ಚಾಣಾಕ್ಷ ಬ್ಯಾಟಿಂಗ್ನಿಂದಲೇ ವಿಶ್ವ ಕ್ರಿಕೆಟ್ನಲ್ಲಿ ಸದ್ದು ಮಾಡಿದ್ದ ಟೀಂ ಇಂಡಿಯಾದ ರನ್ ಮಷಿನ್ ಎನಿಸಿರೋ ವಿರಾಟ್ ಕೊಹ್ಲಿ, ಇತ್ತೀಚಿಗೆ ತಮ್ಮ ಬ್ಯಾಟಿಂಗ್ ಖದರ್ ಕಳೆದುಕೊಂಡಿದ್ದಾರೆ. ಸತತ ಬ್ಯಾಟಿಂಗ್ ವೈಫಲ್ಯದಿಂದ ಟೀಕೆಗೆ ಗುರಿಯಾಗಿರೋ ಕಿಂಗ್ ಕೊಹ್ಲಿ, ಇಂದಿನಿಂದ ಆರಂಭವಾಗಲಿರೋ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ತಮ್ಮ ಅಸಲಿ ಖದರ್ ತೋರಿಸುವರೇ ಎಂಬ ಪ್ರಶ್ನೆ ವಿರಾಟ್ ಅಭಿಮಾನಿಗಳನ್ನ ಕಾಡುತ್ತಿದೆ.
ಒಂದು ಕಾಲದಲ್ಲಿ ಟೀಂ ಇಂಡಿಯಾದ ಬಲಿಷ್ಠ ಬ್ಯಾಟಿಂಗ್ ಶಕ್ತಿಯಾಗಿದ್ದ ಕೊಹ್ಲಿ, ಇತ್ತೀಚಿನ ವರ್ಷಗಳಲ್ಲಿ ಬ್ಯಾಟಿಂಗ್ನಲ್ಲಿ ನಿರೀಕ್ಷಿತ ಸಕ್ಸಸ್ ಕಂಡಿಲ್ಲ. ಪ್ರಮುಖವಾಗಿ ಚುಟುಕು ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ಅತ್ಯಂತ ನೀರಸವಾಗಿದೆ. ಹೀಗಾಗಿ ಕೊಹ್ಲಿ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾದರು, ನಂಬರ್ ಗೇಮ್ನಲ್ಲಿ ಕಿಂಗ್ ಕೊಹ್ಲಿ, ಅತ್ಯಂತ ಬಲಿಷ್ಠವಾಗಿದ್ದಾರೆ.
2021ರಲ್ಲಿ 10 ಟಿ20 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ, 74ಕ್ಕೂ ಅಧಿಕ ಬ್ಯಾಟಿಂಗ್ ಸರಾಸರಿಯಲ್ಲಿ 4 ಅರ್ಧಶತಕಗಳಿಂದ ಕೂಡಿದ 290 ರನ್ಗಳಿಸಿದ್ದಾರೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಬಳಿಕ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿದಿರುವ ವಿರಾಟ್ ಕೊಹ್ಲಿ, ತವರಿನಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಯಲ್ಲಿ ಅಬ್ಬರಿಸೋ ನಿರೀಕ್ಷೆಯಲ್ಲಿದ್ದಾರೆ.
ಈ ನಡುವೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್, ಕೆರೆಬಿಯನ್ನರ ವಿರುದ್ಧದ ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ, ನಾಯಕತ್ವದ ಹೊರತಾಗಿಯೂ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದಿದ್ದಾರೆ. ಖಾಸಗಿ ಸ್ಪೋರ್ಟ್ಸ್ ವಾಹಿನಿಯ ಗೇಮ್ ಪ್ಲ್ಯಾನ್ ಶೋನಲ್ಲಿ ಮಾತನಾಡಿದ ಅಗರ್ಕರ್, ಸ್ಟಾರ್ ಪ್ಲೇಯರ್ ಕಿಂಗ್ ಕೋಹ್ಲಿ, ಬೌಲರ್ಗಳ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ನೀಡಬೇಕೋ ಅಥವಾ ಆಂಕರ್ ರೋಲ್ ನಿಭಾಯಿಸಬೇಕೋ ಎಂಬ ಬಗ್ಗೆ ಟೀಂ ಮ್ಯಾನೇಜ್ಮೆಂಟ್ ಸ್ಪಷ್ಟನೆ ನೀಡಬೇಕಿದೆ ಎಂದಿದ್ದಾರೆ.
ಟೀಂ ಇಂಡಿಯಾದ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿದಿರುವ ವಿರಾಟ್ ಕೊಹ್ಲಿ, ಮೊದಲ ಬಾರಿಗೆ ರೋಹಿತ್ ಶರ್ಮ ನಾಯಕತ್ವದಲ್ಲಿ ಟಿ20 ಸರಣಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿ, ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಇಂದಿನಿಂದ ಆರಂಭವಾಗಲಿದೆ.