ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ಮೊತ್ತ ಮೊದಲ ವೈಯಕ್ತಿಕ ಚಿನ್ನದ ಪದಕ ಗೆದ್ದುಕೊಟ್ಟ ಜಾವೆಲಿಯನ್ ಪಟು ನೀರಜ್ ಚೋಪ್ರಾಗೆ ಹರಿಯಾಣ ಸರ್ಕಾರ ಮತ್ತು ಕೇಂದ್ರ ಸರ್ಕಾರ ವಿಶೇಷ ಗೌರವ ನೀಡಿದೆ. ಭಾರತದ ಚಿನ್ನದ ಹುಡುಗನ ಟ್ಯಾಬ್ಲೋ ಈ ಬಾರಿಯ ಗಣರಾಜ್ಯೋತ್ಸವ ಪರೇಡ್ನಲ್ಲ ಗಮನ ಸೆಳೆಯಲಿದೆ.
ಹರಿಯಾಣದ ಪಾಣಿಪತ್ನ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ಎರಡನೇ ಬಾರಿ ಚಿನ್ನಸಿಗುವಂತೆ ಮಾಡಿದ್ದರು. ಈ ಹಿಂದೆ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಭಿಂದ್ರಾ ಶೂಟಿಂಗ್ ವಿಭಾಗದಲ್ಲಿ ಸ್ವರ್ಣ ತಂದುಕೊಟ್ಟಿದ್ದರು. ಆದರೆ ಟ್ರ್ಯಾಕ್ ಅಂಡ್ ಫೀಲ್ಡ್ನಲ್ಲಿ ಮೊತ್ತಮೊದಲ ಚಿನ್ನ ತಂದುಕೊಟ್ಟ ಕೀರ್ತಿ ನೀರಜ್ ಚೋಪ್ರಾ ಅವರದ್ದಾಗಿದೆ.
ರಾತೋರಾತ್ರಿ ಸೂಪರ್ ಸ್ಟಾರ್ ಆಗಿ ಮೆರೆದಾಡಿದ ನೀರಜ್ ಟೊಕಿಯೋದಲ್ಲಿ 87.58 ಮೀ ಎಸೆದು ಚಿನ್ನದ ಪದಕ ಗೆದ್ದಿದ್ದರು. ನೀರಜ್ ಸಾಧನೆಗೆ ಹರ್ಯಾಣ ವಿಶೇಷ ಗೌರವ ನೀಡುತ್ತಿರುವುದಕ್ಕೆ ಕ್ರೀಡಾಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ.