ಪುಟ್ಟ ದೇಶ ಕತಾರ್ ವಿಶ್ವಕಪ್ ಭಾರೀ ಯಶಸ್ಸು ಕಂಡಿದೆ. 29 ದಿನಗಳ ಕಾಲ್ಚೆಂಡಿನ ಸಮರಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಅಚ್ಚರಿ ಫಲಿತಾಂಶಗಳ ಜೊತೆಗೆ ಅನಿರೀಕ್ಷಿತಾ ಫಲಿತಾಂಶಗಳು ಆಘಾತ ನೀಡಿದವು. ಹತ್ತಾರೂ ದಾಖಲೆಗಳು ಕೂಡ ನಿರ್ಮಾಣವಾಗಿವೆ. ಟೂರ್ನಿಯ ವಿವರ ಇಲ್ಲಿದೆ.
ಸೋಲಿನೊಂದಿಗೆ ಆರಂಭ ಗೆಲುವಿನೊಂದಿಗೆ ಅಂತ್ಯ
ಅರ್ಜೆಂಟಿನಾ ತಂಡ ತನ್ನ ಮೊದಲ ಪಂದ್ಯದಲ್ಲಿ ಸೋತಾಗ ಸೌದಿ ಅರೇಬಿಯಾ ವಿರುದ್ಧ ಸೋತಾಗ ಎಲ್ಲರಿಗೂ ಆಘಾತವಾಯಿತು. ನಂತರ ಟೂರ್ನಿಯಿಂದ ಹೊರ ಬೀಳುವ ಸ್ಥಿತಿಯಲ್ಲಿದ್ದಾಗ ಅರ್ಜೆಂಟಿನಾ ಆಡಿದ ರೀತಿ ಅತ್ಯದ್ಭುತ . ಪ್ರತಿ ಪಂದ್ಯದಲ್ಲೂ ಎದುರಾಳಿ ರಕ್ಷಣ ಪಡೆಯನ್ನು ಬೇಸಿ ನಂತರ 3 ಪಂದ್ಯಗಳಲ್ಲಿ ಗೋಲು ಬಿಟ್ಟುಕೊಡದೇ ಪೆನಾಲ್ಟಿಯಲ್ಲಿ ಗೆದ್ದಿದ್ದು ಸ್ಫೂರ್ತಿದಾಯಕವಾಗಿದೆ.
ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಹೊಡೆದವರು
ಆಟಗಾರರು ದೇಶ ಗೋಲು
ಕೈಲಿಯಾನ್ ಎಂಬಾಪೆ ಫ್ರಾನ್ಸ್ 8
ಲಿಯೊನೆಲ್ ಮೆಸ್ಸಿ ಅರ್ಜೆಂಟಿನಾ 7
ಜೂಲಿಯನ್ ಅಲ್ವರಾಜ್ ಅರ್ಜೆಂಟಿನಾ 4
ಒಲಿವಿರ್ ಗಿರೌಡ್ ಫ್ರಾನ್ಸ್ 4
ಅಲ್ವರೊ ಮೊರಾಟಾ ಸ್ಪೇನ್ 3
ವಿಶ್ವಕಪ್ನಲ್ಲಿ ಒಂದೂ ಪಂದ್ಯ ಗೆಲ್ಲದ ತಂಡಗಳು
ಆತಿಥೇಯ ಕತಾರ್, ವೇಲ್ಸ್ ,ಡೆನ್ಮಾರ್ಕ್, ಸರ್ಬಿಯಾ ಮತ್ತು ಕೆನಡಾ. ಕತಾರ್ ಮತ್ತು ಕೆನಡಾ ಗುಂಪು ಹಂತದ ಮೂರು ಪಂದ್ಯಗಳನ್ನು ಸೋತಿವೆ.
ಅತಿ ಹೆಚ್ಚು ಗೋಲುಗಳನ್ನು ಹೊಡೆದ ಫ್ರಾನ್ಸ್
ಟೂರ್ನಿಯಲ್ಲಿ ಒಟ್ಟು 172 ಗೋಲುಗಳು ದಾಖಲಾಗಿವೆ. ರನ್ನರ್ಅಪ್ ಫ್ರಾನ್ಸ್ ಟೂರ್ನಿಯಲ್ಲಿ 16 ಗೋಲುಗಳನ್ನು ಹೊಡೆದಿವೆ. ಬೆಲ್ಜಿಯಂ,ಡೆನ್ಮರ್ಕ್, ಕತರ್,ಟ್ಯನೀಶಿಯಾ ಮತ್ತು ವೇಲ್ಸ್ ತಂಡಗಳು ತಲಾ 1 ಗೋಲುಗಳನ್ನು ಹೊಡೆದಿವೆ.