ಪ್ರೊ ಕಬಡ್ಡಿ 9ನೇ ಆವೃತ್ತಿಯಲ್ಲಿ ಬಲಿಷ್ಠ ಜೈಪುರ ಪಿಂಕ್ ಪ್ಯಾಂಥರ್ಸ್ ನೂತನ ಚಾಂಪಿಯನ್ನಾಗಿ ಹೊರ ಹೊಮ್ಮಿದೆ. ಪ್ರೊರಕಬಡ್ಡಿ ಇತಿಹಾಸದಲ್ಲಿ ಜೈಪುರ ಎರಡನೆ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಶನಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಜೈಪುರ ತಂಡ ಪುಣೇರಿ ವಿರುದ್ಧ 33-29 ಅಂಕಗಳಿಂದ ಗೆದ್ದುಕೊಂಡಿತು. ಪಂದ್ಯದ ಆರಂಭದಿಂದಲೂ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯ ಕೊನೆಯವರೆಗೂ ರೋಚಕವಾಗಿ ಸಾಗಿತು.
ಮೊದಲಾರ್ಧದಲ್ಲಿ ಜೈಪುರ ತಂಡ 14-12 ಅಂಕಗಳಿಂದ ಮುನ್ನಡೆ ಪಡೆಯಿತು. ರೈಡಿಂಗ್ನಲ್ಲಿ ಮಿಂಚಿದ ಜೈಪುರ ಮೊದಲ ಅವಯಲ್ಲಿ 7 ಅಂಕ ಪಡೆದರೆ ಪುಣೆ ತಂಡ 3 ಅಂಕ ಪಡೆಯಿತು.
ಜೈಪುರ ಪರ ರೈಡರ್ಗಳಾದ ಅರ್ಜುನ್ ದೇಶ್ವಾಲ್ 6, ಅಜಿತ್ 6 ಅಂಕ ಪಡೆರು. ಪುಣೆ ಪರ ರೈಡರ್ ಆದಿತ್ಯ ಶಿಂಧೆ 5 ಹಾಗೂ ಆಕಾಶ್ 4 ಅಂಕ ಪಡೆದರು.
ಟ್ಯಾಕ್ಲಿಂಗ್ನಲ್ಲಿ ಪುಣೆ 7 ಅಂಕ ಜೈಪುರ 6 ಅಂಕ ಪಡೆಯಿತು. ನಿರ್ಣಾಯಕ 2ನೇ ಅವಧಿಯಲ್ಲಿ ಪುಣೇರಿ ತಂಡ ಜೈಪುರ ತಂಡಕ್ಕೆ ಕಠಿಣ ಸವಾಲನ್ನು ನೀಡಿತು. ಆದರೂ ಜೈಪುರ ತಂಡ ಪುಣೆ ತಂಡವನ್ನು 2 ಬಾರಿ ಆಲೌಟ್ ಮಾಡಿ ಅಂಕವನ್ನು ಹೆಚ್ಚಿಸಿಕೊಂಡಿತು.
ಕೊನೆಯಲ್ಲಿ 30-25 ಗಳಾಗಿದ್ದಾಗ ಪುಣೆ ತಂಡ ಅಂಕಗಳನ್ನು ಹೆಚ್ಚಿಸಿಕೊಂಡು ಗೆಲುವಿಗೆ ಪ್ರಯತ್ನಿಸಿತು. ಆದರೆ ಸಾಧ್ಯವಾಗದೇ 4 ಅಂಕಗಳಿಂದ ಸೋಲು ಕಂಡಿತು.
ಪ್ರಶಸ್ತಿ ಮೊತ್ತ
ಚಾಂಪಿಯನ್ ಜೈಪುರ : 3 ಕೋಟಿ
ರನ್ನರ್ ಅಪ್ : ಪುಣೇರಿ : 1.8 ಕೋಟಿ