Friday, June 9, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

IPL 2022: ಡೆಲ್ಲಿ ಕ್ಯಾಪಿಟಲ್ಸ್​​ಗೆ ಅತ್ಯಮೂಲ್ಯ ಪಂದ್ಯ, ಸಿಎಸ್​​ಕೆ ಪಾಲಿಗೆ ಲೆಕ್ಕಾಚಾರದ ಮ್ಯಾಚ್​..!

May 8, 2022
in Cricket, ಕ್ರಿಕೆಟ್
IPL 2022: ಡೆಲ್ಲಿ ಕ್ಯಾಪಿಟಲ್ಸ್​​ಗೆ ಅತ್ಯಮೂಲ್ಯ ಪಂದ್ಯ, ಸಿಎಸ್​​ಕೆ ಪಾಲಿಗೆ ಲೆಕ್ಕಾಚಾರದ ಮ್ಯಾಚ್​..!

CSK VS DC

Share on FacebookShare on TwitterShare on WhatsAppShare on Telegram

ಮುಂಬೈನ ಡಿ. ವೈ.ಪಾಟೀಲ್​​ ಕ್ರೀಡಾಂಗಣದಲ್ಲಿ ನಡೆಯುವ ಡೆಲ್ಲಿ ಕ್ಯಾಪಿಟಲ್ಸ್​​ ಮತ್ತು ಚೆನ್ನೈ ಸೂಪರ್​​ ಕಿಂಗ್ಸ್​​ ನಡುವಿನ ಪಂದ್ಯ ಸಿಕ್ಕಾಪಟ್ಟೆ ಮಹತ್ವ ಪಡೆದಿದೆ. ಚೆನ್ನೈ ಪಾಲಿಗೆ ಇದು ಪ್ಲೇ-ಆಫ್​​ ಸ್ಥಾನದ ಆಸೆಯನ್ನು ಜೀವಂತವಾಗಿಡಲು ಲೆಕ್ಕಾಚಾರದ ಪಂದ್ಯವಾಗಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್​​ಗೆ ಈ ಪಂದ್ಯ ಅತ್ಯಮೂಲ್ಯ. ಇಲ್ಲಿ ಗೆದ್ದರೆ ಸಿಗುವ ಎರಡು ಅಂಕಗಳು ಡೆಲ್ಲಿ ಕ್ಯಾಪಿಟಲ್ಸ್​​ನ ಭವಿಷ್ಯವನ್ನೂ ಬರೆಯಲಿದೆ.

ಡೆಲ್ಲಿ ತಂಡ ಕೋವಿಡ್​​ ಕಾರಣದಿಂದ ಸಾಕಷ್ಟು ಆಟಗಾರರನ್ನು ಕಳೆದುಕೊಂಡಿತ್ತು. ಗಾಯದ ಸಮಸ್ಯೆ ಕೂಡ ಕಾಡಿತ್ತು. 10 ಪಂದ್ಯಗಳಲ್ಲಿ 5ನ್ನು ಗೆದ್ದು, 5ನ್ನು ಸೋತಿದೆ. ಆದರೂ ರನ್​​ ರೇಟ್​​ + 0.641 ಇದೆ. ಇದು ಟೂರ್ನಿಯಲ್ಲಿ ತಂಡವೊಂದರ ಬೆಸ್ಟ್​ ರನ್​​ ರೇಟ್​​ ಆಗಿದೆ. ಚೆನ್ನೈ ತಂಡ 10 ಪಂದ್ಯಗಳಲ್ಲಿ 3 ನ್ನು ಗೆದ್ದಿದೆ. ಉಳಿದ 4 ಪಂದ್ಯಗಳನ್ನು ಭರ್ಜರಿಯಾಗಿ ಗೆಹದ್ದರೂ ಚೆನ್ನೈ ಪ್ಲೇ-ಆಫ್​​ ಅವಕಾಶ ಲೆಕ್ಕಾಚಾರದ ಮೇಲೆ ಮಾತ್ರ ನಿಂತಿದೆ.

ಚೆನ್ನೈ ತಂಡಕ್ಕೆ ಟೂರ್ನಿಗೂ ಮುನ್ನ ದೀಪಕ್​​ ಚಹರ್​​ ಗಾಯ ದುಬಾರಿ ಆಗಿತ್ತು. ನಂತರ ಡ್ವೈನ್​​ ಬ್ತಾವೋ ಕೂಡ ಗಾಯಗೊಂಡಿದ್ದಾರೆ. ಮುಕೇಶ್​​ ಚೌಧರಿ, ಸಿಮರ್​ ಜಿತ್​​ ಸಿಂಗ್​​, ಡ್ವೈನ್​​ ಪ್ರಿಟೋರಿಯಸ್​​ ಮತ್ತು ಮಹೀಶ್​​ ತೀಕ್ಷಣ ಪಾಲಿಗೆ ಇದು ಚೊಚ್ಚಲ ಐಪಿಎಲ್​​ ಸೀಸನ್​​ ಆಗಿದೆ. ಹೀಗಾಗಿ ತಂಡದಲ್ಲಿ ಅನುಭವದ ಕೊರತೆ ಕಾಣುತ್ತಿದೆ. ಇದರ ಜೊತೆಗೆ ರವೀಂದ್ರ ಜಡೇಜಾ ವೈಫಲ್ಯ ದುಬಾರಿ ಆಗಿದೆ. ಬ್ಯಾಟಿಂಗ್​​ನಲ್ಲಿ ಚೆನ್ನೈ ಶಕ್ತಿ ಮರಳಿ ಬಂದಿದೆ. ಡೆವೊನ್​​ ಕಾನ್ವೆ ಮತ್ತು ರುತುರಾಜ್​​ ಗಾಯಕ್ವಾಡ್​​ ಜೋಡಿ ಮುರಳಿ ವಿಜಯ್​ ಮತ್ತು ಮೈಕ್​​ ಹಸ್ಸಿ ಜೋಡಿಯನ್ನು ನೆನಪಿಸುತ್ತಿದೆ. ರಾಬಿನ್​​ ಉತ್ತಪ್ಪ ಅದ್ಯಾಕೋ ಮಂಕಾಗಿದ್ದಾರೆ.  ಅಂಬಾಟಿ ರಾಯುಡು ಮತ್ತು ಮೊಯಿನ್​​ ಅಲಿ ಸ್ಥಿರ ಆಟ ಆಡಬೇಕು., ಶಿವಂ ದುಬೆಗೆ ಸ್ಥಾನ ನೀಡಬೇಕು. ಧೋನಿ ಮತ್ತು ಜಡೇಜಾ ಫಿನಿಶಿಂಗ್​ ಟಚ್​​ ಕೊಟ್ಟರೆ ಆಟ ಫಿನಿಷ್​​​.

ಡೆಲ್ಲಿ ಕ್ಯಾಪಿಟಲ್ಸ್​​ ಬ್ಯಾಟಿಂಗ್​​ ಶಕ್ತಿಯೂ ಕಡಿಮೆ ಇಲ್ಲ. ಪೃಥ್ವಿ ಷಾ ಆಡುವ ತಂಡ ಸೇರಿಕೊಳ್ಳುವುದು ಖಚಿತ. ವಾರ್ನರ್​​ ಬ್ಯಾಟಿಂಗ್​​ ಸ್ಥಿರತೆ ಎದುರಾಳಿಗಳಿಗೆ ಚಾಲೆಂಜ್​.  ಮೂರನೇ ಕ್ರಮಾಂಕದಲ್ಲಿ ಯಶ್​ ಧುಲ್​​ ಗೆ ಅವಕಾಶ ನೀಡುವ ಸಮಯ ಇದು. ಮಿಚೆಲ್​​ ಮಾರ್ಷ್​ ಮತ್ತು ರಿಷಬ್​​ ಪಂತ್​​ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಿದೆ. ರೋವ್ಮನ್​​ ಪೊವೆಲ್​​ ಬಿಗ್​​ ಹಿಟ್ಟಿಂಗ್​​ ಇನ್ನಿಂಗ್ಸ್​​ ಅಂತ್ಯಕ್ಕೆ ಬಲ ತುಂಬಿದೆ.  ಲಲಿತ್​​ ಯಾದವ್​, ಶಾರ್ದೂಲ್​ ಥಾಕೂರ್​​ ಮತ್ತು ಅಕ್ಸರ್​​ ಪಟೇಲ್​​ ಕೂಡ ಬ್ಯಾಟಿಂಗ್​​ ಪಂಟರ್​ ಗಳು.

ಡೆಲ್ಲಿ ಬೌಲಿಂಗ್​​​ ಚೆನ್ನಾಗಿ ಕಾಣುತ್ತಿದೆ. ಅನ್ರಿಚ್​ ನೋರ್ಟ್ಜೆ ವಾಪಾಸಾತಿ ಮತ್ತು ಖಲೀಲ್​​ ಅಹ್ಮದ್​ ನಿಖರತೆ ಫಲಿತಾಂಶ ಬದಲಿಸಿದೆ. ಶಾರ್ದೂಲ್​ ಥಾಕೂರ್​​ ಡೆತ್ ಓವರ್​ ಎಕ್ಸಪರ್ಟ್​. ಅಕ್ಸರ್​​ ಮತ್ತು ಕುಲ್​​ ದೀಪ್​​ ಸ್ಪಿನ್​​ ಜೋಡಿ ಮೋಡಿ ಮಾಡಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: CSK VS DCCSK\dcIPLipl 2022
ShareTweetSendShare
Next Post
IPL 2022: ದಾಖಲೆ ಮೇಲೆ ಅಕ್ಸರ್​​ ಕಣ್ಣು, ಪೊವೆಲ್​​ ಭೀತಿಗೆ ಬ್ರಾವೋ ಅಸ್ತ್ರ, ಇದು CSK VS DC ಪಂದ್ಯದ ಗೇಮ್​​ಪ್ಲಾನ್​​​..!

IPL 2022: ದಾಖಲೆ ಮೇಲೆ ಅಕ್ಸರ್​​ ಕಣ್ಣು, ಪೊವೆಲ್​​ ಭೀತಿಗೆ ಬ್ರಾವೋ ಅಸ್ತ್ರ, ಇದು CSK VS DC ಪಂದ್ಯದ ಗೇಮ್​​ಪ್ಲಾನ್​​​..!

Leave a Reply Cancel reply

Your email address will not be published. Required fields are marked *

Stay Connected test

Recent News

WTC Final: ಟ್ರಾವಿಸ್‌ ಹೆಡ್‌-ಸ್ಟೀವ್‌ ಸ್ಮಿತ್‌ ಅಬ್ಬರ: ಆಸೀಸ್‌ಗೆ ಮೊದಲ ದಿನದ ಗೌರವ

WTC Final: ಹೆಡ್‌-ಸ್ಮಿತ್‌ ಬೊಂಬಾಟ್‌ ಆಟ: ಆಸೀಸ್ 1ನೇ ಇನ್ನಿಂಗ್ಸ್‌ನಲ್ಲಿ 469 ಆಲೌಟ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಭಾರತದ ವಿರುದ್ಧದ ಜೋ ರೂಟ್‌ ದಾಖಲೆ ಸರಿಗಟ್ಟಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

WTC Final: ಭಾರತದ ವಿರುದ್ಧ ಹೆಚ್ಚು ರನ್‌: ಎಲೈಟ್‌ ಕ್ಲಬ್‌ ಸೇರಿದ ಸ್ಟೀವ್‌ ಸ್ಮಿತ್‌

June 8, 2023
WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

WTC Final: ಓವಲ್‌ ಅಂಗಳದಲ್ಲಿ ಮುಂದುವರಿದ ಸ್ಟೀವ್‌ ಸ್ಮಿತ್‌ ಪ್ರಾಬಲ್ಯ

June 8, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram