Team india ಮುಗಿದೋಯ್ತು ಧೋನಿ ರಿವ್ಯೂ ಸಿಸ್ಟಮ್… ಮುಂದೆ ಏನಿದ್ರು ರೋಹಿತ್ ರಿವ್ಯೂ ಸಿಸ್ಟಮ್..!

ಧೋನಿ ರಿವ್ಯೂ (ರೆಫೆರಲ್) ಸಿಸ್ಟಮ್ ಈಗ ಟೀಮ್ ಇಂಡಿಯಾದಲ್ಲಿ ಮುಗಿದು ಹೋದ ಅಧ್ಯಾಯ. ಈಗ ಏನಿದ್ರೂ ರೋಹಿತ್ ರಿವ್ಯೂ (ರೆಫೆರಲ್)) ಸಿಸ್ಟಮ್ ಟೀಮ್ ಇಂಡಿಯಾದಲ್ಲಿ ಶುರುವಾಗುತ್ತಿದೆ.
ಹೌದು, ಅಂಪೈರ್ ಗಳ ತೀರ್ಮಾನವನ್ನು ತಂಡದ ನಾಯಕ ಡಿಸಿಷನ್ ರಿವ್ಯೂ ಸಿಸ್ಟಮ್ ಮೂಲಕ ಮನವಿ ಸಲ್ಲಿಸುವ ರೂಲ್ಸ್ ಆಧುನಿಕ ಕ್ರಿಕೆಟ್ ನಲ್ಲಿದೆ. ಈ ಡಿಆರ್ ಎಸ್ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಕೂಡ ಒಂದು ಕಲೆ. ಅದು ಎಲ್ಲಾ ನಾಯಕರ ಕೈಯಿಂದ ಆಗುತ್ತಿಲ್ಲ. ಅಂಪೈರ್ ತೀರ್ಮಾನವನ್ನು ಪ್ರಶ್ನೆ ಮಾಡಿ ಯಶ ಸಾಧಿಸುವುದು ತುಂಬಾನೇ ಕಷ್ಟ.
ಆದ್ರೆ ಡಿಆರ್ ಎಸ್ ನಿಯಮದಲ್ಲಿ ಹೆಚ್ಚು ಯಶ ಸಾಧಿಸಿದ್ದು ಟೀಮ್ ಇಂಡಿಯಾದ ನಾಯಕನಾಗಿದ್ದ ಮಹೇಂದ್ರ ಸಿಂಗ್ ಧೋನಿ. ಧೋನಿ ಡಿಆರ್ ಎಸ್ ನಿಯಮವನ್ನು ಅತ್ಯಂತ ಯಶಸ್ವಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದರು. ಹೀಗಾಗಿಯೇ ಡಿಸಿಷನ್ ರಿವ್ಯೂ ಸಿಸ್ಟಮ್ ಅನ್ನು ಧೋನಿ ರಿವ್ಯೂ ಸಿಸ್ಟಮ್ ಅಂತ ಕರೆಯಲಾಗುತ್ತಿತ್ತು. Used to call it the Dhoni Referral System, but it is now the Rohit system’- sunil gavaskar
ಇದೀಗ ಧೋನಿಯ ಹಾದಿಯಲ್ಲೇ ಟೀಮ್ ಇಂಡಿಯಾದ ನೂತನ ನಾಯಕ ರೋಹಿತ್ ಶರ್ಮಾ ಮುನ್ನಡೆಯುತ್ತಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಡಿಆರ್ ಎಸ್ ನಿಯಮದಲ್ಲಿ ಯಶ ಸಾಧಿಸಿದ್ದಾರೆ. ಮೂರು ಡಿಆರ್ ಎಸ್ ನಲ್ಲೂ ರೋಹಿತ್ ಶರ್ಮಾ ಯಶಸ್ವಿಯಾಗಿದ್ದಾರೆ. ರೋಹಿತ್ ಶರ್ಮಾ ಅವರ ಈ ಚಾಣಕ್ಯ ನಡೆಯನ್ನು ಮಾಜಿ ನಾಯಕ ಸುನೀಲ್ ಗವಾಸ್ಕರ್ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಧೋನಿ ರಿವ್ಯೂ ಸಿಸ್ಟಮ್ ಬದಲು ರೋಹಿತ್ ಸಿಸ್ಟಮ್ ಅಂತ ಬಣ್ಣಿಸಿದ್ದಾರೆ. ಈ ಹಿಂದೆ ಡಿಆರ್ ಎಸ್ ನಿಯಮವನ್ನು ಧೋನಿ ರಿವ್ಯೂ ಸಿಸ್ಟಮ್ ಅಂತ ಇದೇ ಸುನೀಲ್ ಗವಾಸ್ಕರ್ ಕ್ರಿಕೆಟ್ ವಿಶ್ಲೇಷಣೆ ಮಾಡುವಾಗ ಬಣ್ಣಿಸಿದ್ದರು.
ಹಾಗಂತ ರೋಹಿತ್ ಅವರನ್ನು ಈಗಲೇ ರೋಹಿತ್ ರಿವ್ಯೂ ಸಿಸ್ಟಮ್ ಅಂತ ಕರೆಯುವುದು ಸರಿಯಲ್ಲ. ಇದು ಪೂರ್ಣ ಪ್ರಮಾಣದ ನಾಯಕನಾಗಿ ರೋಹಿತ್ ಶರ್ಮಾ ಅವರು ಯಶ ಸಾಧಿಸಿರಬಹುದು. ಆದ್ರೆ ಮುಂದಿನ ಪಂದ್ಯಗಳಲ್ಲೂ ಇದೇ ಚಾಣಕ್ಯ ನಡೆಯನ್ನು ಮುಂದುವರಿಸಿದಾಗ ಮಾತ್ರ ರೋಹಿತ್ ರಿವ್ಯೂ ಸಿಸ್ಟಮ್ ಅಂತ ಹೇಳಬಹುದು.
ಇನ್ನು ಡಿಆರ್ ಎಸ್ ನಿಯಮದಲ್ಲಿ ವಿಕೆಟ್ ಕೀಪರ್ ನ ಪಾತ್ರ ಹೆಚ್ಚು ಮಹತ್ವದ್ದಾಗಿರುತ್ತದೆ. ಧೋನಿ ವಿಕೆಟ್ ಕೀಪರ್ ಆಗಿರುವುದರಿಂದ ಈ ನಿಯಮವನ್ನು ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ಜವಾಬ್ದಾರಿಯನ್ನು ರೋಹಿತ್ ಶರ್ಮಾ ಚೆನ್ನಾಗಿಯೆ ನಿಭಾಯಿಸಿದ್ದಾರೆ. ಇದು ಆರಂಭ ಎನ್ನುವುದನ್ನು ಮರೆಯುವ ಹಾಗಿಲ್ಲ.ಹಾಗೇ ಟೀಮ್ ಇಂಡಿಯಾದ ಸಂಘಟಿತ ಆಟದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರೋಹಿತ್ ಶರ್ಮಾ ಹಾಗೇ ಎಚ್ಚರಿಕೆಯ ಸಲಹೆಗಳನ್ನು ನೀಡಿದ್ದಾರೆ. ಹಿರಿಯ ಆಟಗಾರ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರಿಗೂ ರೋಹಿತ್ ಕಿವಿ ಮಾತು ಹೇಳಿದ್ದಾರೆ. ನಿಮ್ಮ ಸಾಮಥ್ರ್ಯಕ್ಕೆ ನೀವೇ ಸವಾಲು.. ವಿಭಿನ್ನವಾಗಿ ಯೋಚನೆ ಮಾಡಿಕೊಂಡು ಆಡಿ. ಪರಿಸ್ಥಿತಿಗೆ ತಕ್ಕಂತೆ ಆಡುವುದನ್ನು ಕಲಿತುಕೊಳ್ಳಿ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಿ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.