup ) ಕಥೆ ಮುಗಿದ ಮೇಲೆ ಈಗ ಮುಂದಿನ ಸರಣಿ ಯಾವುದು ಅನ್ನುವ ಲೆಕ್ಕಾಚಾರವಿದೆ. ಈ ಸರಣಿಯಲ್ಲಿ ಭಾರತ ಹೇಗಾಡುತ್ತದೆ ಅನ್ನುವುದು ನಿರ್ಣಯವಾಗಲಿದೆ.
ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯ:
ಭಾರತ ಆಸೀಸ್ (Australia) ವಿರುದ್ಧ 3 ಪಂದ್ಯಗಳನ್ನು ಆಡಲಿದೆ. ಆಸ್ಟ್ರೇಲಿಯಾ ಈಗಾಗಲೇ ಬಲಿಷ್ಠ ತಂಡವನ್ನು ವಿಶ್ವಕಪ್‌ಗೆ ಪ್ರಕಟಿಸಿದೆ. ಅದೇ ತಂಡವನ್ನು ಕಾಂಗರೂಗಳು ಭಾರತಕ್ಕೆ ಕಳುಹಿಸುತ್ತಿದೆ. ಹೀಗಾಗಿ ಈ ಸರಣಿ ಸಿಕ್ಕಾಪಟ್ಟೆ ಟಫ್ ಆಗಿರಲಿದೆ. ಭಾರತದ ಎಲ್ಲಾ ಆಟಗಾರರು ಇದರಲ್ಲಿ ಆಡುವುದು ವಿಶ್ವಕಪ್ (T20 World Cup) ದೃಷ್ಟಿಯಿಂದ ಒಳ್ಳೆಯದು.
ಆಸೀಸ್ ಶೆಡ್ಯೂಲ್
* ಸೆಪ್ಟಂಬರ್ 20: ಮೊಹಾಲಿ
* ಸೆಪ್ಟಂಬರ್ 23- ನಾಗ್ಪುರ
* ಸೆಪ್ಟಂಬರ್ 25- ಹೈದ್ರಾಬಾದ್
ಈ ಸರಣಿಯ ಬೆನ್ನಲ್ಲೇ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಟಿ20 (T20I) ಹಾಗೂ ಏಕದಿನ ಸರಣಿ (ODI) ನಡೆಯಲಿದೆ. ಏಕದಿನ ಸರಣಿಯಲ್ಲಿ ಭಾರತದ ಟ್ರಂಪ್ ಕಾರ್ಡ್ ಆಟಗಾರರು ಆಡುವುದು ಸಂದೇಹವಾಗಿದೆ. ಆದರೆ ಟಿ20 ಸರಣಿಯಲ್ಲಿ (Series) ವಿಶ್ವಕಪ್‌ಗೆ ಆಯ್ಕೆಯಾದ ಎಲ್ಲಾ ಆಟಗಾರರು ಆಡಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯ ಸೆಪ್ಟಂಬರ್ 28 ರಂದು ನಡೆದರೆ, ಅಕ್ಟೋಬರ್ 02 ರಂದು 2ನೇ ಹಾಗೂ ಅಕ್ಟೋಬರ್ 04 ರಂದು ಅಂತಿಮ ಟಿ20 ಪಂದ್ಯ ನಡೆಯಲಿದೆ. ಇದಾದ ಬಳಿಕ ಏಕದಿನ ಸರಣಿ ಆರಂಭವಾಗಲಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾದ ಟೈಟ್ ಶೆಡ್ಯೂಲ್ ಪ್ರಾಕ್ಟೀಸ್ ಪ್ರಾಕ್ಟೀಸ್ ಕೊರತೆಯನ್ನು ನೀಗಿಸಿದರೆ, ಮತ್ತೊಂದು ಕಡೆ ಆಟಗಾರರಿಗೆ ಸುಸ್ತು ಹೆಚ್ಚಾಗುವಂತೆ ಮಾಡುತ್ತಿದೆ.