ಐಪಿಎಲ್ನಲ್ಲಿ ಫ್ರಾಂಚೈಸಿಗಳಗೆ ವಿದೇಶಿ ಆಟಗಾರರಿಗಿಂತ ದೇಶೀಯ ಆಟಗಾರರೇ ಮುಖ್ಯ. ಆದರೆ ಐಪಿಎಲ್ನ ಹೊಸ ತಂಡ ಗುಜರಾತ್ ಟೈಟಾನ್ಸ್ ಪಾಲಿಗೆ ದೇಶೀಯ ಆಟಗಾರರೇ ಅನಿವಾರ್ಯ ಅನ್ನುವ ಹಾಗಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಟಾಪ್ 5 ಸ್ಥಾನಗಳನ್ನು ಭಾರತೀಯ ಆಟಗಾರರೆ ನಿಭಾಯಿಸಬೇಕಾದ ಅನಿವಾರ್ಯತೆ ಇದೆ.
ಹಾರ್ದಿಕ್ ಪಾಂಡ್ಯಾ ನಾಯಕತ್ವದ ಈ ತಂಡದ ಬಲದ ಬಗ್ಗೆ ಕೊಂಚ ಸಂದೇಹವಿದೆ. ಆದರೆ ಉತ್ತಮ ಬೌಲರ್ಗಳನ್ನು ಹೊಂದಿರುವ ಕಾರಣ ಎದುರಾಳಿಯ ಸವಾಲು ಹತ್ತಿಕ್ಕುವ ಸಾಮರ್ಥ್ಯವಿದೆ.
ಸಂಭಾವ್ಯ XI
-
ಶುಭ್ಮನ್ ಗಿಲ್
-
ವೃದ್ಧಿಮಾನ್ ಸಾಹಾ
-
ರಾಹುಲ್ ತೆವಾಟಿಯಾ
-
ಗುರ್ಕಿರತ್ ಸಿಂಗ್ ಮಾನ್
-
ಹಾರ್ದಿಕ್ ಪಾಂಡ್ಯಾ
-
ಡೇವಿಡ್ ಮಿಲ್ಲರ್
-
ವಿಜಯ್ ಶಂಕರ್
-
ರಶೀದ್ ಖಾನ್
-
ಡಾಮಿನಿಕ್ ಡ್ರೇಕ್ಸ್
-
ಮೊಹಮ್ಮದ್ ಶಮಿ
-
ಲೊಕಿ ಫರ್ಗ್ಯೂಸನ್
ಶುಭ್ಮನ್ ಗಿಲ್ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ತಂಡದ ಆರಂಭಿಕ ಜೊಡಿ. ರಾಹುಲ್ ತೆವಾಟಿಯಾ, ಗುರುಕೀರತ್ ಮಾನ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯಾ ಬ್ಯಾಟಿಂಗ್ ಬಲಗಳು. ಡೇವಿಡ್ ಮಿಲ್ಲರ್ ಆಟ ಎಷ್ಟು ಉಳಿದುಕೊಂಡಿದೆಯೋ ಗೊತ್ತಿಲ್ಲ. ವಿಜಯ ಶಂಕರ್ ಮತ್ತು ರಶೀದ್ ಖಾನ್ ಆಲ್ರೌಂಡರ್ಗಳು. ಡಾಮಿನಿಕ್ ಡ್ರೇಕ್ಸ್, ಮೊಹಮ್ಮದ್ ಶಮಿ ಮತ್ತು ಲೊಕಿ ಫರ್ಗ್ಯೂಸನ್ ವೇಗದ ಬೌಲಿಂಗ್ ಅಸ್ತ್ರಗಳು.
ಗುಜರಾತ್ ಟೈಟಾನ್ಸ್ ಮೇಲ್ನೋಟಕ್ಕೆ ಬ್ಯಾಟಿಂಗ್ಗಿಂತ ಬೌಲಿಂಗ್ ತಂಡದಂತೆ ಕಾಣಿಸುತ್ತಿದೆ. ಆದರೆ ದೇಶೀಯ ಆಟಗಾರರು ತಂಡದ ಕೈ ಹಿಡಿದರೆ ಗೆಲುವಿನ ಓಟ ಸುಲಭವಾಗುತ್ತದೆ.