ಈ ಬಾರಿಯ ಫಿಫಾ ವಿಶ್ವಕಪ್ ಹಲವಾರು ಅಚ್ಚರಿ ಸಾಧನೆಗಳು ಹೊರ ಬಂವಿದೆ. ಆಚ್ಚರಿ ಫಲಿತಾಂಶಗಳು ಇಲ್ಲಿವೆ.
ಹ್ಯಾಟ್ರಿಕ್ ಗೋಲು ಹೊಡೆದವರು
ಟೂರ್ನಿಯಲ್ಲಿ 2 ಹ್ಯಾಟ್ರಿಕ್ ಗೋಲುಗಳು ದಾಖಲಾಗಿವೆ. ಪೋರ್ಚುಗಲ್ ತಂಡದ ಗೊನಕಾಲೊ ರಾಮೊಸ್ ಸ್ವೀಟ್ಜರ್ಲೆಂಡ್ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸಿದ್ದರು.ಫೈನಲ್ನಲ್ಲಿ ಅರ್ಜೆಂಟಿನಾ ವಿರುದ್ಧ ಕೈಲಿಯನ್ ಎಂಬಾಪೆ ಹ್ಯಾಟ್ರಿಕ್ ಗೋಲುಗಳನ್ನು ಹೊಡೆದರು.
ಅತಿ ಹೆಚ್ಚು ಪೆನಾಲ್ಟಿ ಅವಕಾಶ ಪಡೆದ ಮೆಸ್ಸಿ ಪಡೆ
ವಿಶ್ವಕಪ್ ಆವೃತ್ತಿಯೊಂದರಲ್ಲಿ ಅರ್ಜೆಂಟಿನಾ ಅತಿ ಹೆಚ್ಚು ಪೆನಾಲ್ಟಿ ಅವಕಾಶ ಪಡೆದ ದಾಖಲೆ ಬರೆದಿದೆ.ಕ್ವಾರ್ಟರ್, ಸಮಿಫೈನಲ್ ಹಾಗೂ ಫೈನಲ್ನಲ್ಲಿ ಪೆನಾಲ್ಟಿ ಎದುರಿಸಿದೆ. ಸಿಕ್ಕ 5 ಪೆನಾಲ್ಟಿಯಲ್ಲಿ 4 ಅವಕಾಶಗಳನ್ನು ಮೆಸ್ಸಿ ಗೋಲನ್ನಾಗಿ ಪರವರ್ತಿಸಿದ್ದಾರೆ. 1966ರಲ್ಲಿ ಡಚ್, 1978ರಲ್ಲಿ ಪೋರ್ಚುಗಲ್ ತಂಡಕ್ಕೆ ತಲಾ 4 ಪೆನಾಲ್ಟಿ ಅವಕಾಶ ಸಿಕ್ಕಿತ್ತು.
5ನೇ ವಿಶ್ವಕಪ್ ಆಡಿ ದಾಖಲೆ ಬರೆದ ಮೆಸ್ಸಿ
3 ಆಟಗಾರರು ಐದನೆ ವಿಶ್ವಕಪ್ ಆಡಿ ದಾಖಲೆ ಬರೆದಿದ್ದಾರೆ. ಮೆಕ್ಸಿಕೊದ ಆ್ಯಂಡ್ರೆಸ್ ಗೌರಡಾಡೊ, ಕ್ರಿಸ್ಟಿಯಾನೊ ರೊನಾಲ್ಡೊ (ಪೋರ್ಚುಗಲ್) ಮತ್ತು ಲಿಯೊನೆಲ್ ಮೆಸ್ಸಿ (ಅರ್ಜೆಂಟಿನಾ). ಮೆಸ್ಸಿ ವಿಶ್ವಕಪ್ನಲ್ಲಿ 5ನೇ ಬಾರಿ ಆಡಿದ್ದು 26 ಪಂದ್ಯಗಳನ್ನು ಆಡಿದ್ದಾರೆ.
ಗೋಲು ಬಾರಿಸಿದ ಅತಿ ಕಿರಿಯ ಆಟಗಾರ
ಸ್ಪೇನ್ ತಂಡದ ಗಾವಿ (18 ವರ್ಷ) ಕ್ಟೊಸ್ಟರಿಕಾ ವಿರುದ್ಧ ಗೋಲು ಬಾರಿಸಿದ ಟೂರ್ನಿಯ ಅತಿ ಕಿರಿಯ ಆಟಗಾರ ಎನಿಸಿದರು.
ಅತಿ ಹಿರಿಯ ಆಟಗಾರ
ಪೋರ್ಚುಗಲ್ ತಂಡದ ಪೆಪೆ (39 ವರ್ಷ) ಪ್ರಿಕ್ವಾರ್ಟರ್ನಲ್ಲಿ ಸ್ವೀಟ್ಜರ್ಲೆಂಡ್ ವಿರುದ್ಧ ಆಡಿದ್ದಾರೆ. ಟೂರ್ನಿಯ ಅತಿ ಹಿರಿಯ ಆಟಗಾರ ಎನಿಸಿದ್ದಾರೆ.
ಸೆಲ್ಫ್ ಗೋಲು ಹೊಡೆದವರು
ಮೊರಾಕ್ಕೊ ತಂಡದ ನಾಯೆï ಮತ್ತು ಅರ್ಜೆಂಟಿನಾ ತಂಡದ ಎನ್ಜೊ Éರ್ನಾನ್ಡೆಜ್ ಸೆಲ್ಪ್ ಗೋಲು ಯಡವಟ್ಟು ಮಾಡಿಕೊಂಡಿದ್ದಾರೆ.
ಸಹಾಯಕರ ನೆರವಿನಿಂದ ಗೋಲು ಹೊಡೆದವರು
5 ಆಟಗಾರರು ವಿಶ್ವಕಪ್ನಲ್ಲಿ ಅತಿಇ ಹೆಚ್ಚು ಬಾರಿ ಸಹಾಯಕ ಆಟಗಾರರ ನೆರವಿನಿಂದ ಗೋಲು ಹೊಡೆದಿದ್ದಾರೆ. ಫ್ರಾನ್ಸ್ನ ಆ್ಯಂಟೋನಿ ಗ್ರಿಜ್ಮನ್,ಲಿಯೊನೆಲ್ ಮೆಸ್ಸಿ (ಅರ್ಜೆಂಟಿನಾ ), ಬ್ರುನೊ ಫೆರ್ನಾಂಡೀಸ್, (ಪೋರ್ಚುಗಲ್), ಹ್ಯಾರಿ ಕೇನ್ (ಇಂಗ್ಲೆಂಡ್), ಇವಾನ್ ಪೆರಿಸಿಕ್ (ಕ್ರೊವೇಷಿಯಾ).
ಅಮೆರಿಕದಲ್ಲಿ ಮುಂದಿನ ವಿಶ್ವಕಪ್
23ನೇ ಆವೃತ್ತಿಯ ವಿಶ್ವಕಪ್ ಮೊದಲ ಬಾರಿಗೆ 3 ದೇಶಗಳಲ್ಲಿ ನಡೆಯಲಿದೆ. ಉತ್ತರ ಅಮೆರಿಕಾದ ಕೆನಡಾ, ಯುಎಸ್ಎ ಮತ್ತು ಮೆಕ್ಸಿಕೊ ಆತಿಥಯ ವಹಿಸಲಿವೆ. 2026ರ ವಿಶ್ವಕಪ್ನಲ್ಲಿ 48 ತಂಡಗಳು ಪ್ರಶಸ್ತಿಗಾಗಿ ಹೋರಾಡಲಿವೆ.
ವೀಕ್ಷೆಣೆಯಲ್ಲೂ ದಾಖಲೆ ಬರೆದ ಫಿಫಾ ವಿಶ್ವಕಪ್
ಫಿಫಾ ವಿಶ್ವಕಪ್ ಫೂಟ್ಬಾಲ್ ವೀಕ್ಷಣೆ ಹಿಂದೆದೂ ಕಾಣದ ದಾಖಲೆ ಕಂಡಿದೆ. ಜಿಯೋ ಸಿನಿಮಾದಲ್ಲಿ ಬರೋಬ್ಬರಿ 110 ಮಿಲಿಯನ್ ವೀಕ್ಷಕರು ಈ ಬಾರಿ ಫುಟ್ಬಾಲ್ ಪಂದ್ಯಗಳನ್ನು ಡಿಜಿಟಲ್ ಸ್ಟ್ರೀಮಿಂಗ್ ಮೂಲಕ ವೀಕ್ಷಿಸಿದ್ದಾರೆ.