ಮಂಗಳವಾರ ನಡೆದ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ 35 ವರ್ಷದ ಡೇವಿಡ್ ವಾರ್ನರ್ ಒಂದು ಕೈಯಿಂದ ಅದ್ಭುತ ಕ್ಯಾಚ್ ಪಡೆದರು. ಇದನ್ನು ನೋಡಿ ಬೌಲಿಂಗ್ ಮಾಡುತ್ತಿದ್ದ ಆಶ್ಟನ್ ಅಗರ್ ಆಶ್ಚರ್ಯಗೊಂಡರು. ಈ ಕ್ಯಾಚ್ ಎಷ್ಟು ಅದ್ಭುತವಾಗಿತ್ತು ಎಂದರೆ ಬ್ಯಾಟಿಂಗ್‌ನಲ್ಲಿದ್ದ ಧನಂಜಯ್ ಡಿ ಸಿಲ್ವಾ ಕೂಡ ಸ್ವಲ್ಪ ಸಮಯ ಚಕಿತರಾದರು.
ಧನಂಜಯ್ ಮಿಡ್-ಆನ್‌ನಲ್ಲಿ ದೊಡ್ಡ ಹೊಡೆತವನ್ನು ಆಡಲು ಬಯಸಿದ್ದರು ಮತ್ತು ಚೆಂಡನ್ನು ಬೌಂಡರಿ ಹೊರಗೆ ಕಳುಹಿಸುವ ಯೋಜನೆ ಅವರದ್ದಾಗಿತ್ತು. ಆದರೆ ಅವರ ಶಾಟ್ ಟೈಮಿಂಗ್ ಸರಿಯಾಗಿ ಇರಲಿಲ್ಲ. ಹೀಗಾಗಿ ಮಿಡ್-ಆನ್‌ನಲ್ಲಿ ನಿಂತಿದ್ದ ವಾರ್ನರ್, ಅಸಾಧ್ಯವಾದ ಕ್ಯಾಚ್ ಅನ್ನು ಹಿಡಿಯಲು ಜಿಗಿದರು. ಒಂದು ಕೈ ಮೇಲೆ ಮಾಡಿ ಜಂಪ್ ಮಾಡಿ ಅತ್ಯುತ್ತಮ ಕ್ಯಾಚ್ ಪಡೆದರು. ಈ ಕ್ಯಾಚ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
https://twitter.com/UmairKhWorld/status/1536665054183038987?s=20&t=GWItacapuiGhYuXZ4dOz-w
ಪಂದ್ಯದಲ್ಲಿ ವಾರ್ನರ್ ಅದ್ಭುತ ಕ್ಯಾಚ್ ಹಿಡಿದರೂ ಅವರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅವರನ್ನು ಮಹೇಶ್ ತೀಕ್ಷಣಾ ಎಲ್‌ಬಿಡಬ್ಲ್ಯೂ ಬಲೆಗ ಕೆಡವಿದರು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಆಸ್ಟ್ರೇಲಿಯಾ ಎದುರು 300 ರನ್ ಗಳ ಬೃಹತ್ ಗುರಿ ನೀಡಿತ್ತು.
ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಡಕ್‌ವರ್ತ್ ಲೂಯಿಸ್ ನಿಯಮದಡಿ 44 ಓವರ್‌ಗಳಲ್ಲಿ 282 ರನ್‌ಗಳ ಗುರಿಯನ್ನು ನೀಡಲಾಗಿತ್ತು, ಇದನ್ನು ಆಸ್ಟ್ರೇಲಿಯಾ ಇನ್ನು 9 ಎಸೆತ ಬಾಕಿ ಇರುವಂತೆ ಗುರಿ ಮುಟ್ಟಿ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.