ಹಣೆಬರಹಕ್ಕೆ ಯಾರೂ ಹೊಣೆಯಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಮೆಗಾ ಹರಾಜಿನಲ್ಲಿ ಆಲ್ರೌಂಡರ್ ದೀಪಕ್ ಚಹರ್ ರನ್ನು 14 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಹರಾಜಿನಲ್ಲಿ ದೀಪಕ್ 2ನೇ ಅತ್ಯಂತ ದುಬಾರಿ ಆಟಗಾರನಾಗಿದ್ದರು. ಆದರೆ ಈ ಬಾರಿಯ ಐಪಿಎಲ್ ಅನ್ನು ದೀಪಕ್ ಚಹರ್ ಮಿಸ್ ಮಾಡಿಕೊಳ್ಳುವ ಆತಂಕ ಕಾಡುತ್ತಿದೆ.
ಐಪಿಎಲ್ 15ನೇ ಸೀಸನ್ ಆರಂಭಕ್ಕೆ ಇನ್ನು ಉಳಿದಿರುವುದು ಮೂರೇ ವಾರ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸೂರತ್ನಲ್ಲಿ ಅಭ್ಯಾಸ ಆರಂಭಿಸಿದೆ. ಆದರೆ ದೀಪಕ್ ಚಹರ್ ಟೂರ್ನಿಯಿಂದ ಹೊರಬೀಳುವ ಬಗ್ಗೆಭಯ ಶುರುವಾಗಿದೆ.
ದೀಪಕ್ ಚಹರ್ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದ ವೇಳೆ ಗಾಯಗೊಂಡಿದ್ದರು. ಬೌಲಿಂಗ್ ಮಾಡುತ್ತಿದ್ದ ವೇಳೆ ಸ್ನಾಯು ಸೆಳೆತಕ್ಕೊಳಗಾದ ಚಹರ್ ಆ ಬಳಿಕ ಮೈದಾನ ತೊರೆದಿದ್ದರು. ಅಷ್ಟೇ ಅಲ್ಲದೆ ಗಾಯದ ಕಾರಣ ಶ್ರೀಲಂಕಾ ವಿರುದ್ದದ ಸರಣಿಯಿಂದ ಕೂಡ ಹೊರಗುಳಿದಿದ್ದರು.
ದೀಪಕ್ ಚಹರ್ ಕ್ವಾಡ್ರಪಲ್ ಮಸಲ್ ಟಿಯರ್ಗೆ ಒಳಗಾಗಿದ್ದಾರೆ. ಹೀಗಾಗಿ ಕನಿಷ್ಠ 6 ರಿಂದ 8 ವಾರಗಳ ವಿಶ್ರಾಂತಿ ಅಗತ್ಯವಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹೀಗಾದರೆ ಚೆನ್ನೈ ಆಡುವ ಬಹುತೇಕ ಪಂದ್ಯಗಳಿಂದ ಚಹರ್ ಹೊರಬೀಳಲಿದ್ದಾರೆ.