ಟೆಸ್ಟ್ ಕ್ರಿಕೆಟ್ನಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್, ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ನ್ಯೂಜಿ಼ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ 2 ಶತಕ ಸಿಡಿಸುವ ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ಗಳ ಮೈಲಿಗಲ್ಲು ದಾಟಿದ್ದ ಜೋ ರೂಟ್, ಭರ್ಜರಿ ಫಾರ್ಮ್ನಲ್ಲಿದ್ದಾರೆ. ಆ ಮೂಲಕ ಐಸಿಸಿ ಟೆಸ್ಟ್ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಬುಸ್ಚೆಗ್ನೆ ಅವರನ್ನ ಹಿಂದಿಕ್ಕಿರುವ ಜೋ ರೂಟ್, 897 ರೇಟಿಂಗ್ ಪಾಯಿಂಟ್ಸ್ಗಳೊಂದಿಗೆ ನಂ.1 ಸ್ಥಾಕಕ್ಕೇರಿದ್ದಾರೆ.
ಉಳಿದಂತೆ ಮಾರ್ನಸ್ ಲಬುಸ್ಚೆಗ್ನೆ 892 ರೇಟಿಂಗ್ ಪಾಯಿಂಟ್ಸ್ನಿಂದ 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಮತ್ತೋರ್ವ ಆಟಗಾರ ಸ್ಟೀವ್ ಸ್ಮಿತ್ 845 ರೇಟಿಂಗ್ ಪಾಯಿಂಟ್ಸ್ನಿಂದ 3ನೇ ಸ್ಥಾನ ಪಡೆದಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ 754 ರೇಟಿಂಗ್ ಪಾಯಿಂಟ್ಸ್ ಮೂಲಕ 8ನೇ ಸ್ಥಾನದಲ್ಲಿದ್ದರೆ, ಭಾರತದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ 742 ರೇಟಿಂಗ್ಸ್ನೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.
ಅಗ್ರಸ್ಥಾನದಲ್ಲಿ ಅಶ್ವಿನ್-ಬುಮ್ರ:
ಇನ್ನು ಐಸಿಸಿ ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ಯಾಟ್ ಕಮ್ಮಿನ್ಸ್ ನಂ.1 ಸ್ಥಾನದಲ್ಲಿದ್ದರೆ. ಟೀಂ ಇಂಡಿಯಾದ ಆರ್. ಅಶ್ವಿನ್ ಹಾಗೂ ಜಸ್ಪ್ರೀತ್ ಬುಮ್ರ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಜಡೇಜಾ ನಂ.1 ಆಲ್ರೌಂಡರ್:
ಟೆಸ್ಟ್ ಕ್ರಿಕೆಟ್ನ ಆಲ್ರೌಂಡರ್ಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ಆಟಗಾರರು ಪ್ರಾಬಲ್ಯ ಮೆರೆದಿದ್ದಾರೆ. ಭಾರತದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ 385 ರೇಟಿಂಗ್ ಪಾಯಿಂಟ್ಸ್ನಿಂದ ನಂ.1 ಸ್ಥಾನ ಪಡೆದಿದ್ದರೆ, ಆರ್. ಅಶ್ವಿನ್ 341 ಪಾಯಿಂಟ್ಸ್ನಿಂದ 2ನೇ ಸ್ಥಾನದಲ್ಲಿದ್ದಾರೆ.