Independence Day: ಭಾರತ ಹಾಗೂ ವಿಶ್ವ ಇಲೆವೆನ್ ನಡುವಿನ ಪಂದ್ಯದಲ್ಲಿ ಪಾಕ್ ಆಟಗಾರರು ಆಡುವುದು ಅನುಮಾನ
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವವನ್ನು ದೇಶದಲ್ಲಿ ಆಚರಿಸಲಾಗುತ್ತಿದೆ. ಸರ್ಕಾರ ಬಿಸಿಸಿಐ ಜೊತೆಗೂಡಿ ಕ್ರಿಕೆಟ್ ಪಂದ್ಯ ಆಯೋಜಿಸಲು ಮುಂದಾಗಿದೆ. ಈ ಪಂದ್ಯ ಭಾರತ ಮತ್ತು ವಿಶ್ವ ಇಲೆವೆನ್ ನಡುವೆ ನಡೆಯಲಿದೆ. ಉಭಯ ತಂಡಗಳ ನಡುವೆ ನಡೆಯಲಿರುವ ಈ ಪಂದ್ಯ ಆಗಸ್ಟ್ 22 ರಂದು ನಡೆಯಲಿದೆ. ಈ ಪಂದ್ಯದಲ್ಲಿ, ಒಂದು ಬದಿಯಲ್ಲಿ ಭಾರತ ಮತ್ತು ಇನ್ನೊಂದು ಬದಿಯಲ್ಲಿ ವಿಶ್ವದ ಆಟಗಾರರ ತಂಡವನ್ನು ರಚಿಸಲಾಗುತ್ತದೆ.
ಸುದ್ದಿ ಪ್ರಕಾರ, ಈ ಪ್ರಸ್ತಾವನೆಯನ್ನು ಬಿಸಿಸಿಐಗೆ ಕಳುಹಿಸಲಾಗಿದೆ. ಈ ಪ್ರಸ್ತಾವನೆಯಲ್ಲಿ, ಪಂದ್ಯದ ಸಿದ್ಧತೆ ಮತ್ತು ಅದರ ಸಂಘಟನೆಯ ಬಗ್ಗೆ ಮಂಡಳಿಗೆ ಮನವಿ ಮಾಡಲಾಗಿದೆ. ಈ ಪ್ರಸ್ತಾವನೆಯನ್ನು ಸಂಸ್ಕೃತಿ ಸಚಿವಾಲಯ ಕಳುಹಿಸಿದೆ.

ವಿಶ್ವ ಇಲೆವೆನ್‌ನೊಂದಿಗೆ ನಡೆಯಲಿರುವ ಈ ಪಂದ್ಯದ ಬಗ್ಗೆ ಮೂಲವೊಂದು ತಿಳಿಸಿದೆ. “ಆಗಸ್ಟ್ 22 ರಂದು ಭಾರತ ಮತ್ತು ವಿಶ್ವ 11 ನಡುವಿನ ಪಂದ್ಯವನ್ನು ಆಯೋಜಿಸಲು ನಾವು ಸರ್ಕಾರದಿಂದ ಪ್ರಸ್ತಾವನೆಯನ್ನು ಸ್ವೀಕರಿಸಿದ್ದೇವೆ. ಇದರಲ್ಲಿ ವಿಶ್ವದ ಕಡೆಯಿಂದ 13-14 ಆಟಗಾರರ ಅಗತ್ಯವಿದೆ” ಎಂದು ತಿಳಿಸಿದ್ದಾರೆ.

ಟೀಮ್ ಇಂಡಿಯಾ ಆಗಸ್ಟ್ 18 ರಿಂದ ಆಗಸ್ಟ್ 22 ರವರೆಗೆ ಜಿಂಬಾಬ್ವೆಯೊಂದಿಗೆ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಆಟಗಾರರು ಜಿಂಬಾಬ್ವೆ ಪ್ರವಾಸದಲ್ಲಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಆಟಗಾರರ ಲಭ್ಯತೆಯ ಬಗ್ಗೆಯೂ ಅನುಮಾನ ಮೂಡುತ್ತಿದೆ. ಅದೇ ವೇಳೆ ಪಾಕಿಸ್ತಾನದ ಆಟಗಾರರು ಆಡುವ ಬಗ್ಗೆ ಅನುಮಾನವಿದೆ. ಪಾಕಿಸ್ತಾನಿ ಆಟಗಾರರ ಲಭ್ಯತೆಯ ಬಗ್ಗೆ ಇನ್ನೂ ಏನೂ ಸ್ಪಷ್ಟತೆ ಇಲ್ಲ.