Japan Open Super 750 – ಕ್ವಾರ್ಟರ್ ಫೈನಲ್ ಗೆ ಎಚ್. ಎಸ್. ಪ್ರಣೋಯ್
ಎಚ್.ಎಸ್. ಪ್ರಣೋಯ್ ಅವರು ಜಪಾನ್ ಓಪನ್ ಸೂಪರ್ 750 ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಚ್. ಎಸ್. ಪ್ರಣೋಯ್ ಅವರು 22-20, 21-19 ನೇರ ಸೆಟ್ ಗಳಿಂದ ಲೋಹ್ ಕೀನ್ ಯ್ಯು ಅವರನ್ನು ಸೋಲಿಸಿದ್ರು. ಲೋಹ್ ಕೀನ್ ಯ್ಯು ಅವರು ವಿಶ್ವದ ಏಳನೇ ಶ್ರೇಯಾಂಕಿತ ಆಟಗಾರ. ಜೊತೆಗೆ 2021ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಕೂಡ ಆಗಿದ್ದರು.
ಇದೀಗ ಕ್ವಾರ್ಟರ್ ಫೈನಲ್ ನಲ್ಲಿ ಎಚ್.ಎಸ್. ಪ್ರಣೋಯ್ ಅವರು ಚೌ ಟೀನ್ ಚೆನ್ ಅವರನ್ನು ಎದುರಿಸಲಿದ್ದಾರೆ. ಚೌ ಟೀನ್ ಚೆನ್ ಅವರು 2022ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.
Loh Kean Yew 🇸🇬 and Prannoy H. S. 🇮🇳 take aim for the quarterfinals.#BWFWorldTour #JapanOpen2022 pic.twitter.com/4T4qh1G7a1
— BWF (@bwfmedia) September 1, 2022
ಇನ್ನೊಂದು ಪಂದ್ಯದಲ್ಲಿ ಕೆ. ಶ್ರೀಕಾಂತ್ ಅವರು ಲೀ ಜೀ ಜಿಯಾ ಅವರನ್ನು ಸೋಲಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಕಾಂಟಾ ಸುನೇಯಮಾ ಅವರನ್ನು ಎದುರಿಸಲಿದ್ದಾರೆ.