ಫಿಫಾ ವಿಶ್ವಕಪ್ ಮತ್ತೊಂದು ಅನಿರೀಕ್ಷಿತಾ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ದುರ್ಬಲ ಟ್ಯುನೀಶಿಯಾ ತಂಡ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಸೋಲಿಸಿ ಆಘಾತ ನೀಡಿದೆ. ಈ ಪಂದ್ಯವನ್ನು ಗೆದ್ದರೂ ಟ್ಯುನೀಶಿಯಾ ನಾಕೌಟ್ ಹಂತಕ್ಕೇರುವಲ್ಲಿ ವಿಫಲವಾಗಿದೆ.
ಇಲ್ಲಿನ ಎಜುಕೇಷನ್ ಸಿಟಿ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ವಹಾಬಿ ಖಾಜ್ರಿ ಹೊಡೆದ ಏಕೈಕ ಗೋಲಿನಿಂದ ಟ್ಯುನೀಶಿಯಾ ಐತಿಹಾಸಿಕ ಸಾಧನೆ ಮಾಡಿತು. ಸತತ 6 ಪಂದ್ಯಗಳನ್ನು ಗೆದ್ದು ಮುನ್ನಗುತ್ತಿದ್ದ ಫ್ರಾನ್ಸ್ ಓಟಕ್ಕೆ ಟ್ಯುನೀಶಿಯಾ ಬ್ರೇಕ್ ಹಾಕಿದೆ.
ಬಲಿಷ್ಠ ಫ್ರಾನ್ಸ್ ತಂಡ ತಂಡದಲ್ಲಿ 9 ಬದಲಾವಣೆಗಳನ್ನು ಮಾಡಿ ಕಣಕ್ಕಿಳಿದಿತ್ತು.
ಮೊದಲ ಅವಧಿಯಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ ಫ್ರೀಕಿಕ್ ಅವಕಾಶ ಪಡೆದಿದ್ದ ಫ್ರಾನ್ಸ್ ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಗಿತ್ತು.
ಎರಡನೆ ಅವಯ 58ನೇ ನಿಮಿಷದಲ್ಲಿ ವಹಾಬಿ ಆಕರ್ಷಕವಾಗಿ ಗೋಲು ಹೊಡೆದರು. ಫ್ರಾನ್ಸ್ ತಂಡ 10 ಶಾಟ್, 618 ಪಾಸ್‍ಗಳನ್ನು ಮಾಡಿದರೂ ಪ್ರಯೋಜನವಾಗಲಿಲ್ಲ.
ಫ್ರಾನ್ಸ್ ತಂಡದ ಹೆಚ್ಚುವರಿ ಆಟಗಾರ ಆ್ಯಂಟೋನಿ ಗ್ರೀಜ್‍ಮನ್ ಗೋಲು ಹೊಡೆಯಲು ಪ್ರಯತ್ನಿಸಿದರೂ ಟ್ಯುನೀಶಿಯಾ ಅವಕಾಶ ನೀಡಲಿಲ್ಲ.

3ನೇ ಬಾರಿ ಆಫ್ರಿಕಾ ದೇಶಗಳಿಂದ ಶಾಕ್
ವಿಶ್ವ ಕಪ್ ಚಾಂಪಿಯನ್ ತಂಡಗಳಿಗೆ ಮೂರನೆ ಬಾರಿಗೆ ಆಫ್ರಿಕಾ ದೇಶಗಳು ಶಾಕ್ ಕೊಟ್ಟಿದೆ. 1990ರಲ್ಲಿ ಕ್ಯಾಮರೂನ್ ತಂಡ ಅರ್ಜೆಂಟಿನಾ ವಿರುದ್ಧ 1-0 ಗೋಲಿನಿಂದ ಸೋಲಿಸಿತ್ತು. 2002ರಲ್ಲಿ ಸೆನೆಗಲ್ ತಂಡ ಫ್ರಾನ್ಸ್ ತಂಡವನ್ನ 1-0 ಗೋಲಿನಿಂದ ಸೋಲಿಸಿದೆ.ಇದೀಗ ಟ್ಯುನೀಶಿಯಾ ಫ್ರಾನ್ಸ್‍ಗೆ ಮತ್ತೆ ಆಘಾತ ಕೊಟ್ಟಿದೆ.