Ranji Trophy 2022 – ಸೌರವ್ ಗಂಗೂಲಿ ಮಾತಿಗೆ ಹಾರ್ದಿಕ್ ಪಾಂಡ್ಯ ಡೋಂಟ್ ಕೇರ್ ?
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ರಣಜಿ ಟೂರ್ನಿಯಲ್ಲಿ ಆಡುತ್ತಿಲ್ಲ. ಫೆಬ್ರವರಿ 10ರಿಂದ ಮೊದಲ ಹಂತದ ರಣಜಿ ಪಂದ್ಯಗಳು ನಡೆಯಲಿವೆ.
ಈ ಹಿನ್ನೆಲೆಯಲ್ಲಿ ಬರೋಡಾ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಹಾರ್ದಿಕ್ ಪಾಂಡ್ಯ ಹೆಸರಿಲ್ಲ. ಕೇದಾರ್ ದೇವ್‍ಧರ್ ಅವರು ಬರೋಡಾ ತಂಡವನ್ನು ಮುನ್ನಡೆಸಲಿದ್ದಾರೆ. ವಿಷ್ಣು ಸೋಲಂಕಿ ಅವರು ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.
ಇನ್ನೊಂದೆಡೆ ಕೃನಾಲ್ ಪಾಂಡ್ಯ ತಂಡದಲ್ಲಿದ್ದು, ತಂಡದ ಹಿರಿಯ ಆಟಗಾರನಾಗಿದ್ದಾರೆ. ಕಳೆದ ಬಾರಿ ದೀಪಕ್ ಹೂಡಾ ಜೊತೆಗಿನ ಮಾತಿನ ಸಮರದಿಂದಾಗಿ ಕೃನಾಲ್ ಪಾಂಡ್ಯ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿದೆ.
ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್ ಟೂನಿಯತ್ತ ಹೆಚ್ಚಿನ ಗಮನ ಹರಿಸಲಿದ್ದಾರೆ. ಅಹಮದಾದಾಬ್ ತಂಡದ ನಾಯಕನಾಗಿರುವ ಪಾಂಡ್ಯ ಈಗ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಕಳೆದ ಟಿ-20 ವಿಶ್ವಕಪ್ ನಲ್ಲಿ ಪಾಂಡ್ಯ ಟೀಮ್ ಇಂಡಿಯಾದಲ್ಲಿದ್ರು. ಆದ್ರೆ ಆಲ್ ರೌಂಡರ್ ಆಗಿರುವ ಪಾಂಡ್ಯ ಬೌಲಿಂಗ್ ಮಾಡಿರಲಿಲ್ಲ. ಅಲ್ಲದೆ ಪಾಂಡ್ಯ ಆಯ್ಕೆಯ ಬಗ್ಗೆಯೂ ಹಲವು ಟೀಕೆಗಳು ಬಂದಿದ್ದವು.
ಮತ್ತೊಂದೆಡೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಹಾರ್ದಿಕ್ ಪಾಂಡ್ಯ ರಣಜಿ ಟೂರ್ನಿಯಲ್ಲಿ ಆಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದ್ರೆ ಈಗ ಹಾರ್ದಿಕ್ ಪಾಂಡ್ಯ ರಣಜಿ ಟೂರ್ನಿಯನ್ನು ಮಿಸ್ ಮಾಡ್ಕೊಂಡಿದ್ದಾರೆ. ಗಂಗೂಲಿ ಮಾತಿಗೂ ಕ್ಯಾರೇ ಅಂದಿಲ್ಲ.
ಹಾರ್ದಿಕ್ ಪಾಂಡ್ಯ ಗಾಯದಿಂದ ಚೇತರಿಸಿಕೊಂಡು ವಿಶ್ರಾಂತಿಯಲ್ಲಿದ್ದಾರೆ. ಟೀಮ್ ಇಂಡಿಯಾದಲ್ಲಿ ಮತ್ತೆ ಅಡುವ ಅವಕಾಶ ಪಡೆಯಬೇಕು. ನನ್ನ ಪ್ರಕಾರ ಅವರು ಫಿಟ್ ಆಗಿ ರಣಜಿ ಟೂರ್ನಿಯಲ್ಲಿ ಆಡ್ತಾರೆ. ಬೌಲಿಂಗ್ ಕೂಡ ಮಾಡ್ತಾರೆ ಎಂದು ಗಂಗೂಲಿ ಹೇಳಿದ್ದರು.
ಆದ್ರೆ ಐಪಿಎಲ್‍ನಲ್ಲಿ ಅಹಮದಾಬಾದ್ ತಂಡದ ನಾಯಕತ್ವ ಸಿಕ್ಕ ನಂತರ ಹಾರ್ದಿಕ್ ಪಾಂಡ್ಯ ಅವರು ರಣಜಿ ಟೂರ್ನಿಯಲ್ಲಿ ಆಡುವ ಮನಸ್ಸು ಮಾಡಿಲ್ಲ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದನ್ನು ಎದುರು ನೊಡುತ್ತಿದ್ದಾರೆ.
ಆದ್ರೆ ಬಿಸಿಸಿಐ ಮತ್ತು ಆಯ್ಕೆ ಸಮಿತಿಯು ರಣಜಿ ಟೂರ್ನಿಯಲ್ಲಿ ಆಟಗಾರರ ಪ್ರದರ್ಶನ, ಸಾಮಥ್ರ್ಯ ಮತ್ತು ಫಿಟ್ ನೆಸ್ ಅನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ತಂಡವನ್ನು ಆಯ್ಕೆ ಮಾಡುತ್ತಾರೆ. ಆದ್ರೆ ಪಾಂಡ್ಯ ರಣಜಿ ಟೂರ್ನಿಯನ್ನು ಮಿಸ್ ಮಾಡಿಕೊಂಡಿರುವುದರಿಂದ ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆದುಕೊಳ್ಳುತ್ತಾರೋ ಇಲ್ವೊ ಅನ್ನೋದೇ ಅನುಮಾನವಾಗಿದೆ.