ಕಳೆದ ಮೂರು ಸೀಸನ್ ಗಳಲ್ಲಿ 2 ಬಾರಿ ಪ್ಲೇ-ಆಫ್, ಒಮ್ಮೆ ಫೈನಲ್ ಪ್ರವೇಶ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ನ ಬಲಿಷ್ಠ ತಂಡ. ಆದರೆ ಒಂದು ಬಾರಿ ಕೂಡ ಐಪಿಎಲ್ ಟ್ರೋಫಿ ಗೆದ್ದಿಲ್ಲ ಅನ್ನುವ ಕೊರಗು ಈ ತಂಡಕ್ಕಿದೆ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊಂಚ ಬದಲಾವಣೆ ಆಗಿದೆ. ಮೆಗಾ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿ ಮಾಡಿ ಶಕ್ತಿ ಹೆಚ್ಚಿಸಿಕೊಂಡಿದೆ.
ದೆಹಲಿ ತಂಡದಲ್ಲಿ ಆಲ್ರೌಂಡರ್ಗಳು ಮತ್ತು ಫಿನಿಷರ್ಗಳು ಹೆಚ್ಚಾಗಿ ಕಾಣುತ್ತಾರೆ. ವಾರ್ನರ್ ಆಗಮನ ಮತ್ತು ಯುವ ಆಟಗಾರ ಯಶ್ ಧುಲ್ ರಣಜಿಯಲ್ಲಿ ನೀಡಿದ ಸಾಲಿಡ್ ಪ್ರದರ್ಶನ ಬ್ಯಾಟಿಂಗ್ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮಿಚೆಲ್ ಮಾರ್ಷ್ ಮತ್ತು ರೊಮ್ವನ್ ಪೊವೆಲ್ ಸೇರ್ಪಡೆ ಫಿನಿಷರ್ ಕೋಟಾವನ್ನು ಭರ್ತಿ ಮಾಡಿದೆ.
ಸಂಭಾವ್ಯ X1
-
ಡೇವಿಡ್ ವಾರ್ನರ್
-
ಪೃಥ್ವಿ ಷಾ
-
ಯಶ್ ಧುಲ್
-
ರಿಷಬ್ ಪಂತ್
-
ಮಿಚೆಲ್ ಮಾರ್ಷ್
-
ರೊಮ್ವನ್ ಪೊವೆಲ್
-
ಶಾರ್ದೂಲ್ ಥಾಕೂರ್
-
ಅಕ್ಸರ್ಪಟೇಲ್
-
ಕಮಲೇಶ್ ನಾಗರ್ಕೋಟಿ
-
ಚೇತನ್ ಸಕಾರಿಯಾ
-
ಆನ್ರಿಷ್ ನೋರ್ಟ್ಜೆ/ ಮುಸ್ತಾಫುಝುರ್ ರೆಹಮಾನ್
ಈ ಬಾರಿಯ ಐಪಿಎಲ್ ನಲ್ಲಿ ಡೇವಿಡ್ ವಾರ್ನರ್ ಜೆರ್ಸಿ ಬದಲಿಸಿ ಕಣಕ್ಕಿಳಿಯಲಿದ್ದಾರೆ. ವಾರ್ನರ್ ಮತ್ತು ಪೃಥ್ವಿ ಷಾ ಕಾಂಬಿನೇಷನ್ ಡೆಲ್ಲಿ ಕ್ಯಾಪಿಟಲ್ಸ್ಗೆ ಸ್ಪೋಟಕ ಆರಂಭ ತಂದುಕೊಡಲಿದೆ. ಅಂಡರ್ 19 ಹೀರೋ ಯಶ್ ಧುಲ್ ಆಟ ಹೇಗಿದೆ ಅನ್ನುವುದು ರಣಜಿಯಲ್ಲಿ ಗೊತ್ತಾಗಿದೆ. ಹೀಗಾಗಿ ಧುಲ್ 3ನೇ ಕ್ರಮಾಂಕಕ್ಕೆ ಫಿಕ್ಸ್ ಆಗಲಿದ್ದಾರೆ. ನಾಯಕ ರಿಷಬ್ ಪಂತ್ ಕೀಪರ್ ಕಂ ಮಧ್ಯಮ ಸರದಿಯ ಹೊಣೆ ಹೊರಲಿದ್ದಾರೆ. ಮಿಚೆಲ್ ಮಾರ್ಷ್ ಮತ್ತು ರೋಮ್ವನ್ ಪೊವೆಲ್ ಸೇರ್ಪಡೆಯಿಂದ ಆಲ್ರೌಂಡರ್ಗಳು ಮತ್ತು ವಿಸ್ಪೋಟಕ ಬ್ಯಾಟ್ಸ್ಮನ್ಗಳು ಸಿಕ್ಕಾಂತಾಗಿದೆ. ಶಾರ್ದೂಲ್ ಥಾಕೂರ್ ಮತ್ತು ಅಕ್ಸರ್ ಪಟೇಲ್ ಇಂಡಿಯನ್ ಆಲ್ರೌಂಡರ್ಗಳು. ಕಮಲೇಶ್ ನಾಗರ್ ಕೋಟಿ ಮತ್ತು ಚೇತನ್ ಸಕಾರಿಯಾ ವಿದೇಶಿ ಫಾಸ್ಟ್ ಬೌಲರ್ನ ನೆರವಿಗೆ ನಿಲ್ಲಲಿದ್ದಾರೆ.
ಅಂದಹಾಗೇ ಡೆಲ್ಲಿ ಕ್ಯಾಪಿಟಲ್ಸ್ಗೆ ದೊಡ್ಡ ಸಮಸ್ಯೆ ಕಾಣುತ್ತಿಲ್ಲ.ಒಂದು ವೇಳೆ ವಾರ್ನರ್ ಆರಂಭದಲ್ಲಿ ಲಭ್ಯರಾಗದೇ ಇದ್ದಲ್ಲಿ ಧುಲ್ ಇನ್ನಿಂಗ್ಸ್ ಆರಂಭಿಸಬಹುದು. ಸಫ್ರಾಜ್ ಖಾನ್ ಧುಲ್ ಜಾಗದಲ್ಲಿ ಆಡಬಹುದು. ಇನ್ನು ಅನ್ರಿಚ್ ನೋಕಿಯೆ ಆಗಮಿಸುವ ತನಕ ಮುಸ್ತಾಫಿಝುರ್ ರೆಹಮಾನ್ ವೇಗದ ಬೌಲಿಂಗ್ನ ಸಾರಥ್ಯವಹಿಸಿಕೊಳ್ಳಬಹುದು. ಈ ಬಾರಿ ಡೆಲ್ಲಿ ನಿಜಕ್ಕೂ ಬಲಿಷ್ಠ ತಂಡ. ಹೇಗೆ ಹೋರಾಟ ಮಾಡುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ.