Sports karnataka – ಟಾಪ್ -10 sports news – ಕ್ಯಾಮರಾ ಕಣ್ಣಲ್ಲಿ ನಮ್ಮ ಕ್ರೀಡಾಪಟುಗಳು
ಉಕ್ರೇನ್ ನ ಮಾರ್ಟಾ ಕೊಸ್ಟ್ಯಾಕ್ ಅವರು ಎದುರಾಳಿ ಆಟಗಾರ್ತಿ ಬೆಲರಾಸ್ ನ ವಿಕ್ಟೋರಿಯಾ ಆಝಾರೆಂಕಾ ಜೊತೆ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದ್ದರು. ಪಂದ್ಯ ಗೆದ್ದ ವಿಕ್ಟೋರಿಯಾ ಆಝಾರೆಂಕಾ ಮತ್ತು ಮಾರ್ಟಾ ಕೊಸ್ಟ್ಯಾಕ್ ಪರಸ್ಪರ ರಾಕೆಟ್ ಗಳನ್ನು ಟಚ್ ಮಾಡಿಕೊಂಡಿದ್ದರು.
ಅಮ್ಮನಂತೆ ಮಗಳು… ಗ್ರ್ಯಾಂಡ್ ಸ್ಲ್ಯಾಂ ಮಹಾರಾಣಿ ಸೆರೆನಾ ವಿಲಿಯಮ್ಸ್ ಜೊತೆ ಮಗಳು ಅಲೆಕ್ಸಿಸ್ ಒಲಿಂಪಿಯಾ.. 1999ರ ಯುಎಸ್ ಓಪನ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್ ಅವರ ಹೇರ್ ಸ್ಟೈಲ್ ಅನ್ನು ನೆನಪು ಮಾಡಿದ್ದ ಮಗಳು ಒಲಿಂಪಿಯಾ
ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ನಲ್ಲಿ ವಿಲಿಯಮ್ಸ್ ಸಹೋದರಿಯರಿಗೆ ನಿರಾಸೆ. ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದ ಚಾಂಪಿಯನ್ ಸಿಸ್ಟರ್ಸ್..!
ಯುಎಸ್ ಓಪನ್ ಟೂರ್ನಿಯಲ್ಲಿ ಮೂಗಿಗೆ ಗಾಯ ಮಾಡಿಕೊಂಡ ರಫೆಲ್ ನಡಾಲ್. ರಫೆಲ್ ನಡಾಲ್ ಅವರು ಈ ಬಾರಿಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ
ಮೈದಾನದಲ್ಲೇ ಹಾಂಕಾಂಗ್ ನ ಕಿಂಚಿತ್ ಶಾಹಾ ಅವರು ತನ್ನ ಗರ್ಲ್ ಫ್ರೆಂಡ್ ಗೆ ಪ್ರೊಪೋಸ್ ಮಾಡಿದ್ದು ಹೀಗೆ. ಭಾರತ ವಿರುದ್ಧ ಸೋತ್ರೂ ಹಾಂಕಾಂಗ್ ಆಟಗಾರ ಪ್ರೀತಿಯಲ್ಲಿ ಗೆದ್ದು ಬಿಟ್ಟ..!
ನೀರಜ್ ಚೋಪ್ರಾ. ಕೇವಲ ಜಾವೆಲಿನ್ ಎಸೆತಗಾರ ಮಾತ್ರವಲ್ಲ. ಅಪ್ರತಿಮ ಹಡಲ್ರ್ಸ್ ಓಟಗಾರನಾಗಬಹುದು.. ಅಭ್ಯಾಸದಲ್ಲಿ ನಿರತರಾಗಿರುವ ಭಾರತದ ಬಂಗಾರ ನೀರಜ್ ಚೋಪ್ರಾ
ಬಾಕ್ಸಿಂಗ್ ರಿಂಗ್ ನ ಸಿಂಹಿಣಿ ನಿಖಾತ್ ಝರಿನ್.. ವಿಶ್ವ ಬಾಕ್ಸಿಂಗ್ ಚಾಂಪಿಯನ್ ಷಿಪ್ ಮತ್ತು ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನ ಚಿನ್ನದ ಹುಡುಗಿ ಝರಿನ್ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ಹೀಗೆ..!
ಅಖಿಲ ಭಾರತ ಫುಟ್ ಬಾಲ್ ಫೆಡರೇಷನ್ ನ ಅಧ್ಯಕ್ಷರಾಗಿ ಕಲ್ಯಾಣ್ ಚೌಬೇಯ್ ಅವರು ಆಯ್ಕೆಯಾಗಿದ್ದಾರೆ. ಕಲ್ಯಾಣ್ ಚೌಬೇಯ್ ಅವರು ಭಾರತ ಫುಟ್ ಬಾಲ್ ತಂಡದ ಮಾಜಿ ನಾಯಕ ಹಾಗೂ ಖ್ಯಾತ ಆಟಗಾರ ಭೈಚುಂಗ್ ಭುಟಿಯಾ ಅವರನ್ನು ಸೋಲಿಸಿದ್ದಾರೆ. 33-1 ಮತಗಳಿಂದ ಭುಟಿಯಾ ಸೋತಿದ್ದಾರೆ.
ಸೂರ್ಯ ಕುಮಾರ್ ಯಾದವ್. ಟೀಮ್ ಇಂಡಿಯಾದ ಬುಲೆಟ್ ಬ್ಯಾಟ್ಸ್ ಮೆನ್. ಹೊಸ ಅವಿಷ್ಕಾರಗಳು, ಬಣ್ಣಿಸಲು ಸಾಧ್ಯವಾಗದಂತಹ ಬ್ಯಾಟಿಂಗ್ ಶೈಲಿಯ ಸೂರ್ಯಕುಮಾರ್ ಕ್ರಿಕೆಟ್ ಗ್ರಾಮರ್ ಬುಕ್ ಗಳನ್ನು ಬುಡಮೇಲು ಮಾಡುತ್ತಿರುವ ಬ್ಯಾಟ್ಸ್ ಮೆನ್.
ಇದು ಹಾರ್ದಿಕ್ ಪಾಂಡ್ಯ ಅವರ ಫಿಟ್ ನೆಸ್ ಸಿಕ್ರೇಟ್. ಎರಡು ವರ್ಷಗಳ ಹಿಂದೆ ಬೆನ್ನು ನೋವು. ಆನಂತರ ಶಸ್ತ್ರಚಿಕಿತ್ಸೆ.. ಇದೀಗ ಮತ್ತೆ ಕಮ್ ಬ್ಯಾಕ್. ಟೀಮ್ ಇಂಡಿಯಾದ ಪ್ರಮುಖ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ.a