IPL 2022- RCB vs CSK – ಫಾಫ್ ಡುಪ್ಲೆಸಸ್ ಅಬ್ಬರ..ಆರ್ ಸಿಬಿ – ಸಿಎಸ್ ಕೆ ಅಭಿಮಾನಿಗಳ ಹಾಸ್ಯ ಸಮರ..!
ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋತಿರಬಹುದು. ಆದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಸ್ ಅವರು ಆರ್ ಸಿಬಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಆರ್ ಸಿಬಿ ನಾಯಕನಾಗಿ ಫಾಫ್ ಡುಪ್ಲೆಸಸ್ ಅವರು ಅದ್ಭುತವಾದ ಆರಂಭವನ್ನು ಪಡೆದುಕೊಂಡಿದ್ದಾರೆ. ತಮ್ಮ ಹೆಸರಿಗೆ ಮತ್ತು ಖ್ಯಾತಿಗೆ ತಕ್ಕಂತೆ ಪಂಜಾಬ್ ಕಿಂಗ್ಸ್ ವಿರುದ್ಧ ಬ್ಯಾಟ್ ಬೀಸಿದ್ದಾರೆ.
ಆರಂಭದಲ್ಲಿ ಫಾಫ್ ಡುಪ್ಲೆಸಸ್ ಅವರು ನಿಧಾನ ಗತಿಯ ಬ್ಯಾಟಿಂಗ್ ಗೆ ಮುಂದಾದ್ರು. 34 ಎಸೆತಗಳಲ್ಲಿ 23 ರನ್ ಗಳಿಸಿದ್ದರು.
ಆನಂತರ ಫಾಫ್ ಡುಪ್ಲೆಸಸ್ ಅವರು ಪಂಜಾಬ್ ಕಿಂಗ್ಸ್ ಬೌಲರ್ ಗಳ ಬೆವರಿಳಿಸುವಂತೆ ಬ್ಯಾಟಿಂಗ್ ಮಾಡಿದ್ದರು. 29 ಎಸೆತಗಳಲ್ಲಿ 41 ರನ್ ಗಳಿಸಿದ್ದರು. ಇನ್ನೊಂದೆಡೆ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟ್ ಬೀಸುತ್ತಾ ಫಾಫ್ ಡುಪ್ಲೆಸಸ್ ಗೆ ಸಾಥ್ ನೀಡಿದ್ರು. IPL 2022: CSK, RCB fans trigger hilarious meme fest as Faf du Plessis
ಅಂತಿಮವಾಗಿ ಫಾಫ್ ಡುಪ್ಲೆಸಸ್ ಅವರು 57 ಎಸೆತಗಳಲ್ಲಿ 88 ರನ್ ಸಿಡಿಸಿದ್ದರು. ಇದರಲ್ಲಿ ಏಳು ಸಿಕ್ಸರ್ ಮತ್ತು ಮೂರು ಬೌಂಡರಿಗಳಿದ್ದವು.
ಇನ್ನೊಂದೆಡೆ ಫಾಫ್ ಡುಪ್ಲೆಸಸ್ ಅವರ ಬ್ಯಾಟಿಂಗ್ ವೈಖರಿಗೆ ಆರ್ ಸಿಬಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಮತ್ತೊಂದೆಡೆ ಸಿಎಸ್ ಕೆ ಅಭಿಮಾನಿಗಳು ಸಂಕಟಪಡುತ್ತಿದ್ದಾರೆ. ಎಂಥಾ ಆಟಗಾರನನ್ನು ಕೈಬಿಟ್ಟೆವು ಅಂತ ಸಿಎಸ್ ಕೆ ಅಭಿಮಾನಿಗಳು ತಲೆ ಚಚ್ಚಿಕೊಳ್ಳುತ್ತಿದ್ರೆ, ಆರ್ ಸಿಬಿ ಫ್ಯಾನ್ಸ್, ಎಂಥ ಆಟಗಾರ ಸಿಕ್ಕಿಬಿಟ್ಟ ಅಂತ ಫುಲ್ ಜೋಶ್ ನಲ್ಲಿದ್ದಾರೆ.
ಸಾಮಾಜಿಕ ಜಾಲ ತಾಣದಲ್ಲಂತೂ ಸಿಎಸ್ ಕೆ ಮ್ಯಾನೆಂಜ್ ಮೆಂಟ್ ಮತ್ತು ಸಿಎಸ್ ಕೆ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು ನಾನಾ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ.
ಕಳೆದ 9 ವರ್ಷಗಳಿಂದ ಫಾಫ್ ಡುಪ್ಲೆಸಸ್ ಅವರು ಸಿಎಸ್ ಕೆ ತಂಡದ ಆಧಾರಸ್ತಂಭವಾಗಿದ್ದರು. ಆದ್ರೆ 2022ರ ಮೆಗಾ ಹರಾಜಿನಲ್ಲಿ ಫಾಫ್ ಡುಪ್ಲೆಸಸ್ ಅವರನ್ನು ಸಿಎಸ್ ಕೆ ಖರೀದಿ ಮಾಡುವ ಮನಸ್ಸು ಮಾಡಿರಲಿಲ್ಲ.
ಆದ್ರೆ ಮೆಗಾ ಹರಾಜಿಗೆ ಮುನ್ನವೇ ಆರ್ ಸಿಬಿ ಮ್ಯಾನೇಜ್ ಮೆಂಟ್ ಫಾಫ್ ಡುಪ್ಲೆಸಸ್ ಅವರನ್ನು ಖರೀದಿ ಮಾಡಬೇಕು. ತಂಡಕ್ಕೆ ನಾಯಕನ್ನಾಗಿ ನೇಮಕ ಮಾಡಬೇಕು ಎಂಬ ಪ್ಲಾನ್ ನಲ್ಲೇ ಇತ್ತು. ಹಾಗಾಗಿಯೇ ಫಾಫ್ ಡುಪ್ಲೆಸಸ್ ಅವರನ್ನು ಏಳು ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಅಲ್ಲದೆ ತಂಡದ ನಾಯಕನ್ನಾಗಿಯೂ ನೇಮಕ ಮಾಡಿದೆ. ಇದೀಗ ಮೊದಲ ಪಂದ್ಯದಲ್ಲಿ ಫಾಫ್ ಡುಪ್ಲೆಸಸ್ ಅವರು ಸೋಲಿನ ರುಚಿ ನೋಡಿರಬಹುದು. ಆದ್ರೂ ಆರ್ ಸಿಬಿ ತಂಡ ಫಾಫ್ ಡುಪ್ಲೆಸಸ್ ಅವರ ಸಾರಥ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತದೆ ಎಂಬ ವಿಶ್ವಾಸದಲ್ಲಿದೆ.