Hockey: ಹರಿಯಾಣ ಮಣಿಸಿದ ಕರ್ನಾಟಕ ಫೈನಲ್ ಗೆ
ಕರ್ನಾಟಕ ಪುರುಷರ ಹಾಕಿ ತಂಡ, 36 ನೇ ರಾಷ್ಟ್ರೀಯ ಕ್ರೀಡಾಕೂಟದ ಫೈನಲ್ ಹಂತ ಕಂಡಿದೆ. ಸೋಮವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹರಿಯಾಣಾ ತಂಡವನ್ನು 3-1 ಗೋಲುಗಳಿಂದ ಸೋಲಿಸಿತು.
ಪಂದ್ಯದ ಮೊದಲೆರಡು ಕ್ವಾರ್ಟರ್ ಅವಧಿಯಲ್ಲಿ ಎರಡೂ ತಂಡಗಳ ಆಟಗಾರರು ಸಮಬಲ ಪೈಪೋಟಿ ನೀಡಿದ್ದರಿಂದ ಪಂದ್ಯ ತೀವ್ರ ಕುತೂಹಲ ಕೆರಳಿಸಿತು. ಮೊದಲಾವಧಿಯಲ್ಲಿ ಕರ್ನಾಟಕ ತಂಡ ಮೊದಲ ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಅಲ್ಲದೆ ಎದುರಾಳಿ ತಂಡಕ್ಕೆ ಗೋಲು ನೀಡದಂತೆ ತಡೆಯುವಲ್ಲಿ ಸಫಲರಾದರು.
ಎರಡನೇ ಅವಧಿಯಲ್ಲಿ ಹರಿಯಾಣಾ ಹಾಗೂ ಕರ್ನಾಟಕದ ಓರ್ವ ಆಟಗಾರರು ಕ್ರಮವಾಗಿ ಹಳದಿ ಹಾಗೂ ಹಸಿರು ಕಾರ್ಡ್ ಪಡೆದಿದ್ದರಿಂದ ಉಭಯ ತಂಡಗಳು ತಲಾ ಹತ್ತು ಆಟಗಾರರೊಂದಿಗೆ ಆಡಿದವು. ಇದೇ ಅವಧಿಯಲ್ಲಿ ಹರಿಯಾಣ ಗೋಲು ಬಾರಿಸಿ ಮಿಂಚಿದರು. ಪರಿಣಾಮ ಎರಡೂ ತಂಡಗಳು ಸಮಬಲ ಸಾಧಿಸಿದವು.
ಮೂರನೇ ಕ್ವಾರ್ಟರ್ ನಲ್ಲಿ ಎರಡೂ ತಂಡಗಳು ಗೋಲು ಭಾರಿಸುವಲ್ಲಿ ವಿಫಲರಾಗಿದ್ದರಿಂದ ಸಮಬಲದ ಹೋರಾಟ ಕಂಡು ಬಂದಿತು. ನಾಲ್ಕನೇ ಅವಧಿಯಲ್ಲಿ ಕರ್ನಾಟಕ ತಂಡ ಮತ್ತೊಂದು ಗೋಲು ಸಿಡಿಸಿತು. ಪರಿಣಾಮ ಕರ್ನಾಟಕ 2-1ರಿಂದ ಹರಿಯಾಣವನ್ನು ಮಣಿಸಿ ಫೈನಲ್ ಪ್ರವೇಶಿಸಿತು.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡ, ಮಹಾರಾಷ್ಟ್ರ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಚಿನ್ನದ ಪದಕಕ್ಕಾಗಿ ಉತ್ತರಪ್ರದೇಶ, ಕರ್ನಾಟಕ ವಿರುದ್ಧ ಸೆಣಸಾಟ ನಡೆಸಲಿದೆ.
Hockey, Karnataka, Haryana, Final, 36th National Games