ಆ್ಯಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ಸುನೀಲ್ ನರೈನ್ ಹೀಗೆ ಸಿಕ್ಸರ್ ಕಿಂಗ್ಗಳ ಸಾಲು ಸಾಲು ಕೊಲ್ಕತ್ತಾ ತಂಡದಲ್ಲಿದೆ. ಡೇವಿಡ್ ವಾರ್ನರ್, ಪೃಥ್ವಿ ಷಾ, ರೋಮ್ವನ್ ಪೊವೆಲ್, ರಿಷಬ್ ಪಂತ್, ಸರ್ಫರಾಜ್ ಖಾನ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲೂ ಸಿಕ್ಸರ್ ಸಿಡಿಸುವ ಬ್ಯಾಟ್ಸ್ಮನ್ಗಳ ಸಂಖ್ಯೆ ಕಡಿಮೆ ಇಲ್ಲ. ಇವೆಲ್ಲಕ್ಕೆ ವೇದಿಕೆ ಆಗುತ್ತಿರುವುದು ರನ್ ಸ್ವರ್ಗ ಬ್ರೆಬೊರ್ನ್ ಪಿಚ್. ಅತ್ತ ಕೊಲ್ಕತ್ತಾ ನೈಟ್ ರೈಡರ್ಸ್ ಇತ್ತ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಜಿದ್ದಾಜಿದ್ದಿ ನಡೆಯಲಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಬಲ:
ಕೊಲ್ಕತ್ತಾ ನೈಟ್ ರೈಡರ್ಸ್ ಫರ್ಫೆಕ್ಟ್ ಟೀಮ್ ತರಹ ಆಡ್ತಿದೆ. ಬ್ಯಾಟಿಂಗ್ನಲ್ಲಿ ರಹಾನೆ, ಶ್ರೇಯಸ್ ಮತ್ತು ನಿತೀಶ್ ರಾಣಾ ಸ್ಥಿರವಾಗಿ ಆಡದೇ ಇದ್ದರೂ ತಂಡ ಉತ್ತಮವಾಗಿದೆ. ವೆಂಕಟೇಶ್ ಅಯ್ಯರ್, ಆ್ಯಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್ ಮತ್ತು ಸುನೀಲ್ ನರೈನ್ ಬೌಲಿಂಗ್ನಲ್ಲಿ ಎಷ್ಟು ಪರಿಣಾಮಕಾರಿಯೋ ಅಷ್ಟೇ ಬ್ಯಾಟಿಂಗ್ನಲ್ಲೂ ಮಿಂಚುತ್ತಿದ್ದಾರೆ. ವರುಣ್ ಚಕ್ರವರ್ತಿ, ಉಮೇಶ್ ಯಾದವ್ ಮತ್ತು ರಸಿಕ್ ಸಲಾಂ ಬೌಲಿಂಗ್ನಲ್ಲಿ ತಂಡದ ಕೈ ಹಿಡಿದ್ದಾರೆ. ವಿಕೆಟ್ ಕೀಪಿಂಗ್ ಜೊತೆ ಸ್ಯಾಮ್ ಬಿಲ್ಲಿಂಗ್ಸ್ ಬ್ಯಾಟಿಂಗ್ನಲ್ಲೂ ಕೊಡುಗೆ ನೀಡುತ್ತಿದ್ದಾರೆ. ಈ ಮಧ್ಯೆ ರಹಾನೆ ಬದಲು ಸುನೀಲ್ ನರೈನ್ ಕೈಯಿಂದ ಇನ್ನಿಂಗ್ಸ್ ಓಪನ್ ಮಾಡಿಸಿ ಶೆಲ್ಡನ್ ಜಾಕ್ಸನ್ಗೆ ಅವಕಾಶ ಮಾಡಿಕೊಡುವ ಮಾತೂ ಕೇಳಿ ಬರುತ್ತಿದೆ.
ಡೆಲ್ಲಿಕ್ಯಾಪಿಟಲ್ಸ್:
ಡೆಲ್ಲಿ ತಂಡದಲ್ಲಿ ಮೇಲ್ನೋಟಕ್ಕೆ ಪ್ರಾಬ್ಲಂ ಕಾಣಿಸದೇ ಇದ್ದರೂ ಯಾಕೋ ಮಂಕು ಕವಿದಂತಿದೆ. ಡೇವಿಡ್ ವಾರ್ನರ್ ಸ್ಪೋಟಕ ಆಟ ತಂದುಕೊಡುತ್ತಿಲ್ಲ. ರೊವ್ ಮನ್ ಪೊವೆಲ್ ಆಟ ನಡೆಯುತ್ತಿಲ್ಲ. ಹೀಗಾಗಿ ಪೃಥ್ವಿ ಷಾ, ನಾಯಕ ರಿಷಬ್ ಪಂತ್ ಮತ್ತು ಸರ್ಫರಾಜ್ ಖಾನ್ ಮೇಲೆ ಒತ್ತಡ ಹೆಚ್ಚುತ್ತಿದೆ. ಅಕ್ಸರ್ ಮತ್ತು ಲಲಿತ್ ಯಾದವ್ ಬೌಲಿಂಗ್ನಲ್ಲೂ ಪರಿಣಾಮಕಾರಿ. ಅನ್ರಿಚ್ ನೋರ್ಟ್ಜೆ ಮೊದಲ ಪಂದ್ಯದ ಪ್ರದರ್ಶನವನ್ನು ಮರೆತು ಆಡಬೇಕಿದೆ. ಸಣ್ಣಪುಟ್ಟ ಬದಲಾವಣೆಗಳು ದೆಹಲಿ ತಂಡದ ವಿಶ್ವಾಸ ಹೆಚ್ಚಿಸಬಹದು.
ಪಿಚ್ ಕಂಡೀಷನ್:
ಬ್ರೆಬೋರ್ನ್ ಮೈದಾನದಲ್ಲಿ ಎಷ್ಟು ರನ್ಗಳಿಸಿದರೂ ಸಾಕಾಗುವುದಿಲ್ಲ ಅನ್ನುವ ಹಾಗಾಗಿದೆ. ಹೀಗಾಗಿ ಬ್ಯಾಟ್ಸ್ಮನ್ಗಳ ಆಟದ ಮೇಲೆ ಬೌಲರ್ಗಳು ಪಂದ್ಯ ಗೆಲ್ಲಿಸಿಕೊಡಬಹುದಾದ ಮಾತು ಹೆಚ್ಚಾಗಿದೆ.