ಐಪಿಎಲ್ ಅಂದರೆ ಪ್ರತಿಭೆಗಳನ್ನು ಹೊರ ತರುವ ವೇದಿಕೆ. ಎಲ್ಲೋ ಎಲೆಮರೆಕಾಯಿಯಂತಿದ್ದ ಪ್ರತಿಭೆಗಳೀಗೆ ಸಿಗುವ ಅತೀ ದೊಡ್ಡ ಅವಕಾಶವಿದು. ಈ ಬಾರಿಯ ಐಪಿಎಲ್ನಲ್ಲಿ ಹೊಸ ಪ್ರತಿಭೆಗಳದ್ದೇ ಮಾತು. ಅಂತರಾಷ್ಟ್ರೀಯ ಕ್ರಿಕೆಟ್ ಬಗ್ಗೆ ಯೋಚನೆ ಮಾಡದ, ಅನುಭವಿ ಆಟಗಾರರಿಗೆ ಪರಿಚಯ ಇಲ್ಲದ ಈ ಆಟಗಾರರುಸಸ ಐಪಿಎಲ್ನಲ್ಲಿ ಸದ್ದು ಮಾಡುತ್ತಿದ್ದಾರೆ.
ಆಯುಷ್ ಬಡೋನಿ:
ಲಖನೌ ಸೂಪರ್ ಜೈಂಟ್ಸ್ ತಂಡದ ಮ್ಯಾಚ್ ವಿನ್ನರ್ ಆಯುಷ್ ಬಡೋನಿಗೆ ಈಗಲೇ ಬೇಬಿ ಎಬಿಡಿ ಅಂತ ಕರೆಯುತ್ತಾರೆ. ಅದಕ್ಕೆ ತಕ್ಕಂತೆ ಬಡೋನಿ ಪ್ರದರ್ಶನ ನೀಡುತ್ತಿದ್ದಾರೆ. ಆಡಿದ ಮೂರೂ ಪಂದ್ಯಗಳಲ್ಲೂ ತಂಡಕ್ಕೆ ಬೇಕಾದ ಆಟವನ್ನು ನೀಡಿದ್ದಾರೆ. ಕಷ್ಟದ ಸಮಯದಲ್ಲಿ ತಂಡದ ಕೈ ಹಿಡಿದಿದ್ದಾರೆ. ಮ್ಯಾಚ್ ಗೆಲ್ಲಿಸಿದ್ದಾರೆ. ಐಪಿಎಲ್ನಿಂದ ಬಡೋನಿ ಹೊಸ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.
ವೈಭವ್ ಅರೋರಾ:
ಪಂಜಾಬ್ ಕಿಂಗ್ಸ್ ತಂಡದ ವೈಭವ ಅರೋರಾ ಬೌಲಿಂಗ್ ನಲ್ಲಿ ವೇಗ ಇಲ್ಲ. ಆದರೆ ಸ್ವಿಂಗ್ ಇದೆ. ಇನ್ ಸ್ವಿಂಗ್ ಜೊತೆ ಔಟ್ ಸ್ವಿಂಗ್ ಗಳನ್ನೂ ಮಾಡಬಲ್ಲ ಅರೋರಾ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಮಾಲ್ ಮಾಡಿದ್ದಾರೆ. ಅರೋರಾ ಆಡಿದ್ದು ಒಂದೇ ಪಂದ್ಯವಾದರೂ ದೊಡ್ಡ ಸುದ್ದಿ ಮಾಡಿದ್ದಾರೆ.
ಅನೂಜ್ ರಾವತ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ಅನೂಜ್ ರಾವತ್ ಐಪಿಎಲ್ನಲ್ಲಿ ಸದ್ದು ಮಾಡುತ್ತಿದ್ದಾರೆ. ಆಟದಲ್ಲಿ ಖದರ್ ತೋರಿಲ್ಲವಾದರೂ, ಲುಕ್ನಲ್ಲಿ ಸಖತ್ ಮಿಂಚುತ್ತಿದ್ದಾರೆ.
ರಸಿಕ್ ಸಲಂ:
ಜಮ್ಮುಕಾಶ್ಮೀರ ಈ ಯುವ ವೇಗದ ಬೌಲರ್ ಕೆಕೆಆರ್ ತಂಡದ ಬೌಲಿಂಗ್ ಆರಂಭಿಸಿದಾಗ ಯಾರಪ್ಪ ಈ ಹುಡುಗ ಅಂತ ಕೇಳಿದವರೇ ಹೆಚ್ಚು ಆದರೆ ವೇಗವಾಗೊ ಚೆಂಡೆಸೆಯಬಲ್ಲ ತಾಕತ್ತು ರಸಿಕ್ಗೆ ಇದೆ. ಆಡಿದ್ದು ಒಂದೇ ಪಂದ್ಯವಾದರೂ ರಸಿಕ್ ಗಮನ ಸೆಳೆದಿದ್ದಾರೆ.
ಡಿವಾಲ್ಡ್ ಬ್ರೆವಿಸ್:
ಅಂಡರ್ 19 ವಿಶ್ವಕಪ್ನಲ್ಲಿ ಸದ್ದು ಮಾಡಿದ್ದ ಡಿವಾಲ್ಡ್ ಬ್ರೆವಿಸ್ ಆಟಗಾರರ ಹರಾಜಿನಲ್ಲೂ ದೊಡ್ಡ ಸುದ್ದಿಯಾಗಿದ್ದರು. ಮುಂಬೈ ಇಂಡಿಯನ್ಸ್ ಪರ ಆಟಕ್ಕಿಳಿಯುವ ಈತ ಆಡಿದ್ದು ಒಂದೇ ಒಂದು ಪಂದ್ಯ. ದೊಡ್ಡ ಹೊಡೆತಗಳ ಈ ಆಟಗಾರ ಭವಿಷ್ಯವನ್ನು ಈಗಲೇ ತೋರಿಸಿದ್ದಾನೆ.