Durand Cup 2022- ಕೇರಳ, ಮೋಹನ್ ಬಾಗನ್ ಗೆ ಭರ್ಜರಿ ಜಯ

ಡುರಾಂಡ್ ಕಪ್ ಫುಟ್ ಬಾಲ್ ಟೂರ್ನಿಯಲ್ಲಿ ಕೇರಳ ಬ್ಲ್ಯಾಸ್ಟರ್ಸ್ ತಂಡ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.
ಡಿ ಗುಂಪಿನ ಪಂದ್ಯದಲ್ಲಿ ಕೇರಳ ಬ್ಲ್ಯಾಸ್ಟರ್ಸ್ ತಂಡ 2-0 ಗೋಲುಗಳಿಂದ ಆರ್ಮಿ ಗ್ರೀನ್ ತಂಡವನ್ನು ಪರಾಭವಗೊಳಿಸಿತ್ತು. ಕೇರಳ ಬ್ಲ್ಯಾಸ್ಟರ್ಸ್ ತಂಡದ ಪರ ಆರಿಟ್ರಾ ದಾಸ್ ಮತ್ತು ಮುಹಮ್ಮದ್ ಆಮಿನ್ ಅವರು ತಲಾ ಒಂದೊಂದು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಗೆಲುವಿನೊಂದಿಗೆ ಕೇರಳ ಬ್ಲ್ಯಾಸ್ಟರ್ಸ್ ತಂಡ ಏಳು ಅಂಕಗಳನ್ನು ಪಡೆದುಕೊಂಡು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಆರ್ಮಿ ಗ್ರೀನ್ ತಂಡ ಸೆಪ್ಟಂಬರ್ 4ರಂದು ಲೀಗ್ ನ ಕೊನೆಯ ಪಂದ್ಯವನ್ನು ಒಡಿಸ್ಸಾ ಫುಟ್ ಬಾಲ್ ಕ್ಲಬ್ ತಂಡದ ವಿರುದ್ಧ ಆಡಲಿದೆ.
ಬಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡ 2-0ಗೋಲುಗಳಿಂದ ಇಂಡಿಯನ್ ನೇವಿ ತಂಡವನ್ನು ಸೋಲಿಸಿತ್ತು. ಎಟಿಕೆ ಮೋಹನ್ ಬಾಗನ್ ತಂಡದ ಪರ ಲೆನ್ನಿ ರೊಡ್ರಿಗಸ್ ಮತ್ತು ಕಿಯಾನ್ ನಸಿರಿ ಗೋಲು ದಾಖಲಿಸಿದ್ರು. ಮೋಹನ್ ಬಾಗನ್ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಇದೀಗ ಏಳು ಅಂಕಗಳನ್ನು ಪಡೆದುಕೊಂಡಿದೆ.