ಗ್ರೀಸ್ ದೇಶದಲ್ಲಿ ನಡೆಯುತ್ತಿರುವ ವೇಟ್ಲಿಫ್ಟಿಂಗ್ ಕಿರಿಯರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ವೇಟ್ ಲಿಫ್ಟರ್ ಹರ್ಷದಾ ಶರದ್ ಗರುಡ್ ಹೊಸ ಇತಿಹಾಸ ಬರೆದಿದ್ದಾರೆ. ಹರ್ಷದಾ ಶರದ್ ಚಿನ್ನದ ಪದಕ ಗೆದ್ದಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ವೇಟ್ಲಿಫ್ಟರ್ ಎಂಬ ದಾಖಲೆ ಬರೆದಿದ್ದಾರೆ. ಹರ್ಷದಾ ಮಹಿಳೆಯರ 45 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿಒಟ್ಟು 153 ಕೆ.ಜಿ. ಭಾರ ಎತ್ತಿದ್ದರು. ಸ್ನ್ಯಾಚ್ನಲ್ಲಿ 70 ಕೆ.ಜಿ. ಮತ್ತು ಕ್ಲೀನ್ ಅಂಡ್ ಜರ್ಕ್ನಲ್ಲಿ 83 ಕೆ.ಜಿ. ಭಾರ ಎತ್ತಿ ಬಂಗಾರಕ್ಕೆ ಮುತ್ತಿಕ್ಕಿದರು.
ಭಾರತದ ಮತ್ತೊಬ್ಬ ಸ್ಪರ್ಧಿ ಅಂಜಲಿ ಪಟೇಲ್ 148 ಕೆ.ಜಿ. ಭಾರ ಎತ್ತಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2013ರಲ್ಲಿ ಮೀರಾಬಾಯಿ ಚಾನು ಕಂಚು, 2021 ವರ್ಷ ಅಚಿಂತಾ ಬೆಳ್ಳಿ ಪದಕ ಗೆದ್ದಿದ್ದರು. ಈಗ ಹರ್ಷದಾ ಶರದ್ ಗರುಡ್ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.