FIH Women’s Hockey: ಜಪಾನ್ ಮಣಿಸಿದ ಭಾರತಕ್ಕೆ ಒಂಬತ್ತನೇ ಸ್ಥಾನ
ನವನೀತ್ ಕೌರ್ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ಮಹಿಳಾ ಹಾಕಿ ತಂಡ 3-1 ಗೋಲುಗಳಿಂದ ಜಪಾನ್ ತಂಡವನ್ನು ಎಫ್‌ಐಎಚ್ ಮಹಿಳಾ ವಿಶ್ವಕಪ್‌ನಲ್ಲಿ ಸೋಲಿಸಿ ಒಂಬತ್ತನೇ ಸ್ಥಾನ ಗಳಿಸಿದೆ.
ನವನೀತ್ 30 ಮತ್ತು 45ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ದೀಪ್ ಗ್ರೇಸ್ ಏಸ್ 38ನೇ ನಿಮಿಷದಲ್ಲಿ ಗೋಲು ಗಳಿಸಿದರು. ಜಪಾನ್ ಪರ ಯು ಅಸೈ 20ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಿಸಿದರು.

ಮೊದಲ ಕ್ವಾರ್ಟರ್‌ನ ಮೊದಲ ಐದು ನಿಮಿಷಗಳಲ್ಲಿ ಉಭಯ ತಂಡಗಳು ಸಮಾನವಾಗಿ ಕಾದಾಟ ನಡೆಸಿದವು. ಭಾರತಕ್ಕೆ ಆರಂಭದಲ್ಲಿ ಮುನ್ನಡೆ ಸಾಧಿಸುವ ಅವಕಾಶ ಸಿಕ್ಕಿತು. ಆದರೆ ವಂದನಾ ಕಟಾರಿಯಾ ಅವರ ಹೊಡೆತವನ್ನು ಜಪಾನ್ ಗೋಲ್‌ಕೀಪರ್ ಐಕಾ ನಕಮುರಾ ರಕ್ಷಿಸಿದರು. ಮೊದಲ ಕ್ವಾರ್ಟರ್‌ನಲ್ಲಿ ತಂಡಗಳಿಗೆ ಯಶಸ್ಸು ಸಿಗಲಿಲ್ಲ.
ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಎರಡು ನಿಮಿಷಗಳಲ್ಲಿ ಎರಡು ಅವಕಾಶಗಳನ್ನು ಸೃಷ್ಟಿಸಿಕೊಂಡರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. 20ನೇ ನಿಮಿಷದಲ್ಲಿ ಅಸೈ ನೀಡಿದ ಪೆನಾಲ್ಟಿ ಕಾರ್ನರ್‌ನಲ್ಲಿ ಜಪಾನ್ ಮುನ್ನಡೆ ಸಾಧಿಸಿತು. ಪ್ರತಿದಾಳಿಯಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಗಳಿಸಿದರೂ ಗೋಲು ದಾಖಲಾಗಲಿಲ್ಲ. ನವನೀತ್ ವಿರಾಮದ ಮೊದಲು ಸಮಬಲ ಸಾಧಿಸಿದರು.

ದ್ವಿತೀಯಾರ್ಧದಲ್ಲಿ ಭಾರತವು ಅತ್ಯಂತ ಆಕ್ರಮಣಕಾರಿಯಾಗಿ ಆಟ ಆರಂಭಿಸಿ ಆರನೇ ಪೆನಾಲ್ಟಿ ಕಾರ್ನರ್ ಅನ್ನು ಗಳಿಸಿ ಅವಕಾಶವನ್ನು ಕಳೆದುಕೊಂಡಿತು. ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪರಿವರ್ತಿಸಿದ ಭಾರತ ಮುನ್ನಡೆ ಸಾಧಿಸಿತು. ಮೂರನೇ ಕ್ವಾರ್ಟರ್‌ನಲ್ಲಿ ನವನೀತ್ ಎರಡನೇ ಗೋಲು ಗಳಿಸಿದರು. ನಾಲ್ಕನೇ ಅವಧಿಯಲ್ಲಿ, ಜಪಾನ್ ಹಿಂತಿರುಗಲು ಸಾಕಷ್ಟು ಪ್ರಯತ್ನಿಸಿತು ಆದರೆ ಯಶಸ್ವಿಯಾಗಲಿಲ್ಲ.
FIH, Women’s Hockey, India, Japan