ಪುಣೆಯಲ್ಲಿ ಚೆನ್ನೈ ಮತ್ತು ಬೆಂಗಳೂರು ನಡುವೆ ನಡೆದ ಐಪಿಎಲ್ ಪಂದ್ಯದ ವೇಳೆ ಕುತೂಹಲಕಾರಿ ಸಂಗತಿಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಚೆನ್ನೈ ಇನ್ನಿಂಗ್ಸ್ ವೇಳೆ ಜೋಡಿಯೊಂದು ಎಲ್ಲರ ಹೃದಯ ಗೆದ್ದಿತು.
Smart girl proposing an RCB fan. If he can stay loyal to RCB, he can definitely stay loyal to his partner 😉 Well done and a good day to propose 😄 #RCBvCSK #IPL2022 pic.twitter.com/e4p4uTUaji
— Wasim Jaffer (@WasimJaffer14) May 4, 2022
ವಾಸ್ತವವಾಗಿ ಅದು ಸಂಭವಿಸಿದೆ, ಪಂದ್ಯದ ಸಮಯದಲ್ಲಿ, ಒಬ್ಬ ಹುಡುಗಿ ತನ್ನ ಗೆಳೆಯನಿಗೆ ಮೊಣಕಾಲಿನ ಮೇಲೆ ಕುಳಿತು ಪ್ರಪೋಸ್ ಮಾಡಿದಳು. ಹುಡುಗನೂ ತನ್ನ ಗೆಳತಿಯನ್ನು ಅಪ್ಪಿಕೊಂಡು ಉಂಗುರ ತೊಡಿಸಿ ಪ್ರಪೋಸಲ್ ಒಪ್ಪಿಕೊಂಡ. ಚೆನ್ನೈ ಇನಿಂಗ್ಸ್‌ನ 11ನೇ ಓವರ್‌ನಲ್ಲಿ ಈ ಜೋಡಿಯನ್ನು ಟಿವಿ ಪರದೆಯ ಮೇಲೆ ತೋರಿಸಲಾಯಿತು.
https://twitter.com/addicric/status/1521894921547833345?s=20&t=TPpBgTqJBIicLLbBG5ZYRg
ಅಲ್ಲಿದ್ದ ಸಭಿಕರು ಚಪ್ಪಾಳೆ ತಟ್ಟಿ ಇಬ್ಬರನ್ನೂ ಅಭಿನಂದಿಸಿದರು. ಈ ವಿಶಿಷ್ಟ ಪ್ರಸ್ತಾಪವನ್ನು ಮೈದಾನದಲ್ಲಿ ದೊಡ್ಡ ಪರದೆಯ ಮೇಲೆ ನೇರಪ್ರಸಾರ ಮಾಡಲಾಯಿತು. ಇದೀಗ ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಕೂಡ ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಹುಡುಗ ಬೆಂಗಳೂರು ತಂಡದ ಜೆರ್ಸಿ ಧರಿಸಿದ್ದು, ಹುಡುಗಿ ಕೂಡ ಕೆಂಪು ಡ್ರೆಸ್ ತೊಟ್ಟಿದ್ದಳು. ಇಬ್ಬರೂ RCB ಅಭಿಮಾನಿಗಳಾಗಿದ್ದರು.
Omg! Cherry proposed 🥺❤️
Congratulations @deepak_chahar9#DeepakChahar #CSK #IPL2O21 pic.twitter.com/JCQheAL4GU— Kasturi (@missgeminita) October 7, 2021
ಐಪಿಎಲ್ 2021 ರಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವೇಗದ ಬೌಲರ್ ದೀಪಕ್ ಚಹಾರ್ ಅವರು ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ ಜಯ ಭಾರದ್ವಾಜ್ ಅವರಿಗೆ ಪ್ರಪೋಸ್ ಮಾಡಿದ್ದರು. ಸ್ಟ್ಯಾಂಡ್‌ನಲ್ಲಿ ಎಲ್ಲರ ಮುಂದೆ ಜಯ ಅವರಿಗೆ ರಿಂಗ್ ನೀಡಿದ್ದರು. ದೀಪಕ್ ಮತ್ತು ಜಯಾ ಬಹಳ ದಿನಗಳಿಂದ ಸಂಬಂಧ ಹೊಂದಿದ್ದರು.
ಈ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ ಐಪಿಎಲ್ 2022 ರ 49 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ಅನ್ನು 13 ರನ್‌ಗಳಿಂದ ಸೋಲಿಸಿತು. CSK 174 ರನ್‌ಗಳ ಗುರಿಯನ್ನು ಬೆನ್ನಟ್ಟಿ ಕೇವಲ 160/8 ಸ್ಕೋರ್ ಮಾಡಲು ಶಕ್ತವಾಯಿತು.
ಸತತ ಮೂರು ಸೋಲಿನ ನಂತರ ಬೆಂಗಳೂರು ತಂಡಕ್ಕೆ ಇದು ಮೊದಲ ಜಯ. ಟೂರ್ನಿಯಲ್ಲಿ ಆರ್‌ಸಿಬಿ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದ್ದರೆ, 5ರಲ್ಲಿ ಸೋತಿದೆ.