ಮಳೆ ಅಡ್ಡಿಪಡಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಫೈನಲ್ ಪಂದ್ಯವನ್ನು ಐಸಿಸಿ ಟಿ20 ವಿಶ್ವಕಪ್ ಆಯೋಜಕರು ಸಮಯವನ್ನು ಬದಲಿಸಿದ್ದಾರೆ.
ನ.13ರಂದು ಐತಿಹಾಸಿಕ ಎಂಸಿಜೆ ಮೈದಾನದಲ್ಲಿ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವೆ ಅಂತಿಮ ಕದನ ನಡೆಯಲಿದೆ.ಆದರೆ ಹವಾಮಾನ ಇಲಾಖೆ ಪ್ರಕಾರ ಮಳೆಯಾಗಲಿದೆ ಎಂದು ತಿಳಿಸಿದೆ. ತಾಂತ್ರಿಕಾ ಸಮಿತಿ ಕೂಡ ಪಂದ್ಯವನ್ನು ಮೀಸಲು ದಿನದಂದು ನಡೆಸಲು ನಿರ್ಧರಿಸಿದೆ.
ಪಂದ್ಯ ಪೂರ್ಣಗೊಳಿಸಲು ಕಷ್ಟವಾಗುವ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ 2 ಗಂಟೆ ನೀಡಲಾಗಿದೆ.ನಂತರವೂ ಮಳೆ ಬಂದರೆ 10 ಓವರ್ ಆಡಿಸಲಾಗುತ್ತದೆ. ಮಳೆ ನಿಲ್ಲದಿದ್ದರೆ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
ಭಾನುವಾರವೇ ಪಂದ್ಯವನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು. ಓವರ್ ಕಡಿಮೆ ಮಾಡಿ ಅಡಿಸಲಾಗುವುದು ಒಂದು ವೇಳೆ ಒಂದೂ ಎಸೆತವನ್ನೂ ಹಾಕಲು ಸಾಧ್ಯವಾಗದಿದ್ದರೆ ಮೀಸಲು ದಿನದಂದು ಆಡಿಸಲಾಗುವುದು. ಮೀಸಲು ದಿನದಂದು ನಿಗದಿಯಂತೆ ಆಡಿಸಲಾಗುವುದೆಂದು ಐಸಿಸಿ ಹೇಳಿದೆ.
ಅತಿ ಹೆಚ್ಚು ಮಳೆಯಾಗಿದ್ದು ಮೆಲ್ಬೊರ್ನ್ನಲ್ಲಿ ಆಗಿದ್ದ ಕಾರಣ ಟೂರ್ನಿಯಲ್ಲಿ ಬಹುತೇಕ ಪಂದ್ಯಗಳು ಡಿಎಲ್ ಮಾದರಿ ಆಧಾರದ ಮೇಲೆ ನಿರ್ಧರಿಸಲಾಗಿದೆ ಮತ್ತು ಕೆಲವು ಪಂದ್ಯಗಳು ರದ್ದಾಗಿವೆ.
ಪಾಕಿಸ್ತಾನ ಕಾಂಗರೂ ನಾಡಲ್ಲಿ ಟಿ20 ವಿಶ್ವಕಪ್ ಗೆದ್ದು ಮತ್ತೊಮ್ಮೆ ಇತಿಹಾಸ ನಿರ್ಮಿಸಲು ಸಜ್ಜಾಗುತ್ತಿದೆ. ಇಂಗ್ಲೆಂಡ್ ಕೂಡ ಚಾಂಪಿಯನ್ ಪಟ್ಟ ಅಲಂಕರಿಸಲು ಸಜ್ಜಾಗುತ್ತಿದೆ.