ಎದುರಾಳಿ ತಂಡಗಳಿಗೆ ಗೌರವ ಕೊಡೋದು ಸೋಲು ಅಥವಾ ಗೆಲುವುಗಳಿಂದ ಬರುವಂಥದಲ್ಲ ಎಂದು ಟೀಮ್ ಇಂಡಿಯಾದ ಕೇರಂ ಸ್ಪಿನ್ನರ್ ಆರ್.ಅಶ್ವಿನ್ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾಗೆ ತಿರುಗೇಟು ನೀಡಿದ್ದಾರೆ.
ಇತ್ತಿಚೆಗೆ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ, ಒಂದು ಬಿಲಿಯನ್ ಡಾಲರ್ ಕ್ರಿಕೆಟ್ ತಂಡವನ್ನು ಸೋಲಿಸಿದಕ್ಕೆ ನಾವು ನಮ್ಮ ಪಾಕಿಸ್ತಾನ ತಂಡಕ್ಕೆ ಕ್ರೆಡಿಟ್ ಕೊಡಬೇಕೆಂದು ಹೇಳಿದ್ದರು.
ಇದಲ್ಲದೇ ಕಳೆದ ಟಿ20 ವಿಶ್ವಕಪ್ನಲ್ಲಿ ಸೋತ ನಂತರ ಪಾಕ್ ತಂಡಕ್ಕೆ ಟೀಮ್ ಇಂಡಿಯಾ ಗೌರವವನ್ನು ಕೊಡುತ್ತಿದೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಅಶ್ವಿನ್, ಗೌರವ ಕೊಡುವಂಥದ್ದು ಸೋಲು ಗೆಲುವಿನಿಂದ ಬರುವುದಿಲ್ಲ. ನೀವು ಅವರೊಂದಿಗೆ ಹೇಗಿದ್ದೀರಿ ಅನ್ನೋದರ ಮೇಲೆ ನಿಂತಿದೆ.
ನಾವು ಪಾಕಿಸ್ತಾನ ತಂಡಕ್ಕೆ ಸಹಜವಾಗಿ ಗೌರವ ಕೊಡುತ್ತೇವೆ. ಅವರು ಕೂಡ ನಮ್ಮನ್ನು ಹಾಗೆ ಗೌರವಿಸುತ್ತಾರೆ ಎಂದು ಅಶ್ವಿನ್ ಹೇಳಿದ್ದಾರೆ.
ಪ್ರತಿಷ್ಠಿತ ಟಿ20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಮೆಲ್ಬೋರ್ನ್ ಮೈದಾನದಲ್ಲಿ ಭಾರತ – ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ.