ಪೋಲೆಂಡ್ ವಿರುದ್ಧ ದಿಟ್ಟ ಹೋರಾಟ ನೀಡಿದ ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ವಿಶ್ವಕಪ್‍ನಲ್ಲಿ ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿದೆ.
ತಡರಾತ್ರಿ ಇಲ್ಲಿ 974 ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅರ್ಜೆಂಟಿನಾ ತಂಡ ಪೋಲೆಂಡ್ ತಂಡವನ್ನು 2-0 ಗೋಲುಗಳಿಂದ ಮಣಿಸಿತು. ನಾಕೌಟ್ ಹಂತದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಮೊದಲಾರ್ಧದಲ್ಲಿ ಯಾವುದೇ ಗೋಲುಗಳು ದಾಖಲಾಗಿಲ್ಲ. ಆದರೆ ಪೆನಾಲ್ಟಿ ಅವಕಾಶವನ್ನು ಗೋಲನ್ನಾಗಿ ಪರಿವರ್ತಿಸುವಲ್ಲಿ ನಾಯಕ ಮೆಸ್ಸಿ ಎಡವಿದರು.
ಎರಡನೆ ಅವಧಿಯ 46ನೇ ನಿಮಿಷದಲ್ಲಿ ಅರ್ಜೆಂಟಿನಾ ತಂಡದ ಮ್ಯಾಕ್ ಅಲಿಸ್ಟರ್ ಗೋಲು ಹೊಡೆದರು. 67ನೇ ನಿಮಿಷದಲ್ಲಿ ಜೂಲಿಯನ್ ಅಲ್ವರೇಜ್ ಎರಡನೆ ಗೊಲು ಹೊಡೆದು ಪೋಲೆಂಡ್ ಮೇಲೆ ಒತ್ತಡ ಹೆಚ್ಚಿಸಿದರು.
ಒತ್ತಡದಲ್ಲಿಯೇ ಆಡಿದ ಪೋಲೆಂಡ್ ಗೋಲ್ ಪೋಸ್ಟ್ ಗುರಿಯಾಗಿಸಿ ದಾಳಿ ನಡೆಸುವಲ್ಲಿ ವಿಫಲರಾದರು.
6 ಅಂಕಗಳೊಂದಿಗೆ ಅರ್ಜೆಂಟಿನಾ ನಾಕೌಟ್ ಹಂತ ತಲುಪುವ ಜೊತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಗುಂಪು ಹಂತವನ್ನು ಪೂರ್ಣಗೊಳಿಸಿದೆ. ಇನ್ನು ಪೋಲೆಂಡ್ ತಂಡ ಸೋತರೂ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನದೊಂದಿಗೆ ನಾಕೌಟ್ ಪ್ರವೇಶಿಸಿದೆ. ನಾಕೌಟ್‍ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಎದುರಿಸಲಿದೆ.