ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯ ಇಂದು ನಡೆಯಲಿದ್ದು ಅರ್ಜೆಂಟಿನಾ ಹಾಗೂ ಫ್ರಾನ್ಸ್ ಪ್ರಶಸ್ತಿಗಾಗಿ ಅಂತಿಮ ಕಾದಾಟ ನಡೆಸಲಿವೆ.
ಭಾನುವಾರ ಲೂಸೇಲ್ ಮೈದಾನದಲ್ಲಿ ವಿಶ್ವ ಫುಟ್ಬಾಲ್ನ ಎರಡೂ ಬಲಿಷ್ಠ ತಂಡಗಳಾದ ಅರ್ಜೆಂಟಿನಾ ಹಾಗೂ ಫ್ರಾನ್ಸ್ ವಿಶ್ವಕಪ್ ಗೆಲ್ಲುವುದಕ್ಕಾಗಿ ಮದಗಜಗಳಂತೆ ಹೋರಾಟ ಮಾಡಲಿವೆ.
ವಿಶ್ವಕಪ್ನಲ್ಲಿ ಎರಡೂ ತಂಡಗಳು ತಲಾ ಎರಡು ಬಾರಿ ಚಾಂಪಿಯನ್ ಆಗಿದ್ದು ಮೂರನೆ ಬಾರಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿವೆ.
ವಿಶ್ವ ಫುಟ್ಬಾಲ್ ಕಂಡ ಶ್ರೇಷ್ಠ ಆಟಗಾರ ಲಿಯೊನೆಲ್ ಮೆಸ್ಸಿ ತಮ್ಮ ವೃತ್ತಿ ಜೀವನದ ಅಂಚಿನಲ್ಲಿದ್ದು ಈ ವಿಶ್ವಕಪ್ ಗೆದ್ದರೆ ಪೀಲೆ, ಮಾಡೊದನಾರಂತೆ ಶ್ರೇಷ್ಠ ಆಟಗಾರರ ಸಾಲಿಗೆ ಸೇರಲಿದ್ದಾರೆ.
ಮತ್ತೊಂದೆಡೆ ಫ್ರಾನ್ಸ್ ತಂಡದ ತಾರಾ ಆಟಗಾರ ಎಂಬಾಪೆ ಫೈನಲ್ಪಂದ್ಯದಲ್ಲೂ ತಂಡಕ್ಕೆ ಗೆಲುವು ದೊರಕಿಸಿಕೊಟ್ಟು ಮೆಸ್ಸಿ ಮತ್ತು ರೊನಾಲ್ಡೊ ಅವರನ್ನು ಹಿಂದಿಕ್ಕಲು ಅವಕಾಶ ಸಿಕ್ಕಿದೆ.
ಫ್ರಾನ್ಸ್ ತಂಡ ಮೂರನೆ ಬಾರಿ ವಿಶ್ವಕಪ್ ಗೆದ್ದು 2 ಬಾರಿ ಪ್ರಶಸ್ತಿ ಗೆದ್ದಿರುವ ಬ್ರೆಜಿಲ್ನ ಪೀಲೆ ಅವರ ದಾಖಲೆಯನ್ನು ಸರಿಗಟ್ಟಲು ನಿರ್ಧರಿಸಿದೆ.
ಫ್ರಾನ್ಸ್ ತಂಡದ ಎಂಬಾಪೆ 2018ರ ವಿಶ್ವಕಪ್ ಆಡುವಾಗ 19 ವರ್ಷ ಆಗಿತ್ತು. 1958ರ ವಿಶ್ವಕಪ್ನಲ್ಲಿ ಪೀಲೆಗೆ 17 ವರ್ಷ. ನಂತರ 1962ರ ವಿಶ್ವಕಪ್ನಲ್ಲಿ ಬ್ರೆಜಿಲ್ಗೆ ಪ್ರಶಸ್ತಿ ಕೊಡಿಸುವಲ್ಲಿ ಯಶಸ್ಸು ಕಂಡರು. ಎಂಬಾಪೆ ಕೂಡ ಇದೇ ಹಾದಿಯಲ್ಲಿದ್ದು. ಎಂಬಾಪೆ ಪ್ರದರ್ಶನ ತುಂಬ ಮುಖ್ಯವಾಗಿದೆ.
ಈ ಶತಮಾನದ ಬಲಿಷ್ಟ ತಂಡವಾಗಿ ಗುರುತಿಸಿಕೊಂಡಿರುವ ಫ್ರಾನ್ಸ್ ಬ್ರೆಜಿಲ್ ನಂತರ ಸತತ ಎರಡು ಪ್ರಶಸ್ತಿಗೆ ಗೆದ್ದ ತಂಡವೆನಿಸಿಕೊಳ್ಳಲು ಎದುರು ನೋಡುತ್ತಿದೆ.
ಫ್ರಾನ್ಸ್ನಂತೆ ಅರ್ಜೆಂಟಿನಾ ಮೂರನೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. 1978 ಮತ್ತು 1986ರಲ್ಲಿ ವಿಶ್ವಕಪ್ ಗೆದ್ದಿತ್ತು.ಇದೀಗ 36 ವರ್ಷಗಳ ಬಳಿಕ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ಪ್ರಯತ್ನದಲ್ಲಿದೆ.
ದಂತಕತೆ ಮಾರ್ಡೊನಾ ಅವರಂತೆ ಮೆಸ್ಸಿ ಅವರನ್ನು ನೋಡಲಾಗುತ್ತಿದ್ದು ಭಾನುವಾರ 26ನೇ ವಿಶ್ವಕಪ್ ಪಂದ್ಯ ಆಡಲಿದ್ದಾರೆ.
ಟೂರ್ನಿಯಲ್ಲಿ ಅರ್ಜೆಂಟಿನಾ ಹಾದಿ
ಮೆಕ್ಸಿಕೊ ವಿರುದ್ಧ 0-2 ಗೋಲಿನಿಂದ ಸೋಲು
ಪೋಲೆಂಡ್ ವಿರುದ್ಧ 2-0 ಗೆಲುವು
ಪ್ರಿ ಕ್ವಾರ್ಟರ್
ಆಸ್ಟ್ರೇಲಿಯಾ ವಿರುದ್ಧ 2-1 ಗೆಲುವ
ಕ್ವಾರ್ಟರ್
ನೆದರ್ಲೆಂಡ್ ವಿರುದ್ಧ 2-2 ಡ್ರಾ (ಪೆನಾಲ್ಟಿಯಲ್ಲಿ ಗೆಲುವು)
ಸೆಮಿಫೈನಲ್
ಕ್ರೊವೇಷಿಯಾ ವಿರುದ್ಧ 3-0 ಗೆಲುವು
ಟೂರ್ನಿಯಲ್ಲಿ ಫ್ರಾನ್ಸ್ ಹಾದಿ
ಡೆನ್ಮಾರ್ಕ್ ವಿರುದ್ಧ 2-1 ಗೆಲುವು
ಟ್ಯುನೀಶಿಯಾ ವಿರುದ್ಧ 0-1 ಸೋಲು
ಪ್ರಿ ಕ್ವಾರ್ಟರ್
ಪೋಲೆಂಡ್ ವಿರುದ್ಧ 3-1 ಗೆಲುವು
ಕ್ವಾರ್ಟರ್ ಫೈನಲ್
ಇಂಗ್ಲೆಂಡ್ ವಿರುದ್ಧ 2-1 ಗೆಲುವು
ಸೆಮಿಫೈನಲ್
ಮೊರಾಕ್ಕೊ ವಿರುದ್ಧ 2-0 ಗೆಲುವು