IPL – ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಕಳಪೆ ಪ್ರದರ್ಶನ ನೀಡಲು ಐಪಿಎಲ್ ಕಾರಣವಂತೆ..!
ಐಪಿಎಲ್ ಅಂದ್ರೆ ಬರೀ ದುಡ್ಡು ಮತ್ತು ಮನರಂಜನೆಗೆ ಸೀಮಿತವಾಗಿಲ್ಲ. ಹಾಗೇ ಐಪಿಎಲ್ ನಿಂದ ಬಿಸಿಸಿಐ ತನ್ನ ಬೊಕ್ಕಸವನ್ನು ತುಂಬಿಸಿಕೊಂಡಿರಬಹುದು. ಫ್ರಾಂಚೈಸಿಗಳು ಐಪಿಎಲ್ ಅನ್ನೇ ಉದ್ಯಮವನ್ನಾಗಿಸಿಕೊಂಡಿರಬಹುದು. ಆದ್ರೆ ಐಪಿಎಲ್ ನಿಂದ ಅನೇಕ ಯುವ ಕ್ರಿಕೆಟಿಗರ ಬದುಕು ಬಂಗಾರವಾಗಿದೆ.
ಅಂದ ಹಾಗೇ ಐಪಿಎಲ್ ನಲ್ಲಿ ಆಟಗಾರರಿಗೆ ಕೇವಲ ದುಡ್ಡು ಮಾತ್ರ ಸಿಗುತ್ತಿಲ್ಲ. ಜೊತೆಗೆ ತಮ್ಮ ಪ್ರತಿಭೆ, ಸಾಮಥ್ರ್ಯವನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಹೀಗಾಗಿ ಐಪಿಎಲ್ ನಲ್ಲಿ ಮಿಂಚಿದ ಹಲವು ಆಟಗಾರರು ಟೀಮ್ ಇಂಡಿಯಾದಲ್ಲಿ ಸ್ಥಾನಪಡೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಕ್ರಿಕೆಟ್ ಆಟಗಾರರು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.
ಆದ್ರೆ ಇಂಗ್ಲೆಂಡ್ ಟೆಸ್ಟ್ ತಂಡದ ಕಳಪೆ ಪ್ರದರ್ಶನಕ್ಕೆ ಐಪಿಎಲ್ ಕಾರಣ ಅನ್ನೋ ಮಾತುಗಳು ಈಗಾಗಲೇ ಕೇಳಿಬಂದಿವೆ.
ಇದಕ್ಕೆ ಪೂರಕವಾಗಿ ಇದೀಗ ದಕ್ಷಿಣ ಆಫ್ರಿಕಾದ ಮಾಜಿ ಕೋಚ್ ಮಿಕ್ ಅರ್ಥರ್ ಕೂಡ ಐಪಿಎಲ್ ವಿರುದ್ಧ ಕಿಡಿ ಕಾರಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತನ್ನ ಆಟಗಾರರನ್ನು ಐಪಿಎಲ್ ನಲ್ಲಿ ಆಡುವುದನ್ನು ನಿಲ್ಲಿಸಬೇಕು. ಇಲ್ಲದೆ ಇದ್ರೆ ಇಂಗ್ಲೆಂಡ್ ತಂಡ ಸುಧಾರಣೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಆಶಷ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 4-0 ಅಂತರದಿಂದ ಸೋತ ಬಳಿಕ ಇಂಗ್ಲೆಂಡ್ ಟೆಸ್ಟ್ ತಂಡದ ವಿರುದ್ದ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಅಲ್ಲದೆ ಬ್ಯಾಟಿಂಗ್ ಕೋಚ್ ಗ್ರಹಾಂ ಥೋರ್ಪೆ, ಹೆಡ್ ಕೋಚ್ ಕ್ರಿಸ್ ಸಿಲ್ವರ್ ವುಡ್, ಮ್ಯಾನೇಜಿಂಗ್ ಡೈರೆಕ್ಟರ್ ಆಶ್ಲೇ ಗಿಲ್ಸ್ ಅವರು ತಮ್ಮ ಹುದ್ದೆಗಳಿಂದ ಹೊರನಡೆಯಬೇಕಾಯ್ತು.
ಮಿಕಿ ಅರ್ಥರ್ ಅವರು ಶ್ರೀಲಂಕಾ ತಂಡದ ಹೆಡ್ ಕೋಚ್ ನಿಂದ ಹೊರನಡೆದ ನಂತರ ಇದೀಗ ಇಂಗ್ಲೆಂಡ್ ನ ಕೌಂಟಿ ತಂಡವಾಗಿರುವ ಡರ್ಬಿಶೈರ್ ತಂಡದ ಹೆಡ್ ಕೋಚ್ ಆಗಿದ್ದಾರೆ. England must stop players from playing in IPL
ಕೌಂಟಿ ಕ್ರಿಕೆಟ್ ಅನ್ನು ದೂಷನೆ ಮಾಡುವುದು ಸರಿಯಲ್ಲ. ಕೌಂಟಿ ಕ್ರಿಕೆಟ್ ನಿಂದ ಸಾಕಷ್ಟು ಅಂತಾರಾಷ್ಟ್ರೀಯ ಅಟಗಾರರು ಬೆಳಕಿಗೆ ಬಂದಿದ್ದಾರೆ. ಕೌಂಟಿ ಕ್ರಿಕೆಟ್ ನ ಸಿಸ್ಟಮ್ ನಿಂದ ಯಾವುದೇ ರೀತಿಯಲ್ಲೂ ಇಂಗ್ಲೆಂಡ್ ತಂಡಕ್ಕೆ ಸಮಸ್ಯೆಯಾಗಿಲ್ಲ. ಆದ್ರೆ ತೊಂದರೆಯಾಗಿರುವುದು ಐಪಿಎಲ್ ನಿಂದ. ಐಪಿಎಲ್ ಕ್ರಿಕೆಟ್ ಋತುವಿನ ಆರಂಭದಲ್ಲೇ ಆರಂಭವಾಗುತ್ತದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಇಂಗ್ಲೆಂಡ್ ಆಟಗಾರರಿಗೆ ಐಪಿಎಲ್ ನಲ್ಲಿ ಆಡಲು ಅವಕಾಶ ನೀಡಬಾರದು ಎಂದು ಮಿಕಿ ಅರ್ಥರ್ ಅಭಿಪ್ರಾಯಪಟ್ಟಿದ್ದಾರೆ.
ಏಕದಿನ ಮತ್ತು ಟಿ-20 ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ತಂಡ ಅದ್ಭುತವಾಗಿದೆ. ಆದ್ರೆ ಟೆಸ್ಟ್ ಕ್ರಿಕೆಟ್ ನಲ್ಲಿ ಕಳಪೆ ಮಟ್ಟದ ನಿರ್ವಹಣೆ ನೀಡಿದೆ. ಆದ್ರೆ ಇದಕ್ಕೆ ಐಪಿಎಲ್ ಕಾರಣ ಅನ್ನೋದು ಎಷ್ಟರ ಮಟ್ಟಿಗೆ ಸರಿ. ಅಷ್ಟಕ್ಕೂ ಇಂಗ್ಲೆಂಡ್ ನ ಎಷ್ಟು ಮಂದಿ ಆಟಗಾರರು ಐಪಿಎಲ್ ನಲ್ಲಿ ಆಡುತ್ತಾರೆ ಅನ್ನೋ ಪ್ರಶ್ನೆ ಕೂಡ ಎದುರಾಗುತ್ತಿದೆ.