ದೆಹಲಿ ದಬಾಂಗ್ ಕೆ.ಸಿ ತಂಡ ಹಾಗೂ ಬೆಂಗಳೂರು ಬುಲ್ಸ್ ತಂಡಗಳ ನಡುವೆ ನಡೆದ ಪ್ರೊ ಕಬಡ್ಡಿ ಪಂದ್ಯಾವಳಿಯ 93 ನೇ ಲೀಗ್ ಪಂದ್ಯದಲ್ಲಿ ಟೈ ನಲ್ಲಿ ಅಂತ್ಯಗೊಂಡಿದೆ.
ಉಭಯ ತಂಡಗಳು ತಲಾ 36 ಅಂಕಗಳನ್ನು ಗಳಿಸಿದವು. ವಿರಾಮದ ನಂತರ ಉತ್ತಮ ಮುನ್ನಡೆ ಸಾಧಿಸಿದ್ದ ಬೆಂಗಳೂರು ಬುಲ್ಸ್ ತಂಡ ಅಂತ್ಯದಲ್ಲಿ ಎಡವಿ ಜಯ ಸಾಧಿಸಬಹುದಾಗಿದ್ದ ಪಂದ್ಯವನ್ನು ಟೈ ಮಾಡಿಕೊಂಡಿತು. ವಿರಾಮದ ವೇಳೆಗೆ ದೆಹಲಿ ದಬಾಂಗ್ ಕೆ.ಸಿ ತಂಡ ನಾಲ್ಕು ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ದೆಹಲಿ ದಬಾಂಗ್ ಕೆ.ಸಿ ತಂಡ 18 ಹಾಗೂ ಬೆಂಗಳೂರು ಬುಲ್ಸ್ ತಂಡ 14 ಅಂಕ ಗಳಿಸಿತ್ತು.
ಒಟ್ಟಾರೆ ಪಂದ್ಯದಲ್ಲಿ ದಬಾಂಗ್ 40 ಬಾರಿ ದಾಳಿ ನಡೆಸಿ 17 ಅಂಕ ಕಲೆ ಹಾಕಿದರೆ, ಬುಲ್ಸ್ ಎಷ್ಟೇ ಪ್ರಯತ್ನದಲ್ಲಿ 18 ಅಂಕ ಸೇರಿಸಿತು. ದಬಾಂಗ್ ದೆಹಲಿ ತಂಡ ಟ್ಯಾಕಲ್ ನಲ್ಲಿ ಅಮೋಘ ಪ್ರದರ್ಶನ ನೀಡಿತು. ದಬಾಂಗ್ 26 ಬಾರಿ ಎದುರಾಳಿ ಆಟಗಾರರನ್ನು ಹಿಡಿಯುವ ಯತ್ನದಲ್ಲಿ 11 ಬಾರಿ ಯಶ ಕಂಡಿತು. ಬುಲ್ಸ್ 24 ಯತ್ನದಲ್ಲಿ 9 ಅಂಕ ಸೇರಿಸಿತು.
ಬೆಂಗಳೂರು ತಂಡದ ಸ್ಟಾರ್ ಆಟಗಾರ ಪವನ್ ಸೆಹ್ರಾವತ್ 24 ಬಾರಿ ದಾಳಿಯಲ್ಲಿ ನಡೆಸಿ 11 ಟಚ್ ಪಾಯಿಂಟ್ ಹಾಗೂ 5 ಬೋನಸ್ ಮತ್ತು ಒಂದು ಟ್ಯಾಕಲ್ ಅಂಕ ಸೇರಿಸಿತು. ದಬಾಂಗ್ ತಂಡದ ಪರ ನವೀನ್ ಏಕ್ಸ್ ಪ್ರೆಸ್ 20 ಬಾರಿ ಎದುರಾಳಿ ಕೋರ್ಟ್ ಗೆ ಎಂಟ್ರಿ ನೀಡಿ 13 ಅಂಕ ಸೇರಿಸಿತು. ಈ ಗೆಲುವಿನೊಂದಿಗೆ ದೆಹಲಿ 17 ಪಂದ್ಯಗಳಿಂದ 57 ಅಂಕ ಸೇರಿಸಿತು. ಬುಲ್ಸ್ 18 ಯತ್ನದಲ್ಲಿ 54 ಅಂಕ ಪೇರಿಸಿತು.