2024ರ ಟಿ20 ವಿಶ್ವಕಪ್ ದೃಷ್ಟಿಯಿಂದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ತಂಡದ ನಾಯಕನ್ನಾಗಿ ನೇಮಿಸಬಹುದೆಂಬ ಸುದ್ದಿ ಹರಿದಾಡುತ್ತಿದೆ.
ಇದರ ನಡುವೆ 2024ರ ಟಿ20 ವಿಶ್ವಕಪ್ ಬಗ್ಗೆ ಮಾತನಾಡಿರುವುದು ಮತ್ತಷ್ಟು ಪುಷ್ಠಿ ನೀಡಿದೆ. 2023ರ ಐಪಿಎಲ್ಗೂ ಮುನ್ನ ಬಿಸಿಸಿಐ ಹಾರ್ದಿಕ್ ಅವರನ್ನು ಟಿ20 ನಾಯಕನನ್ನಾಗಿ ಮಾಡಬಹುದೆಂದು ತಿಳಿದು ಬಂದಿದೆ.
ಇತ್ತಿಚೆಗೆ ಟೀಮ್ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್, ಸೇರಿದಂತೆ ಹಲವಾರು ಮಾಜಿ ಆಟಗಾರರು ಹಾರ್ದಿಕ್ ಪಾಂಡ್ಯ ಅವರನ್ನು ಟಿ20 ನಾಯಕರನ್ನಾಗಿ ಮಾಡುವಂತೆ ಸಲಹೆ ನೀಡಿದ್ದರು.
ಹಾರ್ದಿಕ್ ಪಾಂಡ್ಯ ಟಿ20 ನಾಯಕನಾದರೆ ಕೋಚ್ ಯಾರು ಅನ್ನೊ ಪ್ರಶ್ನೆಯೂ ಮೂಡುತ್ತದೆ. ಮುಂದಿನ ವಿಶ್ವಕಪ್ಗೆ ಈಗಲೇ ಸಿದ್ಧತೆ ನಡೆಸಿರುವ ಬಿಸಿಸಿಐ ಧೋನಿಗಾಗಿ ದೊಡ್ಡ ಹುದ್ದೆ ಸೃಷ್ಟಿಸಿ ದೊಡ್ಡ ಜವಾಬ್ದಾರಿ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ.

ಹಾರ್ದಿಕ್ ಪಾಂಡ್ಯ ಅದೆಷ್ಟೊ ಬಾರಿ ಧೋನಿ ನನ್ನ ಗುರು ಎಂದಿದ್ದಾರೆ. ಹಾರ್ದಿಕ್ ಅವರ ಪ್ರತಿಭೆಯನ್ನು ಗುರುತಿಸಿದ್ದು ಧೋನಿ.ಗುರು ಶಿಷ್ಯರು ಮತ್ತೆ ಒಂದಾದರೆ ಮತ್ತೆ ಮ್ಯಾಜಿಕ್ ಮಾಡಬುದು ಅನ್ನೋದು ಲೆಕ್ಕಾಚಾರ.