IPL 15ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 26 ರಂದು ಮೊದಲ ಮ್ಯಾಚ್ ನಡೆಯಲಿದೆ. ಬಿಸಿಸಿಐ ಎಲ್ಲಾ ಸಿದ್ಧತೆಗಳನ್ನು ಮಾಡಿ ಮುಗಿಸಿದೆ. ಮಹಾರಾಷ್ಟ್ರ ಸರ್ಕಾರದ ಜೊತೆ ಐಪಿಎಲ್ ಹಾಗೂ ಬಿಸಿಸಿಐ ಅಧಿಕಾರಿಗಳ ಸಭೆ ಕೂಡ ನಡೆದಿದೆ.
ಆರ್ಟಿಪಿಆರ್ ಕಡ್ಡಾಯ, ಕ್ವಾರಂಟೈನ್ ಆಗಬೇಕು..!
ಮುಂಬೈ ಒಟ್ಟು 55 ಪಂದ್ಯಗಳಿಗೆ ಆತಿಥ್ಯ ನೀಡಲಿದೆ. ಮಾರ್ಚ್ 8 ರಿಂದ ತಂಡ ಮುಂಬೈ ತಲುಪಲಿದೆ. ನಂತರ ಈ ಆಟಗಾರರನ್ನು ಕ್ವಾರಂಟೈನ್ ಮಾಡಲಾಗುತ್ತದೆ. ಅದರ ನಂತರ, ಐಪಿಎಲ್ ತಂಡಗಳು ಮಾರ್ಚ್ 14 ರಿಂದ 15 ರವರೆಗೆ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ. ಐಪಿಎಲ್ನಲ್ಲಿ ಆಡಲು ಬರುವ ಎಲ್ಲಾ ಆಟಗಾರರು 3 ರಿಂದ 5 ದಿನಗಳವರೆಗೆ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ. ಮುಂಬೈಗೆ ಪ್ರವೇಶಿಸುವ ಮೊದಲು, ಪ್ರತಿಯೊಬ್ಬರೂ ಮನೆಯಲ್ಲಿRTPCR ಪರೀಕ್ಷೆಯನ್ನು ತೆಗೆದುಕೊಳ್ಳಬೇಕು.
ಥಾಣೆಯ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್, ಎಂಸಿಎ ಮೈದಾನದಲ್ಲಿ ತಂಡಗಳಿಗೆ ಅಭ್ಯಾಸ ಮಾಡಲು ಅವಕಾಶವಿದೆ. ಐಪಿಎಲ್ ನಲ್ಲಿ ಒಟ್ಟು 70 ಲೀಗ್ ಪಂದ್ಯಗಳು ನಡೆಯಲಿದೆ. 12 ಡಬಲ್ ಹೆಡರ್ ಪಂದ್ಯಗಳು ನಡೆಯಲಿವೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ 20 ಪಂದ್ಯಗಳು ನಡೆದರೆ, ಬ್ರೆಬೊರ್ನ್ ಮೈದಾನದಲ್ಲಿ 15 ಪಂದ್ಯಗಳು ನಡೆಯಲಿವೆ. 20 ಪಂದ್ಯಗಳು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳಿಗೆ, ಸ್ಪರ್ಧೆಯ ಆರಂಭಿಕ ದಿನಗಳಲ್ಲಿ ಶೇಕಡಾ 25 ರಷ್ಟು ಪ್ರೇಕ್ಷಕರಿಗೆ ಕ್ರೀಡಾಂಗಣದಲ್ಲಿ ಹಾಜರಾಗಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಬೇರೆ ಬೇರೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ.