ipl 2022 Delhi Capitals – ಕೆಂಪು – ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಡೆಲ್ಲಿ ಹುಡುಗರು..!

2022ರ ಐಪಿಎಲ್ ಟೂರ್ನಿಗೆ ತಂಡಗಳು ಅಭ್ಯಾಸದಲ್ಲಿ ನಿರತವಾಗಿವೆ. ಇನ್ನೊಂದೆಡೆ ಫ್ರಾಂಚೈಸಿಗಳು ಬ್ರ್ಯಾಂಡ್ ಬಿಲ್ಡ್ ಮಾಡಿಕೊಳ್ಳಲು ನಾನಾ ರೀತಿಯ ಪ್ಲಾನ್‍ಗಳನ್ನು ಕಾರ್ಯ ರೂಪಕ್ಕೆ ತರುತ್ತಿವೆ.
ಅಂದ ಹಾಗೇ ಈ ಬಾರಿಯ ಐಪಿಎಲ್ ನಲ್ಲಿ ಬಹುತೇಕ ತಂಡಗಳು ತಮ್ಮ ಆಟಗಾರರ ಜೆರ್ಸಿಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿವೆ.
ಅದೇ ರೀತಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಈ ಬಾರಿ ಹೊಸ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ. Delhi Capitals Jersey For IPL 2022- ipl 2022 Delhi Capitals
ರೆಡ್ ಮತ್ತು ಬ್ಲ್ಯೂ ಬಣ್ಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೆರ್ಸಿಯನ್ನು ಕಾಣಬಹುದಾಗಿದೆ. ಕೆಂಪು ಬಣ್ಣವು ಧೈರ್ಯದ ಸಂಕೇತವಾದ್ರೆ, ನೀಲಿ ಬಣ್ಣ ಸಮತೋಲನ ಮತ್ತು ಶಾಂತತೆಯನ್ನು ಪ್ರತಿಬಿಂಬಿಸಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲಾಂಛನದಂತೆ ರಿಷಬ್ ಪಂತ್ ಬಳಗ ಈ ಬಾರಿಯ ಐಪಿಎಲ್ ನಲ್ಲಿ ಘರ್ಜಿಸಲಿದೆ.

ಕಳೆದ ಮೂರು – ನಾಲ್ಕು ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ. ಆದ್ರೆ ಮಹತ್ವದ ಹಂತದಲ್ಲಿ ಎಡವಿ ಬೀಳುತ್ತಿದೆ. ಹೀಗಾಗಿ ಈ ಬಾರಿಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲೇಬೇಕು ಅನ್ನೋ ಹಠದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಣಕ್ಕಿಳಿಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿ ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ ಎಂಬುದು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಅಭಿಮತವಾಗಿದೆ.
ಮಾರ್ಚ್ 27ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿಯ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.