ಆಮ್ಚೆಸ್ ರಾಪಿಡ್ ಆನ್‌ಲೈನ್ ಚೆಸ್ ಟೂರ್ನಿಯಲ್ಲಿ ಭಾರತದ ಭರವಸೆಯ ಡೊನ್ನಾರುಮ್ಮ ಗುಕೇಶ್, ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಸೋಲಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
6ರ ಹರೆಯದ ಗುಕೇಶ್ 12 ಸುತ್ತುಗಳ ಬಳಿಕ 21 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಪೋಲೆಂಡ್ ನ ಯಾನ್ ಕ್ರಿಸ್ಟೋಫ್ ದುಡಾ ಮೊದಲ ಸ್ಥಾನದಲ್ಲಿದ್ದಾರೆ. ಅವನಿಗೆ 25 ಅಂಕಗಳಿವೆ. ಗುಕೇಶ್ 16 ವರ್ಷ, ನಾಲ್ಕು ತಿಂಗಳು ಮತ್ತು 20 ದಿನಗಳಲ್ಲಿ ಕಾರ್ಲ್‌ಸೆನ್‌ರನ್ನು ಸೋಲಿಸಿದ್ದಾರೆ. ಈ ಮೊದಲು ಈ ದಾಖಲೆ ಭಾರತದ ಆರ್ ಪ್ರಗ್ನಾನಂದ ಹೆಸರಿನಲ್ಲಿತ್ತು. ಅವರು ಈ ವರ್ಷದ ಫೆಬ್ರವರಿಯಲ್ಲಿ ಏರ್‌ಥಿಂಗ್ಸ್ ಮಾಸ್ಟರ್ಸ್‌ನಲ್ಲಿ 16 ವರ್ಷ, ಆರು ತಿಂಗಳು ಮತ್ತು 10 ದಿನಗಳಲ್ಲಿ ವಿಶ್ವದ ನಂಬರ್ ಒನ್ ಕಾರ್ಲ್‌ಸೆನ್ ಅವರನ್ನು ಸೋಲಿಸಿದ್ದರು. ಆಗ ಪ್ರಗ್ನಾನಂದ 39 ನಡೆಗಳಲ್ಲಿ ಗೆದ್ದಿದ್ದರು. ಗುಕೇಶ್ ವಿಶ್ವ ಚಾಂಪಿಯನ್‌ನನ್ನು 29 ನಡೆಗಳಲ್ಲಿ ಸೋಲಿಸಿದರು.

ಗುಕೇಶ್ ಅವರು ಕಾರ್ಲ್‌ಸನ್‌ರನ್ನು ಸೋಲಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂಬತ್ತನೇ ಸುತ್ತಿನ ಪಂದ್ಯದಲ್ಲಿ ಗುಕೇಶ್ ಕಾರ್ಲ್‌ಸನ್‌ರನ್ನು ಸೋಲಿಸಿದರು. ಇದಕ್ಕೂ ಮುನ್ನ ಭಾನುವಾರ ಕಾರ್ಲ್‌ಸೆನ್ ಇದೇ ಟೂರ್ನಿಯಲ್ಲಿ ಭಾರತದ 19 ವರ್ಷದ ಅರ್ಜುನ್ ಅರಿಗಾಸಿ ವಿರುದ್ಧವೂ ಸೋಲು ಕಂಡಿದ್ದರು.
Gukesh, young, world champion, Magnus Carlsen, chess