Pro Kabaddi: ಕೊನೆಯ ಕ್ಷಣದಲ್ಲಿ ಅಬ್ಬರಿಸಿದ ತಮಿಳು ತಲೈವಾಸ್
ಕೊನೆಯ ಕ್ಷಣದವರೆಗೂ ರೋಚಕತೆ ಹೆಚ್ಚಿಸಿದ್ದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ ತಮಿಳು ತಲೈವಾಸ್ 33-32 ರಿಂದ ಮಾಜಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡವನ್ನು 9ನೇ ಆವೃತ್ತಿಯ ಪ್ರೋ ಕಬಡ್ಡಿ ಟೂರ್ನಿಯ 24ನೇ ಪಂದ್ಯದಲ್ಲಿ ಮಣಿಸಿತು.
ತಮಿಳು ತಂಡದ ಸ್ಟಾರ್ ಆಟಗಾರರು ನೀಡಿದ ಸಂಘಟಿತ ಆಟದ ಪ್ರದರ್ಶನದ ಬಲದಿಂದ ತಮಿಳು ತಲೈವಾಸ್ ಟೂರ್ನಿಯಲ್ಲಿ ಮೊದಲ ಜಯದ ನಗೆ ಬೀರಿದೆ. ತಮಿಳು ಆಡಿದ 4 ಪಂದ್ಯಗಳಲ್ಲಿ ಮೊದಲ ಗೆಲುವು ದಾಖಲಿಸಿದ್ದು, ಎಂಟನೇ ಸ್ಥಾನದಲ್ಲಿದೆ. ಪಾಟ್ನಾ ಪೈರೇಟ್ಸ್ ಇನ್ನು ಗೆಲುವಿನ ಲಯಕ್ಕೆ ಮರಳುವ ಅವಶ್ಯಕತೆ ಇದೆ.
ಆರಂಭದ ಮೊದಲಾವಧಿಯಲ್ಲಿ ಪಾಟ್ನಾ 17-15 ರಿಂದ ಮುನ್ನಡೆ ಸಾಧಿಸಿತ್ತು. ಈ ಅವಧಿಯಲ್ಲಿ ತಮಿಳು ಒಂದು ಬಾರಿ ಆಲೌಟ್ ಆಗಿತ್ತು. ಅಲ್ಲದೆ ಪಾಟ್ನಾ ಮೊದಲ 20 ನಿಮಿಷದಲ್ಲಿ 11 ರೈಡಿಂಗ್ ಪಾಯಿಂಟ್ ಕಲೆ ಹಾಕಿತು. ಇನ್ನು ತಮಿಳು 12 ಅಂಕವನ್ನು ದಾಳಿಯಲ್ಲಿ ಗಳಿಸಿತು.
ಎರಡನೇ ಅವಧಿಯ ಆಟದಲ್ಲಿ ತಮಿಳು ತಲೈವಾಸ್ ಅಮೋಘ ಆಟದ ಪ್ರದರ್ಶನ ನೀಡಿತು. ಅಲ್ಲದೆ ಈ ಅವಧಿಯಲ್ಲಿ ತಮಿಳು 18-15 ರಿಂದ ಮುನ್ನಡೆ ಸಾಧಿಸಿತು. ಅಲ್ಲದೆ 12 ರೇಡ್ ಪಾಯಿಂಟ್, 4 ಟ್ಯಾಕಲ್ ಪಾಯಿಂಟ್ ಹಾಗೂ ಒಂದು ಬಾರಿ ಎದುರಾಳಿ ತಂಡವನ್ನು ಆಲೌಟ್ ಮಾಡಿದ ಹೆಗ್ಗಳಿಕೆಗೆ ತಮಿಳು ಪಾತ್ರವಾಗಿದೆ.
ಒಟ್ಟಾರೆ ಉಭಯ ತಂಡಗಳು 41 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿ 14 ರೈಡ್ ಅಂಕವನ್ನು ತಮಿಳು ಕಲೆ ಹಾಕಿದರೆ, ಪಾಟ್ನಾ 16 ಅಂಕ ಕಲೆ ಹಾಕಿತು. ಆದರೆ ಟ್ಯಾಕಲ್ ನಲ್ಲಿ ತಮಿಳು ತಲೈವಾಸ್ ಕೊಂಚ ಉತ್ತಮ ಪ್ರದರ್ಶನ ನೀಡಿ ಜಯ ಸಾಧಿಸಿತು.
Pro Kabaddi, Tamil Thalaivas, Patna Pirates