Hockey Men’s World Cup 2023- ಸೆಪ್ಟಂಬರ್ 8ರಂದು ಪೂಲ್ ಡ್ರಾ ಕಾರ್ಯಕ್ರಮ
2023ರ ಪುರುಷರ ಹಾಕಿ ವಿಶ್ವ ಕಪ್ ಟೂರ್ನಿಯ ಪೂಲ್ ಡ್ರಾ ಕಾರ್ಯಕ್ರಮ ಸೆಪ್ಟಂಬರ್ 8ರಂದು ಒರಿಸ್ಸಾದ ಭುಬನೇಶ್ವರದ ಲೋಕ ಸೇವಾ ಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಹಾಕಿ ಇಂಡಿಯಾದ ಪದಾಧಿಕಾರಿಗಳು ಹಾಗೂ ವಿಶ್ವ ಹಾಕಿ ಸಂಸ್ಥೆಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
2023ರ ಜನವರಿ 13ರಿಂದ 29ರವರೆಗೆ ಭುಬನೇಶ್ವರದ ಕಳಿಂಗ ಕ್ರೀಡಾಂಗಣ ಮತ್ತು ರೌರ್ಕೆಲಾದ ಬಿಸ್ರಾ ಮುಂದಾ ಕ್ರೀಡಾಂಗಣಗಳಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ ಆತಿಥೇಯ ಭಾರತ ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸಲಿವೆ. ಏಷ್ಯಾದಿಂದ ಭಾರತ, ಜಪಾನ್, ಮಲೇಶ್ಯಾ ಮತ್ತು ಕೊರಿಯಾ ತಂಡಗಳು ಸ್ಪರ್ಧಿಸಲಿವೆ. ಹಾಗೇ ನೆದರ್ಲೆಂಡ್, ಸ್ಪೇನ್, ಫ್ರಾನ್ಸ್ ಮತ್ತು ವೇಲ್ಸ್, ಬೆಲ್ಜಿಯಂ, ಇಂಗ್ಲೆಂಡ್, ಜರ್ಮನಿ ತಂಡಗಳು ಭಾಗಿಯಾದ್ರೆ, ದಕ್ಷಿಣ ಆಫ್ರಿಕಾ. ಅರ್ಜೆಂಟಿನಾ, ಚಿಲಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.
ಕಳೆದ ಬಾರಿ ಫೈನಲ್ ನಲ್ಲಿ ನೆದರ್ಲೆಂಡ್ ತಂಡವನ್ನು ಮಣಿಸಿದ್ದ ಬೆಲ್ಜಿಯಂ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು. ಆಸ್ಟ್ರೇಲಿಯಾ ತಂಡ ಮೂರನೇ ಸ್ಥಾನ ಪಡೆದುಕೊಂಡಿತ್ತು.