ಭರ್ಜರಿ ಬ್ಯಾಟಿಂಗ್ ಮೂಲಕ ನ್ಯೂಜಿ಼ಲೆಂಡ್ ತಂಡದ ಹೆಚ್ಚಿಸಿರುವ ಡೆರಿಲ್ ಮಿಚೆಲ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಮೂರು ಶತಕಗಳನ್ನು ಸಿಡಿಸುವ ಮೂಲಕ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ ನ್ಯೂಜಿ಼ಲೆಂಡ್ನ ಮೊದಲ ಆಟಗಾರ ಎನಿಸಿದ್ದಾರೆ. ಪ್ರಸಕ್ತ ಇಂಗ್ಲೆಂಡ್ ಪ್ರವಾಸದಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಡೆರಿಲ್ ಮಿಚೆಲ್, ಶ್ರೇಷ್ಠ ಬ್ಯಾಟಿಂಗ್ನಿಂದ ಕಿವೀಸ್ ತಂಡಕ್ಕೆ ಆಸರೆಯಾಗಿದ್ದಾರೆ. ಸರಣಿಯಲ್ಲಿ ಜವಾಬ್ದಾರಿ ಬ್ಯಾಟಿಂಗ್ ಮೂಲಕ ಕಠಿಣ ಸಂದರ್ಭಗಳಲ್ಲಿ ತಂಡದ ಕೈಹಿಡಿದಿರುವ ಮಿಚೆಲ್, ನ್ಯೂಜಿ಼ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲ ಹೆಚ್ಚಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ನ 2ನೇ ದಿನದಂದು ಶತಕ ಸಿಡಿಸಿದ ಡೆರಿಲ್ ಮಿಚೆಲ್, ಪ್ರಸಕ್ತ ಸರಣಿಯಲ್ಲಿ ಸತತ ಮೂರನೇ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 4ನೇ ಶತಕ ಸಿಡಿಸಿದರು.
123 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ವೇಳೆ ಕಣಕ್ಕಿಳಿದ ಮಿಚೆಲ್, ಜವಾಬ್ದಾರಿಯ ಆಟದ ಮೂಲಕ ತಂಡಕ್ಕೆ ಆಸರೆಯಾದರು. ಉತ್ತಮ ಬ್ಯಾಟಿಂಗ್ನಿಂದ 109 ರನ್ಗಳಿಸಿದ ಬಲಗೈ ಬ್ಯಾಟ್ಸ್ಮನ್, ತಂಡದ ಮೊತ್ತ 300ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಸರಣಿಯಲ್ಲಿ ಆಡಿರುವ 3 ಪಂದ್ಯಗಳಲ್ಲೂ ಮಿಂಚಿರುವ ಮಿಚೆಲ್, 5 ಇನ್ನಿಂಗ್ಸ್ಗಳಲ್ಲಿ 120.25ರ ಸರಾಸರಿಯಲ್ಲಿ 482 ರನ್ಗಳಿಸಿದ್ದು, ಇವರ ಈ ಇದರಲ್ಲಿ ಸತತ ಮೂರು ಶತಕಗಳನ್ನು ಸಿಡಿಸುವ ಮೂಲಕ ಡೆರಿಲ್ ಮಿಚೆಲ್ ಹೊಸದೊಂದು ದಾಖಲೆ ಬರೆದಿದ್ದಾರೆ. 190 ರನ್ಗಳು ಮಿಚೆಲ್ ಅವರು ಸಿಡಿಸಿರುವ ಗರಿಷ್ಠ ಸ್ಕೋರ್ ಆಗಿದೆ.
ನ್ಯೂಜಿ಼ಲೆಂಡ್ ಪರ ಟೆಸ್ಟ್ ಸರಣಿಯಲ್ಲಿ ಸತತ ಶತಕಗಳು:
ಆಂಡ್ರ್ಯೂ ಜೋನ್ಸ್ v ಶ್ರೀಲಂಕಾ(1991)
ರಾಸ್ ಟೇಲರ್ v ವೆಸ್ಟ್ ಇಂಡೀಸ್(2013
ಡೆರಿಲ್ ಮಿಚೆಲ್ v ಇಂಗ್ಲೆಂಡ್(2022)