ಲೈಂಗಿಕ ದೌರ್ಜನ್ಯ ಸಂಬಂಧ ಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕಾಗೆ ಕೊನೆಗೂ ಜಾಮೀನು ಸಿಕ್ಕಿದೆ.
ಇಲ್ಲಿನ ಸೆಂಟ್ರಲ್ ಸ್ಥಳೀಯ ನ್ಯಾಯಾಲಯ ಧನುಷ್ಕಾ ಗುಣತಿಲಕ ಪರ ಶ್ರೀಲಂಕಾ ಸರ್ಕಾರ ಹಾಗೂ ಲಂಕಾ ಕ್ರಿಕೆಟ್ ಮಂಡಳಿ ಡಾಲರ್ 150,000 ಹಣವನ್ನು ಜಾಮೀನು ರೂಪದಲ್ಲಿ ನೀಡಿದೆ. ಜ.12ಕ್ಕೆ ಈ ಪ್ರಕರಣದ ವಿಚಾರಣೆ ನಡೆಯಲಿದೆ.
ನ.2ರಂದು 29 ವರ್ಷದ ಮಹಿಳೆ ಮೇಲೆ ಧನುಷ್ಕಾ ಗುಣತಿಲಕ ಅತ್ಯಾಚಾರ ಮಾಡಿದ್ದಾರೆ ಎನ್ನುವ ಆರೋಪವನ್ನು ಸಿಡ್ನಿ ಪೊಲೀಸರು ಮಾಡಿದ್ದರು.
ನ.6ರಂದು ಧನುಷ್ಕಾ ಗುಣ ತಿಲಕ ಅವರನ್ನು ಪೊಲೀಸರು ಬಂಧಿಸಿದರು. ನ.7ರಂದು ಇಲ್ಲಿನ ಸ್ಥಳೀಯ ನ್ಯಾಯಾಲಯ ಜಾಮೀನು ಕೊಡು ನಿರಾಕರಿಸಿತು.
ಧನುಷ್ಕಾ ಗುಣತಿಲಕ ಪರ ಡಿಫೆನ್ಸ್ ಬಾರ್ರಿಸ್ಟರ್ ಮುರುಗನ್ ತಂಗರಾಜ್ ವಾದ ಮಾಡಿದರು. ಈ ಆಟಗಾರನನ್ನು ಲಂಕಾ ಕ್ರಿಕೆಟ್ ಮಂಡಳಿ ಹಾಗೂ ಶ್ರೀಲಂಕಾ ಸರ್ಕಾರ ಬೆಂಬಲಿಸುತ್ತದೆ. ನೀವು ಜಾಮೀನು ಕೊಡದಿದ್ದರೆ ಈ ಆಟಗಾರನ ವೃತ್ತಿ ಬದುಕಿಗೆ ತೊಂದರೆಯಾಗುತ್ತದೆ ಎಂದು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟರು.
ಡಿ.8ಕ್ಕೆ ಜಾಮೀನು ವಿಚಾರವಾಗಿ ಇಲ್ಲಿನ ಎನ್ಎಸ್ಡಬ್ಲ್ಯು ನ್ಯಾಯಾಲಯದಲ್ಲಿ ಮತ್ತೆ ವಿಚಾರಣೆಗೆ ಬರಳಿದೆ.