ಐಸಿಸಿ ಮಹಿಳಾ ವಿಶ್ವಕಪ್ ಅಂತಿಮ ಹಂತಕ್ಕೆ ಬಂದಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆತಿಥೇಯ ನ್ಯೂಜಿಲೆಂಡ್ ಟೂರ್ನಿಯಿಂದ ಹೊರಬಿದ್ದಿವೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್ಇಂಡೀಸ್ ಸೆಮಿಫೈನಲ್ ಪ್ರವೇಶಿಸಿವೆ.
ಟೂರ್ನಿಯ ಫೆವರೀಟ್ ತಂಡಗಳಾಗಿದ್ದ ಭಾರತ ಮತ್ತು ನ್ಯೂಜಿಲೆಂಡ್ ಲೀಗ್ ಹಂತದಲ್ಲೇ ಹೊರ ಬಿದ್ದಿದ್ದು ಅಚ್ಚರಿಯಲ್ಲೊಂದು. ಆಸ್ಟ್ರೇಲಿಯಾ ಆಡಿದ 7 ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ 3ನೇ ಸ್ಥಾನದಲ್ಲಿವೆ. ವೆಸ್ಟ್ಇಂಡೀಸ್ ಕೊನೆಯ ತಂಡವಾಗಿ ಸೆಮಿಫೈನಲ್ ಎಂಟ್ರಿಯಾಗಿದೆ.
ಸೆಮಿಫೈನಲ್ 01
ಆಸ್ಟ್ರೇಲಿಯಾ VS ವೆಸ್ಟ್ಇಂಡೀಸ್
ಸ್ಥಳ: ವೆಲ್ಲಿಂಗ್ಟನ್
ದಿನಾಂಕ: ಮಾರ್ಚ್ 30
ಲೀಗ್ ಅಗ್ರಸ್ಥಾನಿ ಆಸ್ಟ್ರೇಲಿಯಾ ಲೀಗ್ನ 4ನೇ ಸ್ಥಾನಿ ವೆಸ್ಟ್ಇಂಡೀಸ್ ತಂಡವನ್ನು ಎದುರಿಸಲಿದೆ. ವೆಲ್ಲಿಂಗ್ಟನ್ನಲ್ಲಿ ಈ ಪಂದ್ಯ ಮಾರ್ಚ್ 30 ರಂದು ನಡೆಯಲಿದೆ.
ಸೆಮಿಫೈನಲ್ 02
ದಕ್ಷಿಣ ಆಫ್ರಿಕಾ VS ಇಂಗ್ಲೆಂಡ್
ಸ್ಥಳ: ಕ್ರೈಸ್ಟ್ಚರ್ಚ್
ದಿನಾಂಕ: ಮಾರ್ಚ್ 31
2ನೇ ಸೆಮಿಫೈನಲ್ ಪಂದ್ಯ 2ನೇ ಸ್ಥಾನ ಪಡೆದಿರುವ ದಕ್ಷಿಣ ಆಫ್ರಿಕಾ ಮತ್ತು 3ನೇ ಸ್ಥಾನ ಪಡೆದಿರುವ ಇಂಗ್ಲೆಂಡ್ ನಡುವೆ ನಡೆಯಲಿದೆ. ಮಾರ್ಚ್ 31 ರಂದು ಈ ಪಂದ್ಯ ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿದೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ಸತತ 2ನೇ ಬಾರಿಗೆ ಕಪ್ ಗೆಲ್ಲುವ ಪ್ಲಾನ್ನಲ್ಲಿದೆ. ಆಸ್ಟ್ರೇಲಿಯಾ ಫೆವರೀಟ್ ಆಗಿ ಕಾಣುತ್ತಿದ್ದರೂ, ವೆಸ್ಟ್ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಶಕ್ತಿ ಕಡಿಮೆ ಇಲ್ಲ.