ಕ್ರೈಸ್ಟ್ಚರ್ಚ್ನಲ್ಲಿ ಐಸಿಸಿ ಮಹಿಳಾ ವಿಶ್ವಕಪ್ನ ಕಟ್ಟ ಕಡೆಯ ಸೆಮಿಫೈನಲ್ ಮ್ಯಾಚ್ ನಡೆಯಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಹಾಟ್ ಫಾರ್ಮ್ನಲ್ಲಿರುವ ದಕ್ಷಿಣ ಆಫ್ರಿಕಾ ನಡುವೆ ಫೈನಲ್ ಸ್ಥಾನಕ್ಕಾಗಿ ಹೋರಾಟ ನಡೆಯಲಿದೆ. ಇಲ್ಲಿ ಗೆದ್ದವರು ವಿಶ್ವಕಪ್ಗಾಗಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದಾರೆ.
ಲೀಗ್ ಲೆಕ್ಕಾಚಾರ ನೋಡಿದರೆ ದಕ್ಷಿಣ ಆಫ್ರಿಕಾ ಬಲಿಷ್ಠವಾಗಿ ಕಾಣುತ್ತದೆ. ಆದರೆ ಇಂಗ್ಲೆಂಡ್ ಕಂ ಬ್ಯಾಕ್ ಮಾಡಿದ ರೀತಿ ಅಚ್ಚರಿ ಹುಟ್ಟಿಸುತ್ತಿದೆ. ಲೀಗ್ನಲ್ಲಿ ಆಡಿದ 7 ಪಂದ್ಯಗಳ ಪೈಕಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಮಾತ್ರ ಸೋತಿತ್ತು. ವೆಸ್ಟ್ಇಂಡೀಸ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ಭಾರತದ ವಿರುದ್ಧದ ಪಂದ್ಯವನ್ನು ಕೊನೆಯ ಎಸೆತದಲ್ಲಿ ಗೆದ್ದುಕೊಂಡಿತ್ತು.
ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಬಲಿಷ್ಠವಾಗಿದೆ. ಲಾರ ವೋಲ್ವಾರ್ಡ್, ಲಿಝಿಲ್ ಲಿ, ಸುನ್ ಲಸ್, ಲಾರಾ ಗೂಡಲ್, ಮಿಗ್ನನ್ ಡು ಪ್ರಿಝ್ ಮತ್ತು ಮರಿಝಾನ್ ಕಾಪ್ ರಂತಹ ಬ್ಯಾಟರ್ಗಳಿದ್ದಾರೆ. ಚೋಲ್ ಟೈರನ್ ಮತ್ತು ತ್ರಿಷಾ ಚೆಟ್ಟಿ ಕೂಡ ಬ್ಯಾಟಿಂಗ್ ನಡೆಸಬಲ್ಲರು. ಬೌಲಿಂಗ್ನಲ್ಲಿ ಕಾಪ್, ಶಬ್ನಿಮ್ ಇಸ್ಮಾಯಿಲ್, ಅಯಬೊಂಗ ಕಾಕಾ, ಚೋಲ್ ಟ್ರಯನ್ ರಂತಹ ಆಟಗಾರ್ತಿಯರಿದ್ದಾರೆ.
ಇಂಗ್ಲೆಂಡ್ ತಂಡವೂ ಸಾಮಾನ್ಯ ತಂಡವಲ್ಲ. ಮೊದಲ 3 ಪಂದ್ಯಗಳನ್ನು ಸೋತರೂ, ಆಮೇಲೆ ಸತತ 4 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಹಾಲಿ ಚಾಂಪಿಯನ್ನರದ್ದು. ಟಾಮಿ ಬಿಮೌಂಟ್, ಡ್ಯಾನಿ ವ್ಯಾಟ್, ಹೀದರ್ ನೈಟ್, ನ್ಯಾಟ್ ಸಿವಿರ್, ಏಮಿ ಜೋನ್ಸ್ ರಂತಹ ಘಟಾನುಘಟಿ ಬ್ಯಾಟರ್ಗಳಿದ್ದಾರೆ. ಅನ್ಯ ಶ್ರುಬ್ಸೊಲ್, ಕೆಥರಿನ್ ಬ್ರಂಟ್, ಕೇಟ್ ಕ್ರಾಸ್, ಚಾರ್ಲಿ ಡೀನ್ ಮತ್ತು ಸೋಫಿಯ ಎಕ್ಲಸ್ಟೋನ್ ರಂತಹ ಬೌಲರ್ಗಳಿದ್ದಾರೆ. ಸೋಫಿಯಾ ಡಂಕ್ಲಿಯಂತಹ ಆಟಲ್ರೌಂಡರ್ಗಳು ಇಂಗ್ಲೆಂಡ್ ತಂಡಕ್ಕೆ ಬ್ಯಾಲೆನ್ಸ್ ತಂದಿದ್ದಾರೆ.
ಕ್ರೈಸ್ಟ್ಚರ್ಚ್ನಲ್ಲಿ ಇಂಗ್ಲೆಂಡ್ ಪಾಲಿಗೆ ಸೇಡಿನ ಪಂದ್ಯವೂ ಹೌದು. ಲೀಗ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಹಾಲಿ ಚಾಂಪಿಯನ್ನರಿಗೆ ಅವಕಾಶವಿದೆ. ದಕ್ಷಿಣ ಆಫ್ರಿಕಾ ವಿಶ್ವಕಪ್ನಲ್ಲಿ ಮೊದಲ ಫೈನಲ್ ಆಡುವ ಕನಸಿನಲ್ಲಿದೆ.