ಸಿಮೋನಾ ಹಾಲೆಪ್ ಸ್ಥಳೀಯ ಪ್ರೇಕ್ಷಕರ ನೆಚ್ಚಿನ ಆಟಗಾರ್ತಿ ಪೌಲಾ ಬಡೋಸಾ ಅವರನ್ನು ನೇರ ಸೆಟ್ಗಳಿಂದ ಸೋಲಿಸಿ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಮ್ಯಾಡ್ರಿಡ್ ಓಪನ್ನಲ್ಲಿ ಎರಡು ಬಾರಿಯ ಚಾಂಪಿಯನ್ ಹ್ಯಾಲೆಪ್ 6-3, 6-1 ಸೆಟ್ಗಳಿಂದ ಎರಡನೇ ಶ್ರೇಯಾಂಕದ ಬಡೋಸಾ ಅವರನ್ನು ಸೋಲಿಸಿದರು. ಹಾಲೆಪ್ 2016 ಮತ್ತು 2017ರಲ್ಲಿ ಇಲ್ಲಿ ಪ್ರಶಸ್ತಿ ಗೆದ್ದಿದ್ದರು. ಒಂಬತ್ತು ವರ್ಷಗಳಲ್ಲಿ ಹಾಲೆಪ್ ಇಲ್ಲಿ ಸ್ಥಾನ ಪಡೆಯದಿರುವುದು ಇದೇ ಮೊದಲು. ಮಾರ್ಚ್ನಲ್ಲಿ ಇಂಡಿಯನ್ ವೆಲ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ನಂತರ ಅವರು ಮೊದಲ ಬಾರಿಗೆ ಅಖಾಡಕ್ಕೆ ಇಳಿದಿದ್ದಾರೆ.
![Madrid Open: ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ Simona Halep 3 simona halep](http://sportskarnataka.com/wp-content/uploads/2022/05/simona-halep.jpg)
ಮತ್ತೊಂದೆಡೆ, ಎರಡು ಗಂಟೆ 20 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್ ಒನ್ ವಿಕ್ಟೋರಿಯಾ ಅಜರೆಂಕಾ 3-6, 6-1, 6-3 ರಲ್ಲಿ ತಮಾರಾ ಜಿಡಾನ್ಸೆಕ್ ಅವರನ್ನು ಸೋಲಿಸಿದರು. ಉಳಿದಂತೆ ಎಂಟನೇ ಶ್ರೇಯಾಂಕದ ಓನ್ಸ್ ಜಬರ್ 7-5, 0-6, 6-4 ರಲ್ಲಿ ವರ್ವರ ಗ್ರಾಚೆವಾ ಅವರನ್ನು, ಬೆಲಿಂಡಾ ಬೆನ್ಸಿಕ್ 6-3, 4-6, 7-5 ರಲ್ಲಿ ಕರೋಲಿನಾ ಮುಚೋವಾ ಅವರನ್ನು, ಸೋಲಿಸಿದರು.
ಸ್ಪೇನ್ನ ರಾಫೆಲ್ ನಡಾಲ್ ಗಾಯದಿಂದ ಚೇತರಿಸಿಕೊಂಡ ನಂತರ ಅವರು ಮ್ಯಾಡ್ರಿಡ್ ಓಪನ್ ಗೆ ಮರಳಲಿದ್ದಾರೆ. ಮ್ಯಾಡ್ರಿಡ್ ಓಪನ್ನಲ್ಲಿ ನಡಾಲ್ ಋತುವಿನ ನಾಲ್ಕನೇ ಪ್ರಶಸ್ತಿಯನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಸುಮಾರು ಒಂದು ತಿಂಗಳಿನಿಂದ ಟೆನಿಸ್ ಅಂಗಳದಿಂದ ಹೊರಗುಳಿದಿದ್ದ ಅವರು, ಪ್ರಶಸ್ತಿ ಮೇಲೆ ಕಣ್ಣು ನೆಟ್ಟಿದ್ದಾರೆ. ಇಂಡಿಯನ್ ವೆಲ್ಸ್ ಸೆಮಿಫೈನಲ್ನಲ್ಲಿ ಗಾಯದಿಂದ ಬಳಲುವ ಮೊದಲು ನಡಾಲ್ ಈ ವರ್ಷ ತನ್ನ ಮೊದಲ 20 ಪಂದ್ಯಗಳನ್ನು ಗೆದ್ದರು. ಅವರು ಈ ಪಂದ್ಯಾವಳಿಯ ಫೈನಲ್ ನಲ್ಲಿ ಸೋಲು ಕಂಡಿದ್ದರು.
ಆರನೇ ಬಾರಿ ಮ್ಯಾಡ್ರಿಡ್ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಉದ್ದೇಶದಿಂದ ನಡಾಲ್ ಮೈದಾನಕ್ಕೆ ಇಳಿಯಲಿದ್ದಾರೆ. ಅವರು ಮೊದಲ ಸುತ್ತಿನಲ್ಲಿ ಮಿಯೋಮಿರ್ ಕೆಕ್ಮನೋವಿಕ್ ಅಥವಾ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಎದುರಿಸಬಹುದು. ನಡಾಲ್ ಅವರು ಸೆಮಿಫೈನಲ್ ತಲುಪಿದರೆ ನಂಬರ್ ಒನ್ ನೊವಾಕ್ ಜೊಕೊವಿಕ್ ಅವರನ್ನು ಎದುರಿಸಬಹುದು.